ಒಡಿಶಾ:ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ಆಘಾತಕಾರಿ ರೈಲು ದುರಂತದಿಂದಾಗಿ ಹಲವಾರು ಕುಟುಂಬಗಳು ಬೀದಿಗೆ ಬಿದ್ದಿವೆ. ಈ ದುರಂತದಲ್ಲಿ ಮಡಿದ ಹಲವಾರು ಜನರ ನೋವಿನ ಕತೆಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಈ ನಡುವೆ ತಂದೆಯೊಬ್ಬ ತನ್ನ ಮಗನನ್ನು ಶವಾಗಾರದಿಂದ ಹೊರತಂದು ಬದುಕಿಸಿರುವ ವಿಚಿತ್ರ ಘಟನೆ ನಡೆದಿದೆ.
ಹೌರಾ ನಿವಾಸಿ ಹೆಲರಾಮ್​ ಎಂಬಾತ​ ತನ್ನ ಮಗ ಬಿಸ್ವಜಿತ್​ ಮಲ್ಲಿಕ್​ನನ್ನು ಶಾಲಿಮಾರ್​ನಲ್ಲಿ ರೈಲು ಹತ್ತಿಸಿ ಮನೆಗೆ ವಾಪಸ್ಸಾಗಿದ್ದ. ಮನೆಗೆ ಬಂದ ಕೆಲಹೊತ್ತಿನ ಬಳಿಕ ರೈಲು ಅಪಘಾತದ ಸುದ್ದಿಯನ್ನು ತಿಳಿದ ಹೆಲರಾಮ್​ ತನ್ನ ಮಗನಿಗೆ ಕರೆ ಮಾಡಿದ್ದ.​
ಇದನ್ನೂ ಓದಿ:ಎಲ್ಲ ಮಹಿಳೆಯರಿಗೂ ಸರ್ಕಾರಿ ಬಸ್​ನಲ್ಲಿ ಉಚಿತ ಪ್ರಯಾಣ; ಆದೇಶವೂ ಜಾರಿ, ನಿಯಮಗಳು ಏನೇನು?
ಬಿಸ್ವಜಿತ್​​​ ಕರೆಯನ್ನು ಸ್ವೀಕರಿಸಿ ನಾನು ಭೀಕರವಾಗಿ ಗಾಯಗೊಂಡಿದ್ದೇನೆ ಎಂದಷ್ಟೇ ಹೇಳಿದ್ದ. ಈ ಕಡೆಯಿಂದ ಹೆಲರಾಮ್​ ತನ್ನ ಮಗನ ಜತೆಗೆ ಹೆಚ್ಚು ಮಾತನಾಡಲು ಪ್ರಯತ್ನಿಸಿದರೂ ಅದು ಸಾಧ್ಯವಾಗಿರಲಿಲ್ಲ. ಕೂಡಲೇ ಹೆಲರಾಮ್​ ಖಾಸಗಿ ಆ್ಯಂಬುಲೆನ್ಸ್​​ ಬುಕ್​ ಮಾಡಿ 230 ಕಿ.ಮೀ. ದೂರದಲ್ಲಿರುವ ಘಟನಾ ಸ್ಥಳಕ್ಕೆ ಹೋಗಿ ಮಗನನ್ನು ಹುಡುಕಾಡಿದ್ದ.
ಆದರೆ, ಮಗನು ಗಾಯಾಳುಗಳ ನಡುವೆ ಸಿಗದಿದ್ದಾಗ ದಿಕ್ಕುತೋಚದ ಹೆಲರಾಮ್​ ಅಧಿಕಾರಿಗಳಿಗೆ ಮಗನ ಕುರಿತು ಹೇಳಿದ್ದಾನೆ. ಅದಕ್ಕೆ ಉತ್ತರವಾಗಿ ಅವರು, ಮಗನನ್ನು ಶವಾಗಾರದಲ್ಲಿ ಹುಡುಕುವಂತೆ ಹೇಳಿದ್ದಾರೆ. ಕೂಡಲೇ ತಾತ್ಕಾಲಿಕ ಶವಾಗಾರಕ್ಕೆ ತೆರಳಿದ ಹೆಲರಾಮ್​ ಅಲ್ಲಿನ ಸಿಬ್ಬಂದಿಗೆ ನಡೆದ ಘಟನೆ ಬಗ್ಗೆ ತಿಳಿಸಿ ಒಳ ನಡೆದು ಮಗನಿಗಾಗಿ ತಡಕಾಡಿದ್ದಾನೆ.
ನೂರಾರು ಶವಗಳ ನಡುವೆ ಮಗನನ್ನು ಹುಡುಕುವ ವೇಳೆ ಮೂಲೆಯೊಂದರಲ್ಲಿ ಯಾರದ್ದೋ ಕೈ ಅಲುಗಾಡಿದಂತೆ ಹೆಲರಾಮ್​ನಿಗೆ ಭಾಸವಾಗಿದೆ. ತಕ್ಷಣವೇ ಹೆಲರಾಮ್​ ಆ ಕಡೆ ಹೋಗಿದ್ದು, ಮಗನ ಕೈಯನ್ನು ನೋಡಿದ್ದಾನೆ.
ಕೂಡಲೇ ಹೆಲರಾಮ್​, ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಮಗನ ಬಗ್ಗೆ ಅಲ್ಲಿನ ಸಿಬ್ಬಂದಿಗೆ ತಿಳಿಸಿ ತಾನು ಆಗಮಿಸಿದ ಆ್ಯಂಬುಲೆನ್ಸ್​ ಮೂಲಕ ಮಗನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾನೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬಿಸ್ವಜಿತ್​ನನ್ನು ಕೋಲ್ಕತಾಗೆ ರವಾನಿಸಿದ್ದು ಅಲ್ಲಿ​ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.(ಏಜೆನ್ಸೀಸ್​​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − two =
Remember me
