ಮುಂಬೈ:ಹದಿನೈದು ವರ್ಷದ ಬಾಲಕಿ ಎದುರು ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಓಲಾ ಕಾರು ಚಾಲಕನನ್ನು ಮೇ 30 ರವರೆಗೆ ಪೊಲೀಸ್​ ವಶಕ್ಕೆ ಒಪ್ಪಿಸಲಾಗಿದೆ.
ಕ್ಯಾಬ್​​ ಚಾಲಕನ ವಿರುದ್ಧ ಮೇ 25 ರಂದು ಆರೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ವಿರುದ್ಧ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಸಬ್​​ಇನ್ಸ್​ಪೆಕ್ಟರ್​​ ಸಚಿನ್​ ಪಾಂಚಾಲ್​​ ತಿಳಿಸಿದ್ದಾರೆ.
ಬಿಹಾರದ ಮೂಲದ 29 ವರ್ಷದ ಮುರಾರ ಕುಮಾರ್​ ಸಿಂಗ್​ ಗುರುಗಾಂವ್​​ನಲ್ಲಿ ಓಲಾ ಕಾರು ಚಾಲಾಯಿಸುತ್ತಿದ್ದ, ವಿದ್ಯಾಭ್ಯಾಸದ ನಿಮಿತ್ತ ಗುರಗಾಂವ್​ಗೆ ಬಾಲಕಿ ತೆರಳಿದ್ದಳು. ಈ ವೇಳೆ ಓಲಾ ಕ್ಯಾಬ್​​ನಲ್ಲಿ ಸಂಚರಿಸಿದ್ದಾಳೆ.ಇದೇ ಸಂದರ್ಭ ನೋಡಿ, ಈ ಚಾಲಕ ಬಾಲಕಿ ಎದುರೇ ಅಸಭ್ಯವಾಗಿ ವರ್ತಿಸಿದ್ದಾನೆ. ಈ ಸಂಬಂಧ ಬಾಲಕಿ ಪೋಷಕರು ಮೇ 25 ರಂದು ದೂರು ದಾಖಲಿಸಿದ್ದರು.
ಇಂತಹ ಕೃತ್ಯಗಳು ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರಲಿದ್ದು, ಭಯ ಹಾಗೂ ಅಸಹ್ಯವನ್ನು ಉಂಟುಮಾಡಿಸುತ್ತದೆ. ಬಾಲಕಿ ಎದುರೇ ಬಟ್ಟೆ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ.
ಇಂತಹದ್ದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ 2016ರಲ್ಲಿ 15 ವರ್ಷದ ಬಾಲಕಿ ವಿರುದ್ಧ ಇದೇ ರೀತಿ ಅಸಭ್ಯವಾಗಿ ವರ್ತಿಸಿದ್ದ 35 ವರ್ಷದ ಕ್ಯಾಬ್​ ಚಾಲಕನಿಗೆ ಪೋಕ್ಸೊ ಕಾಯಿದೆಯಡಿ ಒಂದು ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × two =
Remember me
