ನವದೆಹಲಿ:ಮುಂದಿನ ವರ್ಷ ಏಪ್ರಿಲ್​ನಿಂದ ಹಳೆಯ ವಾಹನಗಳು ಸವಾರರಿಗೆ ಬಲುಭಾರ ಆಗಲಿವೆ. 15 ವರ್ಷ ಹಳೆಯ ವಾಹನ ಗುಜರಿಗೆ ಹಾಕುವ ನೀತಿ ಜಾರಿಯಾಗುವುದರಿಂದ ನಿಮ್ಮ ವಾಹನದ ಬಳಕೆ ಮುಂದುವರಿಸಬೇಕಾದಲ್ಲಿ ನೋಂದಣಿ ನವೀಕರಣ ಶುಲ್ಕವನ್ನು ಈಗಿರುವ ದರಕ್ಕಿಂತ ಬರೋಬ್ಬರಿ 8 ಪಟ್ಟು ಹೆಚ್ಚು ಕಟ್ಟಬೇಕಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಈ ಸಂಬಂಧ ಅಧಿಸೂಚನೆ ಪ್ರಕಟಿಸಿದ್ದು, ಇದರಲ್ಲಿನ ಅಂಶ ಮುಂದಿನ 12 ತಿಂಗಳುಗಳಲ್ಲಿ ಹಂತ ಹಂತವಾಗಿ ಅನುಷ್ಠಾನವಾಗಲಿದೆ.
ಸಾರಿಗೆ ಸಚಿವಾಲಯದ ಅಧಿಸೂಚನೆ ಪ್ರಕಾರ 15 ವರ್ಷ ಹಳೆಯ ವಾಹನ ನೋಂದಣಿ ನವೀಕರಣಕ್ಕೆ ಕಟ್ಟುವ ಶುಲ್ಕ ಈಗಿರುವ 600 ರೂ.ನಿಂದ ಏಪ್ರಿಲ್​ನಲ್ಲಿ 5,000 ರೂ.ಗೆ ಏರಿಕೆ ಆಗಲಿದೆ. ಇದೇ ರೀತಿ, ದ್ವಿಚಕ್ರ ವಾಹನಗಳ ನೋಂದಣಿ ನವೀಕರಣ ದರ 300 ರೂ.ಇರುವುದು 1,000 ರೂ. ಆಗಲಿದೆ. 15 ವರ್ಷ ಮೇಲ್ಪಟ್ಟ ಬಸ್ ಅಥವಾ ಟ್ರಕ್​ಗಳಿಗೆ ಫಿಟ್​ನೆಸ್ ಪ್ರಮಾಣ ಪತ್ರ ನವೀಕರಣ ಶುಲ್ಕ ಈಗಿರುವ 1,500 ರೂ.ನಿಂದ 12,500 ರೂ.ಗೆ ಹೆಚ್ಚಳ ಆಗಲಿದೆ. ನೋಂದಣಿ ನವೀಕರಣ ವಿಳಂಬ ಮಾಡಿದಲ್ಲಿ ವೈಯಕ್ತಿಕ ಬಳಕೆ ವಾಹನಗಳಿಗೆ ತಿಂಗಳಿಗೆ 300 ರೂ., ವಾಣಿಜ್ಯ ಬಳಕೆ ವಾಹನಗಳಿಗೆ 500 ರೂ.ಪಾವತಿಸಬೇಕು. ಇದೇ ರೀತಿ ಫಿಟ್​ನೆಸ್ ಪ್ರಮಾಣಪತ್ರ ನವೀಕರಣ ವಿಳಂಬವಾದರೂ ದಿನಕ್ಕೆ 50 ರೂಪಾಯಿ ದಂಡ ಶುಲ್ಕ ಪಾವತಿಸಬೇಕು. ವೈಯಕ್ತಿಕ ಬಳಕೆಯ ವಾಹನಗಳ ಮಾಲೀಕರು 15ವರ್ಷ ಹಳೆಯ ವಾಹನಗಳ ಬಳಕೆಯನ್ನು ಮುಂದುವರಿಸುವುದೇ ಆದರೆ 5 ವರ್ಷಗಳಿಗೆ ಒಮ್ಮೆ ನೋಂದಣಿ ನವೀಕರಿಸಬೇಕು. ವಾಣಿಜ್ಯ ವಾಹನಗಳನ್ನು ಇದೇ ರೀತಿ ಬಳಸುವುದಾದರೆ 8 ವರ್ಷಗಳಿಗೆ ಒಮ್ಮೆ ಫಿಟ್​ನೆಸ್ ಪ್ರಮಾಣಪತ್ರ ನೋಂದಣಿ ನವೀಕರಿಸಬೇಕಿದೆ.
ರಸ್ತೆ ಸುರಕ್ಷತಾ ಮಂಡಳಿ ಸ್ಥಾಪನೆಗೆ ಅಧಿಸೂಚನೆ:ರಾಷ್ಟ್ರೀಯ ರಸ್ತೆ ಸುರಕ್ಷತಾ ಮಂಡಳಿ ಸ್ಥಾಪನೆಗೆ ಸಂಬಂಧಿಸಿ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಅಧಿಸೂಚನೆ ಪ್ರಕಟಿಸಿದೆ. ಸೆ.3ರಂದು ಪ್ರಕಟವಾಗಿರುವ ಈ ಅಧಿಸೂಚನೆಗೆ ಪೂರಕವಾಗಿ ಮಂಡಳಿಯ ಚೇರ್ಮನ್ ಮತ್ತು ಸದಸ್ಯರ ನೇಮಕಕ್ಕೆ ಅರ್ಹತೆಯ ಮಾನದಂಡಗಳ ವಿವರಗಳಿರುವ ನಿಯಮಗಳನ್ನೂ ಪ್ರಕಟಿಸಿದೆ. ಈ ಮಂಡಳಿಯ ಕೇಂದ್ರ ಕಚೇರಿ ದೆಹಲಿಯಲ್ಲಿ ಇರಲಿದ್ದು, ಪ್ರಾದೇಶಿಕವಾಗಿ ಕಚೇರಿ ಸ್ಥಾಪಿಸುವ ಅಧಿಕಾರ ಮಂಡಳಿಗೇ ಬಿಟ್ಟಿದೆ. ಮಂಡಳಿಯ ಸದಸ್ಯ ಬಲ ಏಳನ್ನು ಮೀರುವಂತಿಲ್ಲ. ರಸ್ತೆ ಸುರಕ್ಷತೆ, ನವೋನ್ವೇಷಣೆ, ಹೊಸ ತಂತ್ರಜ್ಞಾನಗಳ ಅನ್ವಯಿಸುವಿಕೆ ಮುಂತಾದವುಗಳನ್ನು ಉತ್ತೇಜಿಸುವ ಹೊಣೆಗಾರಿಕೆ ಈ ಮಂಡಳಿಯದ್ದು.
ಏನಿದು ಗುಜರಿ ನೀತಿ?:ರಾಷ್ಟ್ರೀಯ ವಾಹನ ಗುಜರಿ ನೀತಿ ಪ್ರಕಾರ, ಮೂರು ಬಾರಿ ಫಿಟ್ನೆಸ್ ಟೆಸ್ಟ್ ಫೇಲ್ ಆದ ವಾಹನಗಳು ಕಡ್ಡಾಯವಾಗಿ ಸ್ಕ್ರಾ್ಯಪ್ ಆಗಲಿವೆ. ಸ್ವಯಂಪ್ರೇರಿತ ಸ್ಕ್ರಾ್ಯಪ್ ನಿರ್ಧಾರವನ್ನೂ ಫಿಟ್ನೆಸ್ ಟೆಸ್ಟ್ ಆಧರಿಸಿಯೇ ನಿರ್ಧರಿಸಲಾಗುತ್ತದೆ. ಹಳೆ ವಾಹನ ಗುಜರಿಗೆ ಹಾಕಿದ್ರೆ ಹೊಸ ವಾಹನ ಖರೀದಿಗೆ ಉತ್ತೇಜನ ಸಿಗಲಿದೆ. ಮಾಲಿನ್ಯಕಾರಕ ವಾಹನಗಳ ಮೇಲೆ ತೆರಿಗೆ ಹೊರೆ-ಹಸಿರು ತೆರಿಗೆ ಮತ್ತು ಇತರೆ ಸೆಸ್, ಭಾರಿ ಮೊತ್ತದ ದಂಡಗಳು ಖಚಿತವಾಗಿ ಪಾವತಿಸಬೇಕಾಗುತ್ತದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 17 =
Remember me
