ನವದೆಹಲಿ:ಓಲಾ ಎಲೆಕ್ಟ್ರಿಕ್​ ತನ್ನ ಮೊದಲ ಎಲೆಕ್ಟ್ರಿಕ್​ ಕಾರಿನ ಫೋಟೊಗಳನ್ನು ಬಿಡುಗಡೆ ಮಾಡಿದೆ. ಈ ಕಾರಿನ ಉತ್ಪಾದನೆ 2023ಕ್ಕೆ ಪ್ರಾರಂಭವಾಗಬಹುದು ಎಂದು ಹೇಳಲಾಗುತ್ತಿದೆ.
ಬಿಡುಗಡೆಗೊಂಡಿರುವ ಫೋಟೊಗಳು ಸರಳ ಹಾಗೂ ಫ್ಯೂಚರಿಸ್ಟಿಕ್​ ಮಾದರಿಯ ಕಾರಿನ ಪರಿಚಯ ಮಾಡಿಸುತ್ತಿವೆ. ಈ ಚಿತ್ರದ ಮೂಲಕ ಕಾರಿನ ಒಳಭಾಗದಲ್ಲಿ ದೊಡ್ಡದಾದ ಟಚ್​ಸ್ಕ್ರೀನ್​ ಪರದೆ ಇರುವುದನ್ನು ತೋರಿಸುತ್ತಿದ್ದು, ಟೆಸ್ಲಾ ಮಾದರಿಯ ಆಯತ ಆಕಾರದ ಸ್ಟೇರಿಂಗ್​ ವೀಲ್ ಹೊಂದಿದೆ.
ಓಲಾ ಕಂಪೆನಿಯ ಪ್ರಕಾರ ಎಲೆಕ್ಟ್ರಿಕ್​ ವಿಭಾಗದಲ್ಲಿ 0-100 ಕಿ.ಮೀ ವೇಗವನ್ನು ಕೇವಲ 4 ಸೆಕೆಂಡ್​ನಲ್ಲಿ ತಲುಪುವ ಜಗತ್ತಿನ ಮೊದಲ ಕಾರು ಇದಾಗಲಿದೆ. ಈ ಕಾರು ಒಂದು ಬಾರಿ ಚಾರ್ಜ್​ ಮಾಡಿದರೆ 500ಕ್ಕೂ ಹೆಚ್ಚು ಕಿ.ಮೀ ದೂರವನ್ನು ಕ್ರಮಿಸುತ್ತದೆ ಎಂದು ಕಂಪೆನಿ ಹೇಳಿದೆ. ಈ ಮಾಹಿತಿಯನ್ನು ಓಲಾ ಹೇಳಿಕೊಂಡಿದ್ದರೂ ಬ್ಯಾಟರಿ ವ್ಯವಸ್ಥೆ ಹಾಗೂ ತಾಂತ್ರಿಕ ಮಾಹಿತಿ ಇನ್ನಷ್ಟೇ ಗೊತ್ತಾಗಬೇಕಿದೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 − 3 =
Remember me
