ನವದೆಹಲಿ:ಓಲಾ ಎಲೆಕ್ಟ್ರಿಕ್​ ಸ್ಕೂಟರ್​ನ ಆನ್​​ಲೈನ್​ ಖರೀದಿಗಾಗಿ ಒದಗಿಸಿದ್ದ ಮೊದಲ ಅವಕಾಶದಲ್ಲೇ 1,100 ಕೋಟಿ ರೂಪಾಯಿಗೂ ಹೆಚ್ಚು ದಾಖಲೆ ಮೊತ್ತದ ವಾಹನಗಳ ಮಾರಾಟ ನಡೆದಿದೆ ಎಂದು ಓಲಾ ಕಂಪೆನಿ ಸಿಇಒ ಭವಿಶ್​ ಅಗರ್​ವಾಲ್​ ತಿಳಿಸಿದ್ದಾರೆ. ಅಕ್ಟೋಬರ್​ ತಿಂಗಳಲ್ಲಿ ಸುಮಾರು ಒಂದು ಸಾವಿರ ನಗರ ಮತ್ತು ಪಟ್ಟಣಗಳ ಖರೀದಿದಾರರಿಗೆ ಡೆಲಿವರಿ ನೀಡಲಾಗುವುದು ಎಂದಿದ್ದಾರೆ.
ಓಲಾದ ಎಸ್​1 ಮತ್ತು ಎಸ್​1 ಪ್ರೋ ಸ್ಕೂಟರ್​ಗಳ ಖರೀದಿಗಾಗಿ ಗ್ರಾಹಕರಿಗೆ ಸೆಪ್ಟೆಂಬರ್​ 15 ಮತ್ತು 16 ರಂದು ಒಟ್ಟು 48 ಗಂಟೆಗಳ ಕಾಲ ಪರ್ಚೇಸ್​ ವಿಂಡೋ ತೆರೆಯಲಾಗಿತ್ತು. ಜುಲೈ 2021 ರಲ್ಲಿ ಈ ಸ್ಕೂಟರ್​ಗಾಗಿ ಆನ್​ಲೈನ್​ ರಿಸರ್ವೇಷನ್​ ಮಾಡಿಸಿದ್ದ ಗ್ರಾಹಕರಿಗೆ ಆದ್ಯತೆ ನೀಡಲಾಯಿತು ಎನ್ನಲಾಗಿದೆ.
ಇದನ್ನೂ ಓದಿ:ಯೂ ಟೂಬ್​ನಿಂದ​ ತಿಂಗಳಿಗೆ 4 ಲಕ್ಷ ರೂಪಾಯಿ ದುಡಿಯುತ್ತಿದ್ದಾರೆ ಕೇಂದ್ರ ಸಚಿವ ನಿತಿನ್​ ಗಡ್ಕರಿ!
“ಈ ಎರಡು ದಿನಗಳಲ್ಲಿ 1,100 ಕೋಟಿ ರೂ.ಗಳಷ್ಟು ಮಾರಾಟ ನಡೆದಿದೆ. ಇದು ಆಟೋಮೇಟಿವ್​ ಉದ್ಯಮದಲ್ಲಿ ಮೊಟ್ಟಮೊದಲ ಬಾರಿ ನಡೆದಿರುವಂತಹುದು. ಅಷ್ಟೇ ಅಲ್ಲ, ಇದು ಭಾರತೀಯ ಈ-ಕಾಮರ್ಸ್​ ಇತಿಹಾಸದಲ್ಲಿ ಒಂದೇ ಉತ್ಪನ್ನಕ್ಕೆ ಒಂದು ದಿನದಲ್ಲಿ ಮೊತ್ತ ದೃಷ್ಟಿಯಿಂದ ನಡೆದಿರುವ ಅತಿ ಹೆಚ್ಚಿನ ಮಾರಾಟ ವಹಿವಾಟಾಗಿದೆ. ನಾವು ನಿಜವಾದ ಡಿಜಿಟಲ್​ ಇಂಡಿಯಾದಲ್ಲಿ ಬದುಕುತ್ತಿದ್ದೇವೆ” ಎಂದು ಭವಿಶ್​ ಅಗರ್​ವಾಲ್​ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪರ್ಚೇಸ್​ ವಿಂಡೋ ತೆರೆದಾಗ ಕನಿಷ್ಠ 20,000 ರೂ.ಗಳ ಮೊತ್ತ ಪಾವತಿಸಿ, ಗ್ರಾಹಕರು ಓಲಾ ಸ್ಕೂಟರನ್ನು ಬುಕ್​ ಮಾಡಲು ಅವಕಾಶ ನೀಡಲಾಯಿತು. ಆನ್​ಲೈನ್​ ಸೇಲ್​ನ ಮೊದಲನೇ ದಿನ 600 ಕೋಟಿಗೂ ಹೆಚ್ಚು ಬೆಲೆಯ ಎಲೆಕ್ಟ್ರಿಕ್​ ಸ್ಕೂಟರ್​ಗಳನ್ನು ಮಾರಲಾಯಿತು. ಸದ್ಯಕ್ಕೆ ಪರ್ಚೇಸ್​​ ವಿಂಡೋವನ್ನು ಮುಚ್ಚಲಾಗಿದ್ದು, ಮತ್ತೆ ನವೆಂಬರ್ 1ಕ್ಕೆ ದೀಪಾವಳಿಯ ಸಮಯಕ್ಕೆ ತೆರೆಯಲಾಗುತ್ತದೆ. ಈ ಎರಡು ದಿನಗಳಲ್ಲಿ ಖರೀದಿಸಲಾಗದೇ ಇರುವವರು, ಸದ್ಯಕ್ಕೆ, ಈ ಸ್ಕೂಟರನ್ನು ಕಂಪೆನಿಯ ವೆಬ್​ಸೈಟ್​ olaelectric.comಗೆ ಹೋಗಿ 499 ರೂ. ಪಾವತಿಸಿ ಆನ್​ಲೈನ್​ ಸ್ಲಾಟ್​ಅನ್ನು ಬುಕ್​ ಮಾಡಬಹುದು ಎಂದು ತಿಳಿಸಿದ್ದಾರೆ.(ಏಜೆನ್ಸೀಸ್)
ಮಿಸ್ಟರ್​ ಇಂಡಿಯ ಆತ್ಮಹತ್ಯೆ ಯತ್ನ: ನಟ ಸಾಹಿಲ್​ ಖಾನ್​ಗೆ ಸಂಕಷ್ಟ

ಆನ್​ಲೈನ್​ ಜೂಜು, ಬಾಜಿಗೆ ಬ್ರೇಕ್​: ವಿಧಾನಸಭೆಯಲ್ಲಿ ವಿಧೇಯಕ ಮಂಡನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 10 =
Remember me
