ಕೇಂದ್ರಪರ:ನೆರೆಮನೆಯವರ ಜತೆಗಿನ ವಿವಾದದ ಬೆನ್ನಲ್ಲೇ ಕೆಲ ಗ್ರಾಮಸ್ಥರು ಮಹಿಳೆಯೊಬ್ಬರನ್ನು ಬೆತ್ತಲೆಗೊಳಿಸಿ, ಮೃಗೀಯವಾಗಿ ಥಳಿಸಿರುವ ಘಟನೆ ಕೇದ್ರಾಪರ ಜಿಲ್ಲೆಯ ನಿಕಿರ ಪೊಲೀಸ್​ ಠಾಣಾ ವ್ಯಾಪ್ತಿಯ ಕೊರಾ ಗ್ರಾಮದಲ್ಲಿ ನಡೆದಿದ್ದು, ಗ್ರಾಮದಲ್ಲಿ ಉದ್ವಿಘ್ನ ಸ್ಥಿತಿ ನಿರ್ಮಾಣವಾಗಿದೆ.
ಅನಾಗರಿಕರಂತೆ ಮಹಿಳೆ ಮೇಲೆ ಗ್ರಾಮಸ್ಥರು ದಾಳಿ ಮಾಡಿರುವ ದೃಶ್ಯವನ್ನು ಕೆಲ ಗ್ರಾಮಸ್ಥರು ಮೊಬೈಲ್​ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋದಲ್ಲಿ ಕೆಲವರು ಮಹಿಳೆಯನ್ನು ಎಳೆದಾಡಿ ಕರುಣೆ ಇಲ್ಲದೆ ಒದಿಯುವುದು, ಅನೇಕ ಬಾರಿ ಪಂಚ್ ಮಾಡುವುದು ಮತ್ತು ಬಿದಿರಿನಿಂದ ಥಳಿಸುವುದು ದಾಖಲಾಗಿದೆ.
​ಇದನ್ನೂ ಓದಿರಿ:ಅಪಘಾತಕ್ಕೀಡಾದವರನ್ನ ಕಾಪಾಡಲು ಓಡೋಡಿ ಬಂದವರ ಪ್ರಾಣವನ್ನೇ ಹೊತ್ತೊಯ್ದ ಜವರಾಯ!
ನೆರೆಮನೆಯವರು ಮತ್ತು ಸಂತ್ರಸ್ತೆಯ ಕುಟುಂಬ ವಿವಾದವೊಂದರಲ್ಲಿ ಸಿಲುಕಿಕೊಂಡಿದ್ದರು. ಇದೇ ವಿಚಾರವಾಗಿ ಎರಡು ಬಣಗಳ ನಡುವೆ ವಾಗ್ವಾದ ಶುರುವಾಗಿತ್ತು. ಬಳಿಕ ಇದು ತಾರಕಕ್ಕೇರಿ ತಾಳ್ಮೆ ಕಳೆದುಕೊಂಡು ಕೆಲ ಗ್ರಾಮಸ್ಥರು ಮಹಿಳೆಯನ್ನು ಬೆತ್ತಲೆಗೊಳಿಸಿ ಥಳಿಸಿದ್ದಾರೆ. ಮಹಿಳೆ ಸಹಾಯಕ್ಕಾಗಿ ಅಂಗಲಾಚಿ ಕೂಗಿದರು ಯಾರೋಬ್ಬರು ಸಹ ಮುಂದೆ ಬರದೇ ಮೂಕ ಪ್ರೇಕ್ಷಕರಂತೆ ನೋಡುತ್ತಾ ನಿಂತಿದ್ದರು.
ಇದೀಗ ಎರಡು ಬಣಗಳು ಪ್ರತ್ಯೇಕವಾಗಿ ತಮ್ಮ ದೂರುಗಳನ್ನು ದಾಖಲಿಸಿವೆ. ಅಲ್ಲದೆ, ಮಹಿಳೆ ಮೇಲಿನ ಹಲ್ಲೆ ಸಂಬಂಧವು ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.(ಏಜೆನ್ಸೀಸ್​)
ಚುನಾವಣಾ ಆಯೋಗದ ಹೆಸರಿಗೆ ಬೇರೆಯೇ ಅರ್ಥ ಕಲ್ಪಿಸಿದ ರಾಹುಲ್ ಗಾಂಧಿ !

ಜಾಲತಾಣದಲ್ಲಿ ಭಾರಿ ಸಂಚಲನ ಮೂಡಿಸಿದೆ ವಾಷಿಂಗ್ಟನ್​ ಸುಂದರ್ ಸಾಕುನಾಯಿಯ ಹೆಸರು..!

ಕಲ್ಲಂಗಡಿ ಹಣ್ಣು ತಿಂದು ಬಾಲಕರಿಬ್ಬರ ದುರ್ಮರಣ: ನಿಗೂಢ ಪ್ರಕರಣ ಬೆನ್ನತ್ತಿ ಹೋದ ಪೊಲೀಸರಿಗೆ ಕಾದಿತ್ತು ಶಾಕ್​!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 × three =
Remember me
