ಬೆಂಗಳೂರು:ಎಲೆಕ್ಟ್ರಿಕ್ ಸ್ಕೂಟರ್​ ಕ್ಷೇತ್ರದಲ್ಲಿ ದೊಡ್ಡ ಅಲೆ ಎಬ್ಬಿಸಲು ಓಲಾ ಸಂಸ್ಥೆ ಸಿದ್ಧವಾಗಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ. ಓಲಾದ ಸ್ಕೂಟರ್​ಗಾಗಿ ಕಾಯುತ್ತಿರುವ ಜನರಿಗೆ ಸಂಸ್ಥೆ ಒಂದು ಸಿಹಿ ಸುದ್ದಿ ನೀಡಿದೆ. ಸ್ಕೂಟರ್​ನ ಬುಕ್ಕಿಂಗ್​ನ್ನು ಇಂದಿನಿಂದ ಆರಂಭಿಸಲಾಗಿದೆ.
ವಿಶೇಷವೆಂದರೆ ಕೇವಲ 499 ರೂಪಾಯಿಗೆ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬುಕ್ಕಿಂಗ್ ಆರಂಭವಾಗಿದೆ. ಇನ್ನೂ ಸ್ಕೂಟರ್ ಬಗ್ಗೆ ಸಂಸ್ಥೆ ಯಾವುದೇ ಮಾಹಿತಿ ಕೊಟ್ಟಿಲ್ಲ. ಸ್ಕೂಟರ್​ನ ವಿಶೇಷತೆಗಳ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಆಗಲೇ ಬುಕ್ಕಿಂಗ್ ಆರಂಭವಾಗಿದೆ. ಮುಂದೆ ಒಂದು ವೇಳೆ ನಿಮಗೆ ಗಾಡಿ ಇಷ್ಟವಾಗಿಲ್ಲವಾದರೆ ಬುಕ್ಕಿಂಗ್ ಹಣವನ್ನು ಸಂಪೂರ್ಣವಾಗಿ ವಾಪಸು ಕೊಡುವುದಾಗಿಯೂ ಸಂಸ್ಥೆ ತಿಳಿಸಿದೆ. ರಿಫಂಡ್ ಮಾಡಲು ಯಾವುದೇ ಪ್ರಶ್ನೆ ಕೇಳುವುದಿಲ್ಲ ಎಂದು ಹೇಳಲಾಗಿದೆ.
It’s day 1 of the revolution, the day we’ve all been eagerly waiting for!
The Ola Electric Scooter can now be reserved at just Rs. 499.
So#ReserveNowto#JoinTheRevolutionathttps://t.co/5SIc3JyPqmand be first in line to the future of mobility!pic.twitter.com/UAWuy33d8q
— Ola Electric (@OlaElectric)July 15, 2021

ಬುಕ್ಕಿಂಗ್ ಬಗ್ಗೆ ಸಂಸ್ಥೆಯ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ. ಕಪ್ಪು ಬಣ್ಣದ ಸ್ಕೂಟರ್ ಇರುವ ಪೋಸ್ಟರ್​ನಲ್ಲಿ ಬುಕ್ಕಿಂಗ್ ಆರಂಭವಾಗಿರುವುದಾಗಿ ತಿಳಿಸಲಾಗಿದೆ. ಇದಿನ್ನೂ ಆರಂಭ ಎಂದು ಸಂಸ್ಥೆ ಹೇಳಿಕೊಂಡಿದೆ. ಮುಂಬರುವ ದಿನಗಳಲ್ಲಿ ಸ್ಕೂಟರ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹೊರಬಿಡುವುದಾಗಿ ತಿಳಿಸಲಾಗಿದೆ. ಸ್ಕೂಟರ್​ ಬುಕ್ಕಿಂಗ್ ಮಾಡ ಬಯಸುವವರು ಓಲಾ ಎಲೆಕ್ಟ್ರಿಕ್ ವೆಬ್​ಸೈಟ್​ನಲ್ಲಿ ಖಾತೆ ತೆರೆದು ಬುಕ್ಕಿಂಗ್ ಮಾಡಬಹುದಾಗಿದೆ.
ಈ ಹಿಂದೆ ಸಂಸ್ಥೆಯು ಯಾವ ಬಣ್ಣದ ಸ್ಕೂಟರ್​ ಅನ್ನು ನೀವು ಬಯಸುತ್ತೀರಿ ಎಂದು ಜನರಲ್ಲಿ ಕೇಳಿತ್ತು. ಜನರ ಬೇಡಿಕೆ ಪ್ರಕಾರವೇ ಸ್ಕೂಟರ್​ ಬಣ್ಣಗಳನ್ನು ನಿರ್ಧರಿಸಿರಬಹುದು ಎನ್ನಲಾಗಿದೆ. ತಮಿಳುನಾಡಿನಲ್ಲಿ ಓಲಾ ಪ್ಲಾಂಟ್ ತೆರೆಯಲಾಗಿದ್ದು, ಅಲ್ಲಿಯೇ ಎಲೆಕ್ಟ್ರಿಕ್ ಸ್ಕೂಟರ್​ಗಳ ನಿರ್ಮಾಣವಾಗುತ್ತಿದೆ. ಅದಕ್ಕೆಂದು ಸಂಸ್ಥೆ 2,400 ಕೋಟಿ ರೂಪಾಯಿ ಹೂಡಿಕೆ ಮಾಡಿದೆ. (ಏಜೆನ್ಸೀಸ್)
ರಾಜ್ಯದಲ್ಲಿಂದು 1,977 ಕರೊನಾ ಪ್ರಕರಣ ದೃಢ; ಯಾವ ಜಿಲ್ಲೆಯಲ್ಲಿ ಎಷ್ಟು ಕೇಸ್?

ಸಾಲ ತೀರಿಸಲು ಕಿಡ್ನಿ ಮಾರಲು ಮುಂದಾದ ದಂಪತಿ! ಮುಂದಾಗಿದ್ದೆಲ್ಲ ರೋಚಕ ಕಥೆ..

ಕಾಂಗ್ರೆಸ್ ಪಕ್ಷದ ಮುಂದಿನ ಅಧ್ಯಕ್ಷ ಕಮಲ್​ನಾಥ್? ಕುತೂಹಲ ಮೂಡಿಸಿದ ಭೇಟಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:16 − 5 =
Remember me
