ಮಯೂರ್​ಭಂಜ್​:ವಲಸೆ ಕಾರ್ಮಿಕರ ಕಣ್ಣೀರ ಕತೆಗಳಿಗೆ ಕೊನೆಯೇ ಇಲ್ಲವೇನೋ? ರಸ್ತೆಯಲ್ಲಿಯೇ ಮಗುವಿಗೆ ಜನ್ಮ ನೀಡಿ, ಆ ಮಗುವನ್ನು ಹೊತ್ತುಕೊಂಡು 160 ಕಿಮೀ ನಡೆದಿದ್ದಳೊಬ್ಬಳು ಮಹಾತಾಯಿ. ಇದೀಗ ತನ್ನಿಬ್ಬರು ಮಕ್ಕಳನ್ನು ಬುಟ್ಟಿಯಲ್ಲಿ ಹೊತ್ತುಕೊಂಡು 160 ಕಿ.ಮೀ. ನಡೆದು ಬುಡಕಟ್ಟು ಜನಾಂಗದ ವ್ಯಕ್ತಿಯೊಬ್ಬ ಊರು ಸೇರಿದ್ದಾನೆ.
ಓಡಿಶಾದ ಮಯೂರ್​ಭಂಜ್​ ಜಿಲ್ಲೆಯ ಮೊರಾದಾ ಬ್ಲಾಕ್​ನ ಬಲಾಡಿಯಾ ಗ್ರಾಮದ ರುಪಯಾ ಟುಡು ಎಂಬಾತ ಜಾಜ್​ಪುರ್​ ಜಿಲ್ಲೆಯ ಪಾನಿಕೊಯ್ಲಿ ಗ್ರಾಮದ ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡಲುಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ತೆರಳಿದ್ದ.
ಇದನ್ನೂ ಓದಿ;ಹವಳ ಸಂರಕ್ಷಿಸಲು ಬಂದವರು ದ್ವೀಪದಲ್ಲಿಯೇ ಬಂಧಿಗಳಾದರು…
ಲಾಕ್​ಡೌನ್​ ಘೋಷಣೆಯಾದ ಬಳಿಕ ಕಾರ್ಖಾನೆ ಬಂದ್​ ಆಯಿತು. ಮಾಲೀಕ ಸಂಬಳ ಕೊಡಲಿಲ್ಲ. ಅಲ್ಲಿರುವುದು ಊಟಕ್ಕೂ ತತ್ವಾರವಾಗಿ ಪರಿಣಮಿಸಿದ ಕಾರಣ, ತನ್ನೂರಿಗೆ ಹೊರಡಲು ಅಣಿಯಾದ. ಕಾಸಿಲ್ಲದ ಕಾರಣ ಕಾಲ್ನಡಿಗೆಯಲ್ಲಿ ಸಾಗುವುದು ಆ ಕುಟುಂಬಕ್ಕೆ ಅನಿವಾರ್ಯವಾಗಿತ್ತು.
ಆರು ವರ್ಷದ ಮಗಳು ತಾಯಿಯೊಂದಿಗೆ ಹೇಗೋ ಹೆಜ್ಜೆ ಹಾಕಬಲ್ಲಳು, ಆದರೆ ನಾಲ್ಕು ವರ್ಷ ಹಾಗೂ ಎರಡೂವರೆ ವರ್ಷದ ಇಬ್ಬರು ಗಂಡು ಮಕ್ಕಳನ್ನು ಒಟ್ಟಿಗೆ ಎತ್ತಿಕೊಂಡು ಹೋಗುವುದು ಸಾಧ್ಯವಿರಲಿಲ್ಲ. ಹೀಗಾಗಿ ಬಿದಿರಿನ ಗಳಕ್ಕೆ ಎರಡು ಬುಟ್ಟಿಗಳನ್ನು ಕಟ್ಟಿಕೊಂಡು ಇಬ್ಬರು ಮಕ್ಕಳನ್ನು ಅದರಲ್ಲಿ ಕೂರಿಸಿಕೊಂಡು 160 ಕಿ.ಮೀ. ದೂರದ ಊರು ತಲುಪಿದ. ಇದಕ್ಕಾಗಿ ಆ ಕುಟುಂಬ ಬರೋಬ್ಬರಿ ಏಳು ದಿನ ನಡೆಯಬೇಕಾಯಿತು.
ಇದನ್ನೂ ಓದಿ;ಅತ್ತು ಕರೆದು ಪಡೆದ ಕರೊನಾ ಹಣ ಸೇನೆಗೆ ಬಳಸುತ್ತಿರುವ ಪಾಕಿಸ್ತಾನ
ಊರಿಗೆ ಬಂದಾಗ ಮತ್ತೊಂದು ಕಷ್ಟ ಎದುರಾಯಿತು. ಬೇರೆ ಕಡೆಯಿಂದ ಬಂದವರು ಕಡ್ಡಾಯವಾಗಿ 14 ದಿನಗಳ ಕ್ವಾರಂಟೈನ್​ನಲ್ಲಿ ಇರಬೇಕು. ಆದರೆ ಅಲ್ಲಿ ಊಟ-ತಿಂಡಿಗೂ ವ್ಯವಸ್ಥೆ ಇರಲಿಲ್ಲ. ಇದನ್ನು ಅರಿತ ಸ್ಥಳೀಯ ಮುಖಂಡರೊಬ್ಬರು ಕ್ವಾರಂಟೈನ್​ ಕೇಂದ್ರದಲ್ಲಿದ್ದ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಿದ್ದಾರೆ.
ಲಾಕ್​ಡೌನ್​ನಿಂದಾಗಿ ಲಕ್ಷಾಂತರ ವಲಸೆ ಕಾರ್ಮಿಕರು ಕಾಲ್ನಡಿಗೆಯಲ್ಲಿ, ಸೈಕಲ್​ಗಳಲ್ಲಿ, ಅಥವಾ ಸಿಕ್ಕಸಿಕ್ಕ ವಾಹನಗಳನ್ನೇರಿ ಊರು ತಲುಪುವ ಧಾವಂತದಲ್ಲಿದ್ದಾರೆ. ಇವರ ಕಷ್ಟಕ್ಕೆ ಸ್ಪಂದಿಸುವವರೇ ಇಲ್ಲವಾಗಿದ್ದಾರೆ.
ತಂಬಾಕಿನಲ್ಲಿದೆ ಕರೊನಾ ಗುಣಪಡಿಸುವ ಶಕ್ತಿ, ಸಿಗರೇಟ್​ ಕಂಪನಿ ತಯಾರಿಸಿದೆ ಲಸಿಕೆ…!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × three =
Remember me
