ನವದೆಹಲಿ:ಇತ್ತೀಚೆಗ ಚಿನ್ನದ ದರ ಗಗನಮುಖಿಯಾಗುತ್ತಿದೆ. ಅತ್ಯಮೂಲ ಹಳದಿ ಲೋಹ ಗ್ರಾಹಕರ ಜೇಬು ಸುಡುತ್ತಿದೆ. ಸದ್ಯ ಚಿನ್ನದ ಬೆಲೆ ಜಿಎಸ್​ಟಿ ಸೇರಿದಂತೆ 10 ಗ್ರಾಂಗೆ 58 ಸಾವಿರ ರೂ. ದಾಟಿದೆ. ಹೀಗೆ ಬೆಲೆ ಏರಿದರೆ ಮುಂದೆ ಹೇಗಪ್ಪಾ ಅಂತಾ ಗ್ರಾಹಕರು ಚಿಂತಿಸುತ್ತಿರುವುದರ ನಡುವೆಯೇ 50 ದಶಕದ ಚಿನ್ನದ ಬಿಲ್​ ಒಂದು ವೈರಲ್​ ಆಗಿದ್ದು, ಗ್ರಾಹಕರ ಹುಬ್ಬೇರುವಂತೆ ಮಾಡಿದೆ.
ಅಂದಹಾಗೆ ಚಿನ್ನದ ಬೆಲೆ ಪ್ರತಿನಿತ್ಯ ಬದಲಾಗುತ್ತಿರುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆ ಸೇರಿದಂತೆ ಅನೇಕ ವಿಷಯಗಳು ಬೆಲೆ ಬದಲಾವಣೆಯಲ್ಲಿ ಪ್ರಭಾವ ಬೀರುತ್ತದೆ. 1959ರಲ್ಲಿ 10 ಗ್ರಾಂ ಚಿನ್ನದ ಬೆಲೆ ಕೇವಲ 113 ರೂಪಾಯಿ ಇತ್ತು ಅಂದರೆ ಒಂದು ಕ್ಷಣ ನಂಬುವುದಕ್ಕೂ ಅಸಾಧ್ಯ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಚಿನ್ನದ ಹಳೆಯ ರಶೀದಿ (ಬಿಲ್)ಯು ಆ ದಿನದಲ್ಲಿ ಚಿನ್ನ ಎಷ್ಟು ಅಗ್ಗವಾಗಿದೆ ಎಂಬುದನ್ನು ತೋರಿಸುತ್ತದೆ. ಬಿಲ್ ಸುಮಾರು 64 ವರ್ಷ ಹಳೆಯದು. ಪ್ರಸ್ತುತ ದಿನಗಳಲ್ಲಿ ಬ್ರಾಂಡೆಡ್ ಚಾಕೊಲೇಟ್‌ನ ಬೆಲೆಯೇ ತುಂಬಾ ದುಬಾರಿ. ವೈರಲ್ ಚಿತ್ರದ ಪ್ರಕಾರ 1959ರ ಮಾರ್ಚ್ 3ರಂದು ಬಿಲ್​ ಮಾಡಲಾಗಿದೆ. ಈ ಬಿಲ್​ ಮಹಾರಾಷ್ಟ್ರದ ವಾಮನ್ ನಿಂಬಾಜಿ ಅಷ್ಟೇಕರ್ ಎಂಬ ಚಿನ್ನದ ಅಂಗಡಿಗೆ ಸೇರಿದೆ.

ರಶೀದಿ ಮೇಲಿನ ಗ್ರಾಹಕನ ಹೆಸರು ಶಿವಲಿಂಗ ಆತ್ಮಾರಾಮ್. ಬಿಲ್‌ನಲ್ಲಿ ಶಿವಲಿಂಗ ಅವರು ಅಂಗಡಿಯಿಂದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಖರೀದಿಸಿದ್ದಾರೆಂದು ಬಿಲ್​ ತೋರುತ್ತದೆ. ಎರಡರ ಒಟ್ಟು ಬೆಲೆ 909 ರೂಪಾಯಿ. ಪ್ರಸ್ತುತ 10 ಗ್ರಾಂ ಚಿನ್ನಕ್ಕೆ 58 ಸಾವಿರ ರೂ. ಇರುವುದನ್ನು ಹೋಲಿಕೆ ಮಾಡಿ ನೋಡಿ ನೆಟ್ಟಿಗರು ಹೌಹಾರಿದ್ದಾರೆ.
ಕೆಲವು ದಿನಗಳ ಹಿಂದೆ ಐಎಫ್‌ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಅವರು 1987ರ ಗೋಧಿ ಬಿಲ್‌ನ ಚಿತ್ರವನ್ನು ಹಂಚಿಕೊಂಡಿದ್ದರು. 1987ರಲ್ಲಿ ಒಂದು ಕೆಜಿ ಗೋಧಿಗೆ 1.6 ರೂಪಾಯಿ ಇತ್ತು.(ಏಜೆನ್ಸೀಸ್​)
80ರ ದಶಕದಲ್ಲಿ 1 ಕೆಜಿ ಗೋಧಿಗೆ ಬೆಲೆ ಎಷ್ಟಿತ್ತು ಗೊತ್ತಾ? ವೈರಲ್​ ಆಗ್ತಿರೋ ಹಳೆಯ ಬಿಲ್​ ನೋಡಿದ್ರೆ ಹುಬ್ಬೇರೋದು ಖಚಿತ!

1947ರಲ್ಲಿ ಭಾರತ-ಪಾಕ್​​​ ನಡುವಿನ ರೈಲು ಸಂಚಾರದ ಟಿಕೆಟ್ ದರ ಎಷ್ಟಿತ್ತು ಗೊತ್ತಾ? ಹಳೇ ಟಿಕೆಟ್​ ಫೋಟೋ ವೈರಲ್​ ​

70ರ ದಶಕದಲ್ಲಿ 1 ಮಸಾಲೆ ದೋಸೆ ಬೆಲೆ ಎಷ್ಟಿತ್ತು ಗೊತ್ತಾ? ಹಳೆಯ ಬಿಲ್​ ನೋಡಿದ್ರೆ ಹುಬ್ಬೇರೋದು ಖಚಿತ!

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:3 × two =
Remember me
