ಬೆಂಗಳೂರು:ಒಡಿಶಾದ ಬಾಲಾಸೋರ್ ಜಿಲ್ಲೆ ಬಹನಾಗ ಬಜಾರ್ ರೈಲು ನಿಲ್ದಾಣದಲ್ಲಿ ಸಂಭವಿಸಿದ ಭೀಕರ ರೈಲು ದುರಂತದಲ್ಲಿ ಕರ್ನಾಟಕದ ಯಾವುದೇ ಪ್ರಯಾಣಿಕರ ಸಾವು-ನೋವು ಸಂಭವಿಸಿಲ್ಲ ಎನ್ನುವುದು ದೃಢಪಟ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆಯಂತೆ ತುರ್ತು ನೆರವಿಗೆ ರಾಜ್ಯದಿಂದ ತೆರಳಿರುವ ಕಾರ್ವಿುಕ ಸಚಿವ ಸಂತೋಷ್ ಲಾಡ್ ನೇತೃತ್ವದ ತಂಡ ಶನಿವಾರ ಮತ್ತು ಭಾನುವಾರ ನಿರಂತರ ಕಾರ್ಯಾಚರಣೆ ನಡೆಸಿದೆ.
ತಂಡವು ಭದ್ರಕ್ ಜಿಲ್ಲಾ ಆಸ್ಪತ್ರೆ, ಬಾಲಾಸೋರ್ ತಾತ್ಕಾಲಿಕ ಶವಾಗಾರ, ಫಕೀರ್ ಮೋಹನ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಬಾಲಾಸೋರ್ ಜಿಲ್ಲಾ ಆಸ್ಪತ್ರೆಯ ಸೋರೋ ಬ್ಲಾಕ್ ಆರೋಗ್ಯ ಕೇಂದ್ರ, ಕಟಕ್ ಎಸ್​ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳಿಗೆ ಶನಿವಾರ ಭೇಟಿ ನೀಡಿದೆ. ನಂತರ ಒಡಿಶಾ ಉನ್ನತಾಧಿಕಾರಿಗಳ ಜತೆಗೆ ರ್ಚಚಿಸಿದ ನಂತರ ಕರ್ನಾಟಕದ ಪ್ರಯಾಣಿಕರು ಸುರಕ್ಷಿತವೆಂದು ಖಚಿತಪಡಿಸಿಕೊಂಡ ಸಂತೋಷ್ ಲಾಡ್, ಮಾಹಿತಿ ನೀಡಿದ್ದಾರೆ. ದುರಂತ ಸಂಭವಿಸಿದ ಸ್ಥಳದಲ್ಲಿ ಬಿಡಾರ ಹೂಡಿದ್ದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಜತೆಗೂ ಸಂತೋಷ್ ಲಾಡ್ ವಿಚಾರ ನಡೆಸಿದ್ದಾರೆ.
ಒಡಿಶಾ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಉನ್ನತಾಧಿಕಾರಿಗಳ ಜತೆಗೆ ಮಾತುಕತೆ ನಡೆಸಿದ ಸಚಿವ ಲಾಡ್, ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಒಡಿಶಾ ಸರ್ಕಾರದ ಬೆಂಬಲಕ್ಕೆ ಕರ್ನಾಟಕ ಸರ್ಕಾರ ನಿಲ್ಲಲಿದೆ. ವೈದ್ಯಕೀಯ ನೆರವು ಸಹಿತ ಸಾಧ್ಯವಿರುವ ಎಲ್ಲ ಸಹಾಯ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿರುವುದನ್ನು ಒಡಿಶಾ ಮುಖ್ಯ ಕಾರ್ಯದರ್ಶಿ ಗಮನಕ್ಕೆ ತಂದಿದ್ದಾರೆ. ಲಾಡ್ ನೇತೃತ್ವದ ತಂಡದಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್, ವಕ್ತಾರ ಅನಿಲ್ ಕುಮಾರ್ ತಡ್ಕಲ್, ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ)ಯ ಎಸ್​ಎಸ್​ಎಂ ಗವಸ್ಕರ್ ಮತ್ತು ಸಿದ್ದನಗೌಡ ಇದ್ದಾರೆ.

ಜಾನಪದ ಕಲಾ ತಂಡಕ್ಕೆ ಸಹಾಯ:ಒಡಿಶಾದ ಪುರಿಯಲ್ಲಿ ಆಯೋಜಿಸಿದ್ದ ಜಾನಪದ ಕಲಾ ಮೇಳದಲ್ಲಿ ಪಾಲ್ಗೊಳ್ಳಲು ತೆರಳಿದ್ದ 17 ಜನ ಕನ್ನಡಿಗರ ಕಲಾ ತಂಡವು ರಾಜ್ಯಕ್ಕೆ ಮರಳಲು ಸಂತೋಷ್ ಲಾಡ್ ತಂಡ ಸಹಾಯ ಮಾಡಿದೆ. ದುರ್ಘಟನೆ ಕಾರಣಕ್ಕೆ ರೈಲು, ಬಸ್ ಸಂಚಾರ ಸೇವೆಯಿಲ್ಲದೆ ಈ ತಂಡದ ಸದಸ್ಯರಿಗೆ ವಿಮಾನದ ಕೆಟ್ ವ್ಯವಸ್ಥೆ ಮಾಡಿದ ಲಾಡ್, ಮೂರು ಪ್ರತ್ಯೇಕ ವಿಮಾನಗಳಲ್ಲಿ ಬೆಂಗಳೂರಿಗೆ ಭಾನುವಾರವೇ ಪ್ರಯಾಣ ಬೆಳೆಸಲು ಅವಕಾಶ ಕಲ್ಪಿಸಿದ್ದಾರೆ. ಕೋಲ್ಕತ್ತ ದಲ್ಲಿ ಸಿಲುಕಿದ್ದ ಕನ್ನಡಿಗರ ವಾಲಿಬಾಲ್ ಟೀಮ್ೂ ಲಾಡ್ ಇದೇ ರೀತಿ ನೆರವಾಗಿ, 32 ಆಟಗಾರರು ಏಕಕಾಲಕ್ಕೆ ಬೆಂಗಳೂರಿಗೆ ಭಾನುವಾರ ಮರಳಲು ಸಾಧ್ಯವಾಗಿದೆ.
ಗುಂಡ್ಲುಪೇಟೆಯ ಇಬ್ಬರು ಪಾರು:ತ್ರಿವಳಿ ರೈಲು ಅಪಘಾತದಲ್ಲಿ ಗುಂಡ್ಲುಪೇಟೆ ತಾಲೂಕಿನ ಇಬ್ಬರು ಯುವಕರು ಅಪಾಯದಿಂದ ಪಾರಾಗಿದ್ದಾರೆ. ಅಪಘಾತಕ್ಕೀಡಾದ ರೈಲಿನಲ್ಲಿ ಬೊಮ್ಮಲಾಪುರ ಗ್ರಾಮದ ಮಹೇಶ್ ಹಾಗೂ ಪವನ್ ಸೇನಾ ಪರೀಕ್ಷೆಗೆಂದು ತೆರಳಿದ್ದರು. ಅದೃಷ್ಟವಶಾತ್ ಘಟನೆಯಲ್ಲಿ ಇಬ್ಬರಿಗೂ ಯಾವುದೇ ಗಾಯವಾಗಿಲ್ಲ. ರೈಲುಗಳು ರದ್ದಾಗಿದ್ದು, ಬೇರೆ ಮಾರ್ಗದಲ್ಲಿ ರಾಜ್ಯ ತಲುಪಬೇಕಿದೆ. ಶಾಸಕ ಗಣೇಶ್​ಪ್ರಸಾದ್ ಹಾಗೂ ಸಚಿವ ಸಂತೋಷ್ ಲಾಡ್ ತಮಗೆ ನೆರವಾಗುವ ಮೂಲಕ ಸಹಾಯ ಮಾಡಿದ್ದಾರೆ ಎಂದು ಯುವಕರು ತಿಳಿಸಿದ್ದಾರೆ.
ಸಿದ್ದರಾಮಯ್ಯ ಕುರಿತು ಹನಿಗವಿಯ ವರ್ಷದ ಹಿಂದಿನ ತಮಾಷೆ ನಿಜವಾಯಿತು!

ಮುಂದಿನ ಒಂದು ವರ್ಷದಲ್ಲಿನ ಉಚಿತ ಚಿಕಿತ್ಸೆಗೆಂದೇ 65 ಕೋಟಿ ರೂ. ಮೀಸಲು: ಅಮೃತ ಆಸ್ಪತ್ರೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 17 =
Remember me
