ಚೆನ್ನೈ:ವಾಹನ ಖರೀದಿಗಾಗಿ ಪೂರ್ಣ ಹಣವನ್ನು ಪಾವತಿಸಿದ ನಂತರವೂ ಮಹಿಳೆಗೆ ಸ್ಕೂಟರ್​ನ್ನು ಒದಗಿಸಲು ವಿಫಲವಾದ ಕಂಪನಿಗೆ 2.05 ಲಕ್ಷ ರೂ.ನ್ನು ಪರಿಹಾರವಾಗಿ ಪಾವತಿಸುವಂತೆ ಆದೇಶಿಸಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.ನಿಶಾ.ಕೆ ಎಂಬ ಮಹಿಳೆ ಪುರಸಾವಲ್ಕಮ್ ನಿವಾಸಿಯಾಗಿದ್ದು, ಎರಡು ವರ್ಷಗಳ ಹಿಂದೆ ಒಲಾ ಕಂಪನಿಯ ಅಧಿಕೃತ ಅಪ್ಲಿಕೇಶನ್​ ಮೂಲಕ 2021ರ ಜುಲೈನಲ್ಲಿ 20.499 ರೂ. ಬುಕಿಂಗ್​​ ಫೀ ನೀಡಿ ಕೋರಲ್-ಗ್ಲಾಮ್ ಬಣ್ಣದ ಇ-ಸ್ಕೂಟರ್​ನ್ನು ಬುಕ್​ ಮಾಡಿದ್ದಳು. ಈ ಸ್ಕೂಟರ್​ನ ಮೂಲ ಬೆಲೆ 1,10,29 ರೂ. ಆಗಿತ್ತು.ಇದನ್ನೂ ಓದಿ:ಕಣ್ಣಿಗೊಂದು ಸವಾಲು; ಒಣಗಿದ ಮರದಲ್ಲಿರುವ 3 ಮೊಲಗಳನ್ನು 7 ಸಕೆಂಡುಗಳಲ್ಲಿ ಪತ್ತೆ ಹಚ್ಚಿಈ ಪ್ರಕ್ರಿಯೆಯಲ್ಲಿ ನಿಶಾಳಿಗೆ ಅಂತಿಮ ಪಾವತಿ ಮಾಡಿದ ನಂತರ ವಾಹನದ ವಿತರಣೆಯ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು ಎಂದು ತಿಳಿಸಲಾಗಿತ್ತು. ಏತನ್ಮಧ್ಯೆ, S1 ಸ್ಕೂಟರ್‌ಗಳ ಉತ್ಪಾದನೆಯನ್ನು ನಿಲ್ಲಿಸಿರುವುದಾಗಿ ಓಲಾ ಘೋಷಿಸಿದಾಗ ನಿಶಾ ಆಘಾತಕ್ಕೊಳಗಾಗಿ, ಕಂಪನಿಯವರನ್ನು ಸಂಪರ್ಕಿಸಿದಾಗ ಓಲಾ S1 ಪ್ರೊ ಮಾದರಿಯನ್ನು ಕೊಡುವುದಾಗಿ ತಿಳಿಸಿ ಆಕೆಯಿಂದ ಹೆಚ್ಚುವರಿಯಾಗಿ 40,000 ರೂ.ನ್ನು ಕಟ್ಟಿಸಿಕೊಂಡಿತ್ತು.ಜತೆಗೆ, ವಾಹನ ನೋಂದಣಿಗೆ ಅಗತ್ಯವಾದ ದಾಖಲೆಗಳನ್ನು ಅಪ್‌ಲೋಡ್ ಮಾಡಲು ಹೇಳಿದ್ದರು. ಆದರೆ ಓಲಾ ತನ್ನ ಅಪ್ಲಿಕೇಶನ್‌ನಿಂದ ಬುಕಿಂಗ್​​ನ್ನು ರದ್ದುಗೊಳಿಸುವ ಆಯ್ಕೆಯನ್ನು ಸಹ ತೆಗೆದು ಹಾಕಿತ್ತು. ನಿಶಾ ಕಸ್ಟಮರ್ ಕೇರ್​ನ್ನು ಸಂಪರ್ಕಿಸಿದಾಗ ಅವಳಿಗೆ ಯಾವುದೇ ಪ್ರತಿಕ್ರಿಯೆಯೂ ದೊರೆತಿರಲಿಲ್ಲ.ಇದನ್ನೂ ಓದಿ:ಬೆಂಜ್​ ಕಾರನ್ನು ಜಖಂಗೊಳಿಸಿದ ಕಾಡಾನೆ; ಕಾರಲ್ಲಿದ್ದ ದಂಪತಿ ಸ್ವಲ್ಪದರಲ್ಲೇ ಅಪಾಯದಿಂದ ಪಾರುಇದರಿಂದ ಬೇಸತ್ತ ನಿಶಾ, ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಪ್ರಕರಣ ದಾಖಲಿಸಿದ್ದಳು. ಈ ಪ್ರಕರಣವನ್ನು ಪರಿಶೀಲಿಸಿದ ಆಯೋಗವು, ಓಲಾಗೆ ಸೇವೆಯಲ್ಲಿನ ಕೊರತೆ ಮತ್ತು ಅನ್ಯಾಯದ ವ್ಯಾಪಾರದ ಭಾಗವಾಗಿ 2,00,000ರೂ. ಪರಿಹಾರ ಮತ್ತು ದೂರುದಾರರಿಗೆ ಉಂಟಾದ ಕಾನೂನು ವೆಚ್ಚಗಳಿಗೆ 5,000 ರೂ. ಪಾವತಿಸಲು ಆದೇಶಿಸಿದೆ.ಇದರೊಂದಿಗೆ, ಆಯೋಗವು ಓಲಾಗೆ ಎಸ್ 1 ಪ್ರೊ ಮಾದರಿಯನ್ನು ಎರಡು ತಿಂಗಳೊಳಗೆ ತಲುಪಿಸಲು ಅಥವಾ ಸಂಪೂರ್ಣ ಮೊತ್ತವನ್ನು 9% ಬಡ್ಡಿಯೊಂದಿಗೆ ಮರುಪಾವತಿಸಲು ನಿರ್ದೇಶಿಸಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + fifteen =
Remember me
