ನವದೆಹಲಿ: ಪ್ರತಿಯೊಬ್ಬರೂ ಹೊಚ್ಚ ಹೊಸ ಫೆರಾರಿ ಖರೀದಿಸಲು ಯೋಚಿಸುತ್ತಾರೆ. ಅದ್ರಲ್ಲೂ ರಾರಿಗೆ ತನ್ನದೇ ಆದ ಸ್ಥಾನಮಾನ ಹೊಂದಿದೆ. ಫೆರಾರಿ ಕಾರ್​​ಗೆ ವಿಶೇಷ ಫ್ಯಾನ್​​ ಬೇಸ್​​ ಕೂಡಾ ಇದೆ. ಈ ಫೆರಾರಿ ಕಾರ್​​ಗೆ ಸಂಬಂಧಿಸಿದ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಸಂಪೂರ್ಣವಾಗಿ ಜಂಕ್ ಬಿದ್ದಿರುವ ಫೆರಾರಿ ಕಾರ್ ಬರೋಬ್ಬರಿ 15 ಕೋಟಿಗೆ ಸೇಲ್​ ಆಗುತ್ತೆ ಅಂದ್ರೆ ನಂಬಲಾರದ ಮಾತು. ಆದ್ರೆ ಇದು ನಿಜ ಸಂಪೂರ್ಣವಾಗಿ ಜಂಕ್ ಬಿದ್ದಿರುವ ಫೆರಾರಿ ಕಾರ್ ಸುಮಾರು 15 ಕೋಟಿಗೆ ಮಾರಾಟವಾಗಿರುವ ಘಟನೆಯೊಂದು ನಡೆದಿದೆ.
ಈ ಕಾರು 1954 ಕ್ಕಿಂತ ಹಳೆಯದಾಗಿದೆ. ಆರ್‌ಎಂ ಸೋಥೆಬಿಯ ಮಾಂಟೆರಿ ನಡೆಸಿದ ಹರಾಜು ಪ್ರಕ್ರಿಯೆಯಲ್ಲಿ ಇದು ಮಾರಾಟವಾಗಿದೆ ಮತ್ತು ರೂ 15 ಕೋಟಿಗೆ ಮಾರಾಟವಾಗಿದೆ. ಸಿಎನ್ಎನ್ ವರದಿ ಪ್ರಕಾರ, ಈ ಫೆರಾರಿ ಕಾರನ್ನು ನೋಡಿದರೆ, ಸ್ಕ್ರ್ಯಾಪ್ ಅಂಗಡಿಯಿಂದ ಹೊರತೆಗೆದಂತೆ ಕಾಣುತ್ತದೆ. ಇದು ಫೆರಾರಿಯ 500 ಮೊಂಡಿಯಲ್ ಸ್ಪೈಡರ್ ಸರಣಿ ಮಾದರಿಯಾಗಿದೆ.
ಹಿಂದೆ ಫೆರಾರಿ ಫ್ಯಾಕ್ಟರಿ ಚಾಲಕ ಫ್ರಾಂಕೊ ಕಾರ್ಟೆಜ್ ಅವರ ಆಸ್ತಿಯಾಗಿತ್ತು. ಅವರು 1954 ರಲ್ಲಿ ರೇಸ್ ಟ್ರ್ಯಾಕ್ನಲ್ಲಿ ಓಡಲು ಮಾತ್ರ ಈ ಸೂಪರ್ಕಾರನ್ನು ಖರೀದಿಸಿದ್ದರು. ಆದರೆ 1960 ರಲ್ಲಿ ರೇಸ್ ವೇಳೆ ಈ ಕಾರಿಗೆ ಬೆಂಕಿ ಹೊತ್ತಿಕೊಂಡಿತು. ಅದರ ಮಾಲೀಕತ್ವದ ಕೊನೆಯ ದಾಖಲಾದ ವರ್ಗಾವಣೆ 1978 ರಲ್ಲಿ ನೋಂದಣಿಗೊಂಡಿದೆ. ಆದರೆ ಇದರ ಹೊರತಾಗಿಯೂ ಕಾರನ್ನು ಇಂತಹ ಕೆಟ್ಟ ಸ್ಥಿತಿಯಲ್ಲಿಯೂ ಕೂಡ ಸಂಗ್ರಹಿಸಿಡಲಾಗಿದೆ. ಈ ಕಾರಿಗೆ ಚಕ್ರಗಳಿಲ್ಲ. ಆದರೆ ಇದು ಗೇರ್‌ಬಾಕ್ಸ್, ನೈಜ ಆಕ್ಸಲ್ ಕಾರ್ನರ್‌ಗಳು, ಮೂಲ ಚಾಸಿಸ್ ಪ್ಲೇಟ್‌ಗಳು ಮತ್ತು 3.0L Tipo 119 Lampredi ಇನ್‌ಲೈನ್-ಫೋರ್ ಎಂಜಿನ್ ಅನ್ನು ಹೊಂದಿದೆ.
ವ್ಯಕ್ತಿ ಕಾರನ್ನು ಏಕೆ ಖರೀದಿಸಿರಬಹುದು?ಸಂಪೂರ್ಣವಾಗಿ ಡಕೋಟಾ ಸ್ಥಿತಿಗೆ ತಲುಪಿರುವ ಕಾರನ್ನ ಯಾರಾದ್ರು ಖರೀದಿಸುತ್ತಾರೆಯೇ ಎಂಬ ಪ್ರಶ್ನೆ ನಿಮ್ಮನ್ನ ಕಾಡ್ತಾ ಇರಬಹುದು. ಅತ್ಯಂತ ದುಬಾರಿ ಫೆರಾರಿಯನ್ನು 2008 ರಲ್ಲಿಯೇ ಮಾರಾಟ ಮಾಡಲಾಯಿತು. ಈ ಮಾದರಿಯು 1962 ರ ಫೆರಾರಿ 250 GTO ಆಗಿತ್ತು. ಇದರ ಬೆಲೆ US $ 48.4 ಮಿಲಿಯನ್‌ಗೆ ಏರಿಕೆಯಾಗಿದ್ದು. ಈ ಕಾರನ್ನು ಆರ್‌ಎಂ ಸೋಥೆಬಿಸ್ ಕೂಡ ಹರಾಜು ಹಾಕಿದ್ದು, ಇದೀಗ 15 ಕೋಟಿಗೆ ಮಾರಾಟವಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + two =
Remember me
