ಬಿಹಾರ:ಬಿಹಾರದ ದಂಪತಿಯ ಮೇಲೆ ಆರು ಜನರ ಗುಂಪೊಂದು ವೈಯಕ್ತಿಕ ದ್ವೇಷದ ಕಾರಣ ಗುಂಡಿನ ದಾಳಿ ನಡೆಸಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಶೀಘ್ರವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿ, ತುರ್ತು ಚಿಕಿತ್ಸೆ ಕೊಡಿಸಲಾಗಿದೆ ಎಂದು ಪೊಲೀಸರು ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ:B Dayananda, Bengaluru City Police Commissioner: ಕಮಿಷನರ್‌ರನ್ನೇ ನಗೆಗಡಲಲ್ಲಿ ತೇಲಿಸಿದ ಇಸ್ತ್ರಿ ಅಂಗಡಿಯವ…
ಬಿಹಾರದ ಜಮುಯಿಯ ಧೌಘಾಟ್ ಗ್ರಾಮದಲ್ಲಿ ವಾಸವಿದ್ದ ದಂಪತಿಯ ನಿವಾಸದಲ್ಲಿ ಪತಿ ಮತ್ತು ಪತ್ನಿಯ ಮೇಲೆ ಆರು ಮಂದಿ ದಾಳಿ ನಡೆಸಿ, ಗುಂಡು ಹಾರಿಸಿದ್ದಾರೆ. ವರದಿಯ ಪ್ರಕಾರ, ಸದ್ಯ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಪಾಟ್ನಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಂಡಿನ ದಾಳಿಗೆ ಗುರಿಯಾದ ದಂಪತಿಯನ್ನು ವಿಶಾಲ್ ಸಿಂಗ್ ಮತ್ತು ನೀಲಂ ದೇವಿ ಎಂದು ಗುರುತಿಸಲಾಗಿದೆ.
ಪೊಲೀಸ್ ಇಲಾಖೆ ನೀಡಿರುವ ವರದಿ ಪ್ರಕಾರ, ವಿಶಾಲ್ ಸಿಂಗ್ ಎಂಬ ವ್ಯಕ್ತಿ ತಮ್ಮ ಅಂಗಡಿಯನ್ನು ಮುಚ್ಚಿ, ಮನೆಯಲ್ಲಿ ಊಟ ಮಾಡುತ್ತಿದ್ದಾಗ ದಾಳಿ ಮಾಡಿದ ಆರೋಪಿಗಳು, ಅವರ ಮನೆಯ ಕಿಟಕಿಯ ಮೂಲಕ ಗುಂಡು ಹಾರಿಸಿದ್ದಾರೆ. ಗುಂಡೇಟಿನ ಸದ್ದು ಕೇಳಿ ವಿಶಾಲ್ ಪತ್ನಿ ಕೊಠಡಿಯೊಳಗೆ ತೆರಳಿದಾಗ ದುಷ್ಕರ್ಮಿಗಳು ಅವರಿಗೂ ಬುಲೆಟ್​ ಫೈರ್​ ಮಾಡಿದ್ದಾರೆ. ಈ ವೇಳೆ ಮನೆಯೊಳಗೆ ಪ್ರವೇಶಿಸಲು ಕೆಲವರು ಟೆರೇಸ್‌ನಿಂದ ಪ್ರಯತ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಸಂಚಾರ ಮಾಡದ ಸಂಚಾರಿ ಆಂಬುಲೆನ್ಸ್; ಪಶುಗಳಿಗಿಲ್ಲ ತುರ್ತು ಚಿಕಿತ್ಸೆ ; ಒಂದು ವರ್ಷದಿಂದ ನಿಂತಲ್ಲೇ ನಿಂತ ವಾಹನ
ಪ್ರಾಥಮಿಕ ತನಿಖೆಯ ವರದಿ ಅನುಸಾರ, ಸಂತ್ರಸ್ತ ಕುಟುಂಬ ಮತ್ತು ಆರೋಪಿಗಳ ನಡುವೆ ಹಳೆ ದ್ವೇಷದ ಹಿನ್ನಲೆ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಕ್ಟೋಬರ್ 2022 ರಲ್ಲಿ, ವಿಶಾಲ್ ಸಿಂಗ್ ಅವರ ಸಹೋದರ ಬಿಲ್ಟು ಸಿಂಗ್, ಆರೋಪಿಗಳಲ್ಲಿ ಒಬ್ಬನಾದ ಪ್ರಿಯಾಂಶು ಕುಮಾರ್​ನ 5 ವರ್ಷದ ಮಗ ಕುನ್ ಕುನ್ ಸಿಂಗ್​ನನ್ನು​ ಹತ್ಯೆಗೈದಿದ್ದರು. ಈ ಘಟನೆ ಎರಡು ಕುಟುಂಬಗಳ ನಡುವೆ ಕಲಹಕ್ಕೆ ಕಾರಣವಾಗಿತ್ತು ಎನ್ನಲಾಗಿದೆ,(ಏಜೆನ್ಸೀಸ್).
‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ’ ಚಿತ್ರಕ್ಕೆ ನಟಿ ಅನುಷ್ಕಾ ಶೆಟ್ಟಿ ಪಡೆದ ಸಂಭಾವನೆ ಎಷ್ಟು ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 1 =
Remember me
