ನವದೆಹಲಿ:ಸ್ವಾತಂತ್ರ್ಯೋತ್ಸವದ ಶುಭ ಸಂದರ್ಭಕ್ಕೆ ಓಲಾ ಕಂಪೆನಿ ತನ್ನ ಎಲೆಕ್ಟ್ರಿಕ್​ ಸ್ಕೂಟರ್​​ಅನ್ನು ಅನಾವರಣಗೊಳಿಸಿದೆ. ಎಸ್​1 ಮತ್ತು ಎಸ್​1 ಪ್ರೋ ಟ್ರಿಂ ಎಂಬ ಎರಡು ಮಾದರಿಯ ಸ್ಕೂಟರ್​ಗಳನ್ನು ಲಾಂಚ್​ ಮಾಡಿರುವ ಓಲಾ, ಇಂದು ಎಸ್​1 ಮಾದರಿಯ ಬಗ್ಗೆ ಪೂರ್ಣ ಮಾಹಿತಿಯನ್ನು ನೀಡಿದೆ.
ಒಮ್ಮೆ ಚಾರ್ಜ್​ ಮಾಡಿದರೆ 181 ಕಿಲೋಮೀಟರ್​ಗಳಷ್ಟು ದೂರ ಕ್ರಮಿಸಬಲ್ಲ ಓಲಾ ಎಸ್​​1 ಸ್ಕೂಟರ್,​ ಗಂಟೆಗೆ 115 ಕಿಲೋಮೀಟರ್​​ನಷ್ಟು ವೇಗವಾಗಿ ಚಲಿಸಬಹುದಾಗಿದೆ. ಬೇಸಿಕ್​ ಮಾಡೆಲ್​ ಆದ ಎಸ್​1 ಮಾದರಿಗೆ 99,999 ರೂ. ಬೆಲೆಯಾದರೆ, ಮತ್ತಷ್ಟು ವಿಶೇಷತೆಗಳನ್ನುಳ್ಳ ಎಸ್​1 ಪ್ರೋ ಟ್ರಿಂಗೆ 1,29,999 ರೂ. ಎಕ್ಸ್-​ಶೋರೂಂ ಬೆಲೆ ಎನ್ನಲಾಗಿದೆ.
ಇದನ್ನೂ ಓದಿ:ದೇಶದ ಅಭಿವೃದ್ಧಿಗೆ ಹೊಸ ಆಯಾಮ ನೀಡಿದ ಮೋದಿ: ಕಟೀಲ್ ಶ್ಲಾಘನೆ
ಕಳೆದ ತಿಂಗಳು ಕೇವಲ 499 ರೂ.ಗಳನ್ನು ಕಟ್ಟಿ ಓಲಾ ಸ್ಕೂಟರನ್ನು ಕಾದಿರಿಸಲು ಓಲಾ ಕಂಪೆನಿ ಅನುವು ಮಾಡಿಕೊಟ್ಟಿತ್ತು. ಇದರಿಂದಾಗಿ ಒಂದೇ ದಿನದಲ್ಲಿ 1 ಲಕ್ಷ ಬುಕಿಂಗ್​ಗಳು ಲಭಿಸಿದ್ದವು. ಹಲವು ಬಣ್ಣಗಳಲ್ಲಿ ಲಭ್ಯವಾಗಲಿರುವ ಓಲಾ ಎಲೆಕ್ಟ್ರಿಕ್​ ಸ್ಕೂಟರನ್ನು ಮುಂಬರುವ ಸೆಪ್ಟೆಂಬರ್​ 8 ರಿಂದ ಗ್ರಾಹಕರು ಖರೀದಿಸಬಹುದು. ಅಕ್ಟೋಬರ್​ ತಿಂಗಳಿಂದ ಸ್ಕೂಟರನ್ನು ನೇರವಾಗಿ ಫ್ಯಾಕ್ಟರಿಯಿಂದ ಡೆಲಿವರಿ ಮಾಡಲಾಗುವುದು ಎನ್ನಲಾಗಿದೆ.(ಏಜೆನ್ಸೀಸ್)
ಜಾಕ್​​ಲೀನ್ ಫರ್ನಾಂಡಿಸ್​​, ಸಚಿನ್ ತೆಂಡೂಲ್ಕರ್…. ಸೆಲೆಬ್ರಿಟಿಗಳ ಸ್ವಾತಂತ್ರ್ಯ ದಿನಾಚರಣೆಯ ಝಲಕ್​ ಇಲ್ಲಿದೆ

ಮನೆಯಲ್ಲೇ ಧ್ವಜಾರೋಹಣ ಮಾಡಿದ ಮಾಜಿ ಸಿಎಂ ಬಿಎಸ್​ವೈ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 13 =
Remember me
