ನವದೆಹಲಿ: ಭಾರತ ಮತ್ತು ನೇಪಾಳದ ನಡುವೆ ಭೌಗೋಳಿಕ ಗಡಿಯ ಕುರಿತಾದ ಜಟಾಪಟಿ ತೀವ್ರಗೊಂಡಿದ್ದು, ಭಾರತದ ಭೂಭಾಗವನ್ನು ನೇಪಾಳ ತನ್ನ ಅಧಿಕೃತ ಭೂಪಟದಲ್ಲಿ ಸೇರಿಸಿಕೊಂಡಿದೆ. ಈ ಬಗ್ಗೆ ಭಾರತ ಸರ್ಕಾರ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದೆ.
ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಭಾರತದ ವಿದೇಶಾಂಗ ಸಚಿವಾಲಯ, ನೇಪಾಳ ಸರ್ಕಾರ ಇಂದು ಪರಿಷ್ಕೃತ ಭೂಪಟವನ್ನು ಪ್ರಕಟಿಸಿದ್ದು ಅದರಲ್ಲಿ ಭಾರತದ ಭೂಭಾಗವನ್ನೂ ಸೇರಿಸಿಕೊಂಡಿದೆ. ಇದು ಯಾವುದೇ ಐತಿಹಾಸಿಕ ನಿಜಾಂಶ, ಸಾಕ್ಷ್ಯಗಳಿಲ್ಲದೇ ನೇಪಾಳ ಸರ್ಕಾರ ತೆಗೆದುಕೊಂಡಿರುವ ಏಕಪಕ್ಷೀಯವಾದ ನಿರ್ಧಾರ. ಅಷ್ಟೇ ಅಲ್ಲ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧವನ್ನೂ ಕಡೆಗಣಿಸಿರುವ ನಡೆ ಎಂದು ತೀವ್ರವಾಗಿ ಟೀಕಿಸಿದೆ.
ಇದನ್ನೂ ಓದಿ:ಪ್ರಧಾನಮಂತ್ರಿ ವಯವಂದನಾ ಯೋಜನೆ ವಿಸ್ತರಿಸುವ ಪ್ರಸ್ತಾವನೆಗೆ ಕೇಂದ್ರ ಸಂಪುಟ ಒಪ್ಪಿಗೆ
ಈ ರೀತಿಯಾಗಿ ಸುಖಾ ಸುಮ್ಮನೆ ಭೌಗೋಳಿಕ ವ್ಯಾಪ್ತಿಯನ್ನು ಹಿಗ್ಗಿಸಿ ನಮ್ಮದು ಎಂದರೆ ಭಾರತ ಅಂತಹ ನಡೆಯನ್ನು, ಹೇಳಿಕೆಯನ್ನು ಸ್ವೀಕರಿಸುವುದು ಸಾಧ್ಯವಿಲ್ಲ. ಈ ವಿಚಾರವಾಗಿ ಭಾರತದ ನಿಲುವು ಏನು ಎಂಬುದು ನೇಪಾಳಕ್ಕೆ ಚೆನ್ನಾಗಿ ಗೊತ್ತಿದೆ. ಹೀಗಾಗಿ ಅನ್ಯಾಯದ ನಡೆಯಿಂದ ನೇಪಾಳ ಹಿಂದೆ ಸರಿಯಬೇಕು. ಭಾರತದ ಭೌಗೋಳಿಕ ವ್ಯಾಪ್ತಿಯನ್ನು, ಸಾರ್ವಭೌಮತೆಯನ್ನೂ ಗೌರವಿಸಬೇಕು ಎಂದು ನಾವು ಬಲವಾಗಿ ಆಗ್ರಹಿಸುತ್ತೇವೆ. ಇದಕ್ಕೆ ಸಂಬಂಧಿಸಿದ ಹಾಗೆ ನೇಪಾಳದ ನಾಯಕತ್ವ ಧನಾತ್ಮಕ ನಿಲುವು ತೋರಲಿದೆ. ರಾಜತಾಂತ್ರಿಕವಾಗಿ ಮಾತುಕತೆಯ ಮೂಲಕ ಬಿಕ್ಕಟ್ಟು ಪರಿಹರಿಸಲು ಮುಂದಾಗಲಿದೆ ಎಂಬ ಆಶಾವಾದ ನಮ್ಮದು ಎಂದು ವಿದೇಶಾಂಗ ಸಚಿವಾಲಯ ಹೇಳಿಕೊಂಡಿದೆ.
ಏನಿದು ಸಮಸ್ಯೆ:ನೇಪಾಳ ಪ್ರಕಟಿಸಿರುವ ಭೂಪಟದಲ್ಲಿ ಲಿಪುಲೇಖ್​, ಕಾಲಾಪಾನಿ ಮತ್ತು ಲಿಂಪಿಯಧುರಾ ಪ್ರದೇಶವನ್ನು ತನ್ನ ವ್ಯಾಪ್ತಿಯೊಳಗೆ ಸೇರಿಸಿಕೊಂಡಿದೆ. ಈ ಭೂಪಟವನ್ನು ಅಲ್ಲಿನ ಮಿನಿಸ್ಟ್ರಿ ಆಫ್ ಲ್ಯಾಂಡ್ ಮ್ಯಾನೇಜ್​ಮೆಂಟ್​, ಕೋಆಪರೇಟಿವ್ಸ್​ ಆ್ಯಂಡ್ ಪವರ್ಟಿ ಎಲಿವೇಷನ್ ಬಿಡುಗಡೆ ಮಾಡಿದೆ. ನೇಪಾಳದ ಪ್ರಧಾನಮಂತ್ರಿ ಕೆ.ಪಿ.ಒಲಿ ಅಲ್ಲಿನ ಸಂಸತ್ತಿನಲ್ಲಿ ಕಾಲಾಪಾನಿ ನಿರ್ವಿವಾದಾತ್ಮಕವಾಗಿ ನೇಪಾಳಕ್ಕೇ ಸೇರಿದ್ದು, ಬುಧವಾರ ಇದಕ್ಕೆ ಸಂಬಂಧಿಸಿದ ಭೂಪಟ ಬಿಡುಗಡೆಯಾಗಲಿದೆ. ಅಂದು ದೇಶದ ಜನರು ಸಂಭ್ರಮಾಚರಣೆ ಮಾಡಬಹುದು ಎಂದು ಘೋಷಿಸಿದ್ದರು. ಇದಾಗಿ ಒಂದು ದಿನದ ಅಂತರದಲ್ಲಿ ಈ ಭೂಪಟ ಬಿಡುಗಡೆಯಾಗಿದೆ. ನೇಪಾಳದ ನಡೆಯ ಹಿಂದೆ ಚೀನಾದ ಕುಮ್ಮಕ್ಕು ಇದೆ ಎಂಬುದು ವೇದ್ಯ ವಿಚಾರವಾಗಿದೆ. (ಏಜೆನ್ಸೀಸ್)
ಅಬ್ಬಬ್ಬಾ ನೇಪಾಳವೆ! ಲಾಕ್​ಡೌನ್​ ಇರುವಾಗಲೇ ಸದ್ದಿಲ್ಲದೆ ಭಾರತವನ್ನೂ ಕಬಳಿಸಿತಾ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 + twenty =
Remember me
