ಭುವನೇಶ್ವರ್​:ಮದುವೆಯಾಗುವುದಾಗಿ ನಂಬಿಸಿ ವಂಚಿಸಿ ಜೈಲು ಪಾಲಾಗಿದ್ದ ಆರೋಪಿಗೆ ಜೈಲಿನಲ್ಲೇ ಸಂತ್ರಸ್ತೆ ಜತೆ ಮದುವೆ ಮಾಡಿಸಿರುವ ಅಪರೂಪದ ಘಟನೆ ಒಡಿಶಾದಲ್ಲಿ ನಡೆದಿದೆ.
ಆರೋಪಿ ನರಸಿಂಗ್​ ದಾಸ್​ ಮತ್ತು ಸಂತ್ರಸ್ತೆ ಪೂಜಾ ದಾಸ್​ಗೆ ವೇದಿಕ ಸಂಪ್ರದಾಯದ​ ಪ್ರಕಾರ ಕಟಕ್ ಜಿಲ್ಲೆಯ ಚೌದ್ವಾರ ಸರ್ಕಲ್​ ಜೈಲಿನಲ್ಲಿ ಎರಡು ಕುಟುಂಬದ ಸಮ್ಮುಖದಲ್ಲೇ ಸಿಬ್ಬಂದಿ ಮದುವೆ ಮಾಡಿಸಿದ್ದಾರೆ.
ಆರೋಪಿ ನರಸಿಂಗ್​ ಸರ್ದಾರ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಬರುವ ಸಂಕತಾರಾಸ್ ಗ್ರಾಮದ ನಿವಾಸಿ. ಈತ ಅದೇ ಗ್ರಾಮದ ಪೂಜಾ ಎಂಬಾಕೆಯನ್ನು ಪ್ರೀತಿಸಿದ್ದ. ಆದಾಗ್ಯು ಆಕೆಗೆ ಮೋಸ ಮಾಡಿ ಮತ್ತೊಬ್ಬಳೊಂದಿಗೆ ಮದುವೆ ಆಗಲು ಯೋಜನೆ ರೂಪಿಸಿದ್ದ. ಸಂತ್ರಸ್ತೆಯ ಕುಟುಂಬಕ್ಕೆ ಈ ಬಗ್ಗೆ ಗೊತ್ತಾದಾಗ ಅವರು ಪೊಲೀಸ್​ ಠಾಣೆಯ ಮೆಟ್ಟಿಲೇರಿ ಪ್ರಕರಣ ದಾಖಲಿಸಿದ್ದರು.
ಇದನ್ನೂ ಓದಿರಿ:ಕೆಲಸಕ್ಕೆ ರಾಜೀನಾಮೆ ನೀಡಿ ‘ಅಡಲ್ಟ್​ ಸ್ಟಾರ್’​ ಆದ ಮಾಜಿ ಪೊಲೀಸ್​ ಅಧಿಕಾರಿ: ಕಾರಣ ಕೇಳಿದ್ರೆ ಬೆರಗಾಗ್ತಿರಾ!
ದೂರಿನ ಆಧಾರದ ಮೇಲೆ ನರಸಿಂಗ್​​ನನ್ನು ಪೊಲೀಸರು 2019ರ ಸೆಪ್ಟೆಂಬರ್​ 28ರಂದು ಪೊಕ್ಸೊ ಕಾಯ್ದೆ ಅಡಿ ಬಂಧಿಸಿ, ಚೌದ್ವಾರ ಜೈಲಿಗೆ ಅಟ್ಟಿದ್ದರು. ಈ ವೇಳೆ ಸಂತ್ರಸ್ತೆ ಅಪ್ರಾಪ್ತೆಯಾಗಿದ್ದಳು.
ನಾವಿಬ್ಬರು ಪ್ರೀತಿಸುತ್ತಿದೆವು. ಮದುವೆಗೆ ಒಪ್ಪದಿದ್ದಾಗ ನಮ್ಮ ಕುಟುಂಬಸ್ಥರು ನೀಡಿದ ದೂರಿನ ಅನ್ವಯ ನರಸಿಂಗ್​ನನ್ನು ಬಂಧಿಸಲಾಗಿತ್ತು. ಜೈಲಿನಲ್ಲಿರುವಾಗ ಮದುವೆಗೆ ಒಪ್ಪಿಗೆ ನೀಡಿದ್ದ. ಅದರಂತೆಯೇ ಇಂದು ಮದುವೆ ನಡೆದಿದೆ. ನಾವಿಬ್ಬರು ಒಳ್ಳೆಯ ಜೀವನ ನಡೆಸುತ್ತೇವೆಂಬ ಭರವಸೆ ಇದೆ ಸಂತ್ರಸ್ತೆ ಪೂಜಾ ಹೇಳಿದರು.
ಇಬ್ಬರು ಮದುವೆಯನ್ನು ಒಡಿಶಾ ಹೈಕೋರ್ಟ್​ ಮಧ್ಯಸ್ಥಿಕೆಯಲ್ಲಿ ನಡೆಸಲಾಗಿದೆ ಎಂದು ಜೈಲಿನ ಡಿಐಜಿ ಕುಲಮಣಿ ಬೆಹೆರಾ ತಿಳಿಸಿದ್ದಾರೆ.(ಏಜೆನ್ಸೀಸ್​)
ಲಕ್ಷುರಿ ಕ್ಯಾರವಾನ್​ ಖರೀದಿಸಿದ ಮಹೇಶ್​ ಬಾಬು: ಟಾಲಿವುಡ್​ನಲ್ಲೇ ದುಬಾರಿ ವ್ಯಾನಿಟಿ ವ್ಯಾನ್​ ಇದು!

ಸ್ಕೂಲ್​ ಬ್ಯಾಗ್​ ಕೊಡಿಸೋ ನೆಪದಲ್ಲಿ ಅಪ್ರಾಪ್ತೆ ಕರೆದೊಯ್ದ ಸ್ನೇಹಿತ: 8 ದಿನ 20 ಮಂದಿಯಿಂದ ನರಕ ದರ್ಶನ!

ಗಳಗಳನೇ ಅತ್ತ ಪ್ರಶಾಂತ್ ಸಂಬರಗಿ​: ಬಿಗ್​ಬಾಸ್​ ಮನೆಯಲ್ಲಿ ಅವರಿಗೆ ಕಾಡಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 14 =
Remember me
