ನವದೆಹಲಿ:ಟೀಮ್​ ಇಂಡಿಯಾದ ವೇಗದ ಬೌಲರ್​ ಬುಮ್ರಾರನ್ನು ವರಿಸಲಿರುವ ಕ್ರೀಡಾ ವಿಶ್ಲೇಷಕಿ, ನಿರೂಪಕಿ ಸಂಜನಾ ಗಣೇಶನ್​ರವರ ಹಳೇಯ ಟ್ವೀಟ್​ ಇದೀಗ ವೈರಲ್​ ಆಗಿದೆ. ಇಬ್ಬರ “ಮನಸ್ಥಿತಿಯ ಏರುಪೇರು”ವಿನಲ್ಲಿ ಸಾಮ್ಯತೆ ಇರುವ ಬಗ್ಗೆ ಸಂಜನಾ ಟ್ವೀಟ್​ ಮಾಡಿದ್ದರು.
ಕಳೆದ ಜನವರಿ 10ರಂದು ಮಾಡಿರುವ ಟ್ವೀಟ್​ ಇದಾಗಿದೆ. ಮೈದಾನದಲ್ಲಿರುವಾಗ ಬುಮ್ರಾ ಅವರ ಮನಸ್ಥಿತಿಗೂ ಮತ್ತು ನನ್ನ ದಿನನಿತ್ಯದ ಮನಸ್ಥಿತಿಯ ಏರುಪೇರಿಗು ತುಂಬಾ ಸಾಮ್ಯತೆ ಇದೆ ಎಂದು ಸಂಜನಾ ಬರೆದುಕೊಂಡಿದ್ದರು.
ನವೆಂಬರ್​ನಿಂದ ಜನವರಿವರೆಗೆ ಟೀಂ ಇಂಡಿಯಾದ ಆಸ್ಟ್ರೇಲಿಯಾ ಪ್ರವಾಸದ ವೇಳೆ ಇಎಸ್​ಪಿಎಸ್​ ಕ್ರಿಕ್​ಇನ್ಫೋ ಮಾಡಿದ್ದ ಟ್ವೀಟ್​ಗೆ ಸಂಜನಾ ಅವರ ನೀಡಿದ್ದ ಪ್ರತಿಕ್ರಿಯೆ ಇದಾಗಿತ್ತು. ನಿಮ್ಮ ಭಾನುವಾರ ಜಸ್ಪ್ರಿತ್ ಬುಮ್ರಾ ಅವರಿಗಿಂತ ಉತ್ತಮವಾಗಿದೆಯೇ? ಎಂದು ಇಎಸ್​ಪಿಎಸ್​ ಕ್ರಿಕ್​ಇನ್ಫೋ ಟ್ವೀಟ್​ ಮಾಡಿ ವಿಭಿನ್ನ ಮನಸ್ಥಿತಿಗಳಲ್ಲಿರುವ ಬುಮ್ರಾರ ನಾಲ್ಕು ಫೋಟೋಗಳನ್ನು ಪೋಸ್ಟ್​ ಮಾಡಿದ್ದರು. ಈ ಟ್ವೀಟ್​ಗೆ ಸಂಜನಾ ಪ್ರತಿಕ್ರಿಯೆ ನೀಡಿದ್ದರು. ಇದೀಗ ಆ ಟ್ವೀಟ್​ ವೈರಲ್​ ಆಗಿದೆ.
ಇದನ್ನೂ ಓದಿರಿ:ಆ ಹುಡುಗಿ ಬೇಡ ಕಣೋ ಎಂದ್ರೂ ಕೇಳ್ದೆ ಮದ್ವೆಯಾಗಿ ಪಡಬಾರದ ಕಷ್ಟ ಪಡ್ತಿದ್ದೇನೆ- ಪ್ಲೀಸ್​ ಪರಿಹಾರ ಹೇಳಿ
Jasprit Bumrah’s on-field moods & my daily mood swings look exactly alike. 🙊😋#AUSvINDhttps://t.co/e0kmWVNCHR
— Sanjana Ganesan (@SanjanaGanesan)January 10, 2021

ಬುಮ್ರಾ ಹಾಗೂ ನಿರೂಪಕಿ ಸಂಜನಾ ಗಣೇಶನ್ ಜೋಡಿ ಮಾರ್ಚ್ 14 ಮತ್ತು 15 ರಂದು ಗೋವಾದಲ್ಲಿ ಹಸೆಮಣೆ ಏರಲಿದೆ ಎಂದು ವರದಿಯಾಗಿದೆ. ಇಬ್ಬರ ಮದುವೆ ವಿಚಾರ ಈ ಮುಂಚೆಯೇ ಸಾಮಾಜಿಕ ಜಾಲತಾನದಲ್ಲಿ ಹರಿದಾಡಿದೆ. 27 ವರ್ಷದ ಬುಮ್ರಾ ಮದುವೆ ಸಿದ್ಧತೆಗಾಗಿಯೇ ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದಿಂದ ಬಿಡುವು ಪಡೆದಿದ್ದರು ಎನ್ನಲಾಗಿದೆ.
ಕ್ರೀಡಾ ವಾಹಿನಿ ಸ್ಟಾರ್‌ಸ್ಪೋರ್ಟ್ಸ್‌ನಲ್ಲಿ ನಿರೂಪಕಿಯಾಗಿರುವ ಸಂಜನಾ ಗಣೇಶನ್, 2014ರ ಮಿಸ್ ಇಂಡಿಯಾದ ಫೈನಲಿಸ್ಟ್ ಆಗಿದ್ದಾರೆ. 28 ವರ್ಷದ ಸಂಜನಾ, ಸ್ಟಾರ್ ಸ್ಪೋರ್ಟ್ಸ್ ಅಲ್ಲದೆ, ಹಲವು ಖಾಸಗಿ ಚಾನೆಲ್‌ಗಳಲ್ಲೂ ಕಾರ್ಯಕ್ರಮ ನಿರೂಪಿಸುತ್ತಿದ್ದಾರೆ. ಐಪಿಎಲ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ವೇಳೆ ತಜ್ಞರೊಂದಿಗೆ ವಿಶ್ಲೇಷಣೆ ಮಾಡಿ, ಮೈದಾನದಿಂದ ವರದಿ ಮಾಡಿದ್ದಾರೆ.
ಇದನ್ನೂ ಓದಿರಿ:ಬಾಯ್​ಫ್ರೆಂಡ್​ ಮುಖವಾಡ ಕಳಚಿಬಿದ್ದ ಬೆನ್ನಲ್ಲೇ ಆತ್ಮಹತ್ಯೆ ಮಾಡಿಕೊಂಡ ಯುವತಿ..!
ಕೋವಿಡ್-19 ಮಾರ್ಗಸೂಚಿಯಿಂದಾಗಿ ಎರಡು ಕುಟುಂಬದ ಸದಸ್ಯರಷ್ಟೇ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಬುಮ್ರಾ-ಸಂಜನಾ ಜೋಡಿಯ ವಿವಾಹದ ಕುರಿತು ಎರಡು ಕುಟುಂಬ ಸದಸ್ಯರು ಇನ್ನು ಖಚಿತಪಡಿಸಿಲ್ಲ. ಇದಕ್ಕೂ ಮೊದಲು ಬುಮ್ರಾ ತೆಲುಗು ನಟಿ ಅನುಪಮಾ ಪರಮೇಶ್ವರನ್ ಅವರನ್ನು ಮದುವೆಯಾಗಲಿದ್ದಾರೆ ಎನ್ನಲಾಗಿತ್ತು. ನಟಿ ತಾಯಿಯೇ ಈ ವಿಷಯವನ್ನು ತಳ್ಳಿಹಾಕಿದ್ದರು.(ಏಜೆನ್ಸೀಸ್​)
ಕ್ರೀಡಾ ವಿಶ್ಲೇಷಕಿಯನ್ನು ವರಿಸಲಿದ್ದಾರೆ ಟೀಮ್ ಇಂಡಿಯಾ ವೇಗಿ ಜಸ್‌ಪ್ರೀತ್ ಬುಮ್ರಾ..?

VIDEO | ಶ್ರೀಲಂಕಾ ಬ್ಯಾಟ್ಸ್‌ಮನ್ ವಿರುದ್ಧ ನೀಡಿದ ಔಟ್ ತೀರ್ಪಿನ ಬಗ್ಗೆ ಬಿಸಿಬಿಸಿ ಚರ್ಚೆ!

VIDEO| ಈ ಬೌಲಿಂಗ್ ಶೈಲಿ ನೋಡಿ; ಚೆಂಡಿನ ಬಗ್ಗೆ ಗೊತ್ತಿಲ್ಲ, ತಲೆಯಂತೂ ತಿರುಗುತ್ತದೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
