ಒಡಿಶಾ:ಬಾಲಸೋರ್‌ನಲ್ಲಿ ನಡೆದ ಭೀಕರ ರೈಲು ಅಪಘಾತದಲ್ಲಿ 288 ಮಂದಿ ಸಾವನ್ನಪ್ಪಿದ್ದಾರೆ. ದುರಂತದಲ್ಲಿ ಮಡಿದವರಿಗೆ ಮೋಕ್ಷ ಪ್ರಾಪ್ತಿಯಾಗಲೆಂದು ಬಹನಾಗಾ ಪ್ರದೇಶದಲ್ಲಿ ಸಾಮಾಜಿಕ ಕಾರ್ಯಕರ್ತರು ಸಾಮೂಹಿಕವಾಗಿ ಕೇಶ ಮುಂಡನ ಮಾಡಿಸಿಕೊಂಡು ಶ್ರದ್ದಾಂಜಲಿ ಸಲ್ಲಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
VIDEO | The locals of Bahanaga observe a mass mundan (tonsuring) programme and Dasaha (10th day) rituals to pay tribute to the victims of#OdishaTrainAccident.pic.twitter.com/Tcr0W2uEV1
— Press Trust of India (@PTI_News)June 11, 2023
ಇದನ್ನೂ ಓದಿ:ಒಡಿಶಾ ರೈಲು ದುರಂತ | ಘಟನಾ ಸ್ಥಳದಲ್ಲಿ ಮನುಷ್ಯರ ದೇಹಗಳ ಕೊಳೆತ ವಾಸನೆ! ರೈಲ್ವೆ ಇಲಾಖೆ ಹೇಳೋದೇನು?
ರೈಲು ಅಪಘಾತದಲ್ಲಿ ಮೃತಪಟ್ಟವರನ್ನು ಇರಿಸಲಾಗಿದ್ದ ಬಹನಾಗಾ ಪ್ರೌಢಶಾಲೆಯ ಆವರಣದ ಬಳಿ ಮೂರು ದಿನಗಳ ಕಾಲ ನಡೆದ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತರು ಹಾಗೂ ಆಧ್ಯಾತ್ಮಿಕ ಸಂಘಟನೆಗಳ ಸದಸ್ಯರು ಭಾಗವಹಿಸಿದ್ದರು. ಅಂತೆಯೇ ಹತ್ತನೇ ದಿನದ ವಿಧಿವಿಧಾನಗಳನ್ನು ಪೂರ್ಣಗೊಳಿಸಲಾಗಿದೆ.
11ನೇ ದಿನವಾದ ನಾಳೆ ಬಿಸ್ವ ಶಾಂತಿ ಮಹಾ ಯಜ್ಞ, ನಾಮ ಸಂಕೀರ್ತನೆ, ಅಖಂಡ ಗಾಯತ್ರಿ ಮಂತ್ರ ಪಠಣ ನಡೆಯಲಿದ್ದು, ಮಂಗಳವಾರ ಸತ್ಸಂಗ ಹಾಗೂ ಕ್ಯಾಂಡಲ್ ಲೈಟ್ ಮಾರ್ಚ್ ಏರ್ಪಡಿಸಲಾಗಿದೆ ಎಂದು ಸಂಘಟನಾ ಸಮಿತಿ ಸದಸ್ಯ ಜಯಕ್ರುಷ್ಣ ಸಾರಂಡಿ ತಿಳಿಸಿರುವುದು ವರದಿಯಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 2 =
Remember me
