ಬೆಂಗಳೂರು:ಧರ್ಮಸ್ಥಳ, ಸುಬ್ರಹ್ಮಣ್ಯ, ತಿರುಮಲ ತಿರುಪತಿಗಳಿಗೆ ಪಾದಯಾತ್ರೆ ಮೂಲಕ ತೆರಳಿ ದೇವರ ದರ್ಶನ ಪಡೆಯುವ ಭಕ್ತಾದಿಗಳು ಬಹಳಷ್ಟಿದ್ದಾರೆ. ಆದರೆ ಇಲ್ಲೊಬ್ಬರು ಭಕ್ತರು 12 ಜ್ಯೋತಿರ್ಲಿಂಗಗಳ ದರ್ಶನವನ್ನು ಪಾದಯಾತ್ರೆ ಮೂಲಕವೇ ಪೂರೈಸುವ ಸಂಕಲ್ಪ ತೊಟ್ಟಿದ್ದಾರೆ.
ಪೋಸ್ಟ್ ಮಾಸ್ಟರ್​ ಹುದ್ದೆಯಲ್ಲಿದ್ದು ಇದೀಗ ನಿವೃತ್ತ ಜೀವನ ಸಾಗಿಸುತ್ತಿರುವ ಬೆಂಗಳೂರಿನ ಚಂದ್ರಶೇಖರ್ ಎಂಬವರೇ ಆ ಸಾಹಸಿ ಭಕ್ತ. ಇವರು ದೇಶದಲ್ಲಿನ 12 ಜ್ಯೋತಿರ್ಲಿಂಗಗಳ ದರ್ಶನವನ್ನು ನಡೆದೇ ಸಾಗಿ ಮಾಡಲು ನಿರ್ಧರಿಸಿದ್ದು, ಈಗಾಗಲೇ 7 ಜ್ಯೋತಿರ್ಲಿಂಗಗಳ ದರ್ಶನವನ್ನು ಪಡೆದಿದ್ದಾರೆ.
ಇವರು ಕರ್ನಾಟಕದಿಂದ ಹೊರಟು ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶಗಳನ್ನು ದಾಟಿ ಇದೀಗ ಉತ್ತರಪ್ರದೇಶದ ಆಗ್ರಾ ಕಡೆಗೆ ಸಾಗಿದ್ದಾರೆ. ಇಷ್ಟರೊಳಗೆ ಗ್ರಿಷ್ಣೇಶ್ವರ, ಭೀಮಾಶಂಕರ, ತ್ರ್ಯಯಂಬಕೇಶ್ವರ, ಸೋಮನಾಥ, ನಾಗೇಶ್ವರ, ಓಂಕಾರೇಶ್ವರ, ಮಹಾಕಾಳೇಶ್ವರಗಳ ದರ್ಶನ ಪಡೆದಿದ್ದಾರೆ. ಇನ್ನುಳಿದ ಜ್ಯೋತಿರ್ಲಿಂಗಗಳ ದರ್ಶನಕ್ಕೆ ಪಾದಯಾತ್ರೆ ಮುಂದುವರಿಸಿರುವ ಇವರು ಸದ್ಯ 152 ದಿನಗಳಲ್ಲಿ 6.017 ಕಿ.ಮೀ. ನಡೆದಿದ್ದಾರೆ.

ಒಂದು ಫೋಟೋ ಪೋಸ್ಟ್ ಮಾಡಿ 1 ಲಕ್ಷ ರೂ. ನಗದು ಬಹುಮಾನ ಘೋಷಿಸಿದ ನಿರ್ದೇಶಕ!

ಕುಟುಂಬ ರಾಜಕಾರಣ ಏಯ್ಡ್ಸ್​ ಥರ, ಎಲ್ಲ ಪಕ್ಷದಲ್ಲೂ ಇದೆ: ಯತ್ನಾಳ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 1 =
Remember me
