ನವದೆಹಲಿ:ಆಕಸ್ಮಿಕವಾಗಿ ಬೆಡ್​ ಬಾಕ್ಸ್​ನಲ್ಲಿ ಸಿಲುಕಿದ್ದ 84ವರ್ಷದ ವೃದ್ಧೆಯನ್ನು ಸಿಸಿಟಿವಿ ಕ್ಯಾಮರಾ ಸಹಾಯದಿಂದ ರಕ್ಷಿಸಿದ ಘಟನೆ ದೆಹಲಿಯಲ್ಲಿ ನಡೆದಿದೆ.
ಸ್ವರ್ಶ ಕೊಹ್ಲಿ (84) ಅವರು ಈ ಅವಘಡಕ್ಕೆ ತುತ್ತಾಗಿ, ಯಶಸ್ವಿಯಾಗಿ ರಕ್ಷಿಸಲ್ಪಟ್ಟ ಅಜ್ಜಿ. ಮನೆಯಲ್ಲಿ ಹೆಚ್ಚಿಗೆ ಸಮಯ ಅಜ್ಜಿ-ಮೊಮ್ಮಗಳು ಇರುತ್ತಿದ್ದರು. ಕೆಲವೊಮ್ಮೆ ಮೊಮ್ಮಗಳೂ ಹೊರಗೆ ಹೋಗುವ ಪರಿಸ್ಥಿತಿ ಬರುತ್ತಿತ್ತು. ಹಾಗಾಗಿ ತನ್ನ ಅಜ್ಜಿಯ ಸುರಕ್ಷತೆ ದೃಷ್ಟಿಯಿಂದ ಮೊಮ್ಮಗಳು ಮನೆಯ ಒಳಗೆ ಸಿಸಿಟಿವಿ ಕ್ಯಾಮರಾ ಇನ್​​​ಸ್ಟಾಲ್​ ಮಾಡಿಸಿದ್ದಳು. ಈ ಸಿಸಿಟಿವಿ ಕ್ಯಾಮರಾವೇ ಅಜ್ಜಿಯನ್ನು ಪಾರುಮಾಡಿತು.ಇದನ್ನೂ ಓದಿ:ಜ್ವರ ಬಂತೆಂದು ಆಸ್ಪತ್ರೆಗೆ ದಾಖಲಾದ ರೋಗಿಗಳಿಬ್ಬರ ಬಿಲ್​ ಮೊತ್ತ ಕೇಳಿದ್ರೆ ಶಾಕ್​ ಆಗೋದು ಖಂಡಿತ!
ಸಿಸಿಟಿವಿ ದೃಶ್ಯಗಳು ತನ್ನ ಮೊಬೈಲ್​​ನಲ್ಲಿ ಕಾಣಿಸುವಂತೆ ಮೊಮ್ಮಗಳು ವ್ಯವಸ್ಥೆ ಮಾಡಿಕೊಂಡಿದ್ದಳು. ಗುರುವಾರ ಅಜ್ಜಿ ಯಾವುದೋ ವಸ್ತುವನ್ನು ತೆಗೆದುಕೊಳ್ಳುವುದಕ್ಕೋಸ್ಕರ್​ ಬೆಡ್​ ಬಾಕ್ಸ್​​ನ್ನು ತೆರೆದಿದ್ದರು. ಹಾಗೆ ತೆಗೆಯುತ್ತಿದ್ದಾಗ ಆಯ ತಪ್ಪಿ ಅದರಲ್ಲಿ ಬಿದ್ದರು. ಒಮ್ಮೆಲೆ ಬಾಕ್ಸ್​ ಮುಚ್ಚಿಕೊಂಡು, ಲಾಕ್​ ಆಯಿತು. ಒಳಗೆ ಇದ್ದ ಅಜ್ಜಿಗೆ ಅದರ ಭಾರವಾದ ಮುಚ್ಚಳ ತೆಗೆಯಲು ಸಾಧ್ಯವಾಗಲಿಲ್ಲ.ತುಂಬ ಹೊತ್ತಾದರೂ ಅಜ್ಜಿ ಕಾಣದಿದ್ದಾಗ, ಅನುಮಾನಗೊಂಡ ಮೊಮ್ಮಗಳು ಮೊಬೈಲ್​ ತೆರೆದು, ಸಿಸಿಟಿವಿ ಫೂಟೇಜ್​ ನೋಡಿದಳು. ಆಗ ಅಜ್ಜಿ ಬೆಡ್​ಬಾಕ್ಸ್​​ನಲ್ಲಿ ಬಿದ್ದಿದ್ದು ಗೊತ್ತಾಯಿತು.ಇದನ್ನೂ ಓದಿ:ಇನ್ನು ಮೂರುದಿನ ನಡೆಯೋದಿಲ್ಲ ಕೊವಿಡ್​-19 ಸ್ವಾಬ್​ ಟೆಸ್ಟ್​ !
ಕೂಡಲೇ ಮೊಮ್ಮಗಳು ಪೊಲೀಸರಿಗೆ ಫೋನ್​ ಮಾಡಿ, ಅವರು ಬಂದು ಅಜ್ಜಿಯನ್ನು ರಕ್ಷಿಸಿದ್ದಾರೆ. (ಏಜೆನ್ಸೀಸ್​)
8 ವರ್ಷದಲ್ಲಿ ಕಟ್ಟಿದ ಸೇತುವೆ ಒಂದು ತಿಂಗಳೂ ಉಳಿಯಲಿಲ್ಲ; ಕುಸಿದುಬಿದ್ದ ಬೆನ್ನಲ್ಲೇ ಸಿಎಂ ವಿರುದ್ಧ ಆಕ್ರೋಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 17 =
Remember me
