ಒಡಿಶಾ:ಬಾಲಸೋರ್‌ನಲ್ಲಿ ನಡೆದ ಭೀಕರ ರೈಲು ಅಪಘಾತದಲ್ಲಿ 288 ಮಂದಿ ಸಾವನ್ನಪ್ಪಿದ್ದಾರೆ. ಇದೀಗ ಬಹನಾಗಾ ಬಜಾರ್ ರೈಲು ನಿಲ್ದಾಣದ ಬಳಿ ಘಟನಾ ಸ್ಥಳದಿಂದ ಮೃತದೇಹದ ದುರ್ವಾಸನೆ ಬರುತ್ತಿರುವುದಾಗಿ ಸ್ಥಳೀಯ ನಿವಾಸಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
ಇದೀಗ ಸ್ಥಳೀಯರ ಗೊಂದಲ ಬಗೆಹರಿಸುವ ಕೆಲಸಕ್ಕೆ ರೈಲ್ವೆ ಅಧಿಕಾರಿಗಳು ಮುಂದಾಗಿದ್ದು, ಸ್ಪಷ್ಟನೆಯನ್ನೂ ನೀಡಿದ್ದಾರೆ. ‘ಕೊಳೆತ ಮೊಟ್ಟೆಗಳಿಗಳಿಂದ ದುರ್ವಾಸನೆ ಹರಡಿದೆಯೇ ಹೊರತು, ಮೃತದೇಹದಿಂದ ಅಲ್ಲ’ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಕೇರಳದಿಂದ ಕಾಲ್ನಡಿಗೆಯಲ್ಲೇ ಹಜ್ ಯಾತ್ರೆ ಕೈಗೊಂಡ ಯುವಕ; ಈತ ಕ್ರಮಿಸಿದ್ದು 8,600 ಕಿ.ಮೀ ದೂರ!
ಅಪಘಾತ ನಡೆದ ಸ್ಥಳದಲ್ಲಿ ಮೃತದೇಹದ ದುರ್ವಾಸನೆ ಬರುತ್ತಿಲ್ಲ. ಈ ಬಗ್ಗೆ ದೂರು ಬಂದೊಡನೆ ಪರಿಶೀಲನೆ ನಡೆಸಿದ್ದೇವೆ. ನಾವು ಎರಡು ಬಾರಿ NDRFನಿಂದ ಸೈಟ್ ಕ್ಲಿಯರೆನ್ಸ್ ಪಡೆದಿದ್ದೇವೆ. ಯಶವಂತಪುರ-ಹೌರಾ ಎಕ್ಸ್‌ಪ್ರೆಸ್‌ ರೈಲಿನ ಪಾರ್ಸೆಲ್ ವ್ಯಾನ್‌ನಲ್ಲಿ ಸುಮಾರು ಮೂರು ಟನ್ ಮೊಟ್ಟೆ ಸಾಗಿಸಲಾಗುತ್ತಿತ್ತು. ಇದು ಅಪಘಾತದಿಂದ ನಾಶವಾಗಿದೆ. ಸದ್ಯ ಎಲ್ಲಾ ಮೊಟ್ಟೆಗಳು ಕೊಳೆತು ಕೆಟ್ಟ ವಾಸನೆ ಸುತ್ತಲೂ ಹಬ್ಬಿದೆ. ಘಟನಾ ಸ್ಥಳದಿಂದ ಮೂರು ಟ್ರ್ಯಾಕ್ಟರ್‌ಗಳಲ್ಲಿ ಮೊಟ್ಟೆಗಳನ್ನು ಹೊರ ತೆಗೆದಿದ್ದೇವೆ ಎಂದು ಆಗ್ನೇಯ ರೈಲ್ವೆ ಸಿಪಿಆರ್‌ಒ ಆದಿತ್ಯ ಕುಮಾರ್ ಚೌಧರಿ ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಪಶ್ಚಿಮ ಬಂಗಾಳದ ಹೌರಾ ನಗರದಿಂದ ತಮಿಳುನಾಡಿನ ಚೆನ್ನೈಗೆ ತೆರಳುತ್ತಿದ್ದ ಕೊರಮಂಡಲ್​​ ಎಕ್ಸ್​ಪ್ರೆಸ್​ ರೈಲಿನ ಕೆಲವು ಬೋಗಿಗಳು ಹಳಿತಪ್ಪಿ ಪಕ್ಕದ ಹಳಿಗಳ ಮೇಲೆ ಬಿದ್ದಿತು. ಈ ವೇಳೆ ಮತ್ತೊಂದು ಕಡೆಯಿಂದ ಬರುತ್ತಿದ್ದ ಯಶವಂತಪುರ-ಹೌರ ಸೂಪರ್​ಪಾಸ್ಟ್​ ಟ್ರೈನ್​ ಹಳಿಗಳ ಮೇಲೆ ಬಿದ್ದಿದ್ದ ಕೋರಮಂಡಲ್​ ಎಕ್ಸ್​ಪ್ರೆಸ್​ ಟ್ರೈನ್​ ಬೋಗಿಗಳಿಗೆ ಡಿಕ್ಕಿ ಹೊಡೆದಿದೆ ಎಂದು ರೈಲ್ವೆ ಸಚಿವಾಲಯದ ವಕ್ತಾರ ಅಮಿತಾಬ್​ ಶರ್ಮ ಅವರು ತಿಳಿಸಿದ್ದಾರೆ.
ಇದನ್ನೂ ಓದಿ:ಸಚಿವೆ ನಿರ್ಮಲಾ ಸೀತಾರಾಮನ್ ಅಳಿಯ ಪಿಎಂಒ ಅಧಿಕಾರಿ; ಇವರಿಗಿರುವ ಮಹತ್ವದ ಜವಾಬ್ದಾರಿ ಏನು? ಇಲ್ಲಿದೆ ಮಾಹಿತಿ…
ಅಪಘಾತದಲ್ಲಿ ಮೃತಪಟ್ಟವರಿಗೆ ತಲಾ 10 ಲಕ್ಷ ರೂ., ಗಂಭೀರವಾಗಿ ಗಾಯಗೊಂಡವರಿಗೆ 2 ಲಕ್ಷ ರೂ. ಹಾಗೂ ಸಣ್ಣಪುಟ್ಟ ಗಾಯಗಳಾದವರಿಗೆ 50,000 ಪರಿಹಾರ ನೀಡುವುದಾಗಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಘೋಷಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 1 =
Remember me
