ಉಮರ್​ಕೋಟೆ:70 ವರ್ಷದ ವೃದ್ಧೆಯೊಬ್ಬರು ತನ್ನ ಪಿಂಚಣಿ ಹಣವನ್ನು ಪಡೆಯಲು ಸುಡಿ ಬಿಸಿಲಿನಲ್ಲಿ, ಕಷ್ಟ ಪಟ್ಟು ನಡೆದು ಸಾಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಒಡಿಶಾದ ನಬರಂಗಪುರದ ಸೂರ್ಯ ಹರಿಜನ್ ಎಂಬ ವೃದ್ಧೆ ನಡೆಯಲು ಮುರಿದ ಪ್ಲಾಸ್ಟಿಕ್ ಕುರ್ಚಿಯನ್ನು ಊರುಗೋಲಿನಂತೆ ಬಳಸಿಕೊಂಡು ಬರಿಗಾಲಿನಲ್ಲಿ ಹೆಜ್ಜೆ ಹಾಕಿದ್ದಾರೆ.
ಇದನ್ನೂ ಓದಿ:VIDEO | ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸುವಂತೆ ವಿನಂತಿಸಿದ ಪೊಲೀಸ್; ಅಧಿಕಾರಿಯ ಕಾರ್ಯಕ್ಕೆ ಸಿಎಂ ಶ್ಲಾಘನೆ

VIDEO | Surya Harijan, a 70-year-old woman from Odisha's Nabarangpur, had to walk several kilometres barefoot under the scorching sun, using a broken chair as support, to collect her pension money.pic.twitter.com/omWpdUcdVb
ವರದಿಗಳ ಪ್ರಕಾರ ವೃದ್ಧೆ ಬಡವಳಾಗಿದ್ದು, ಆಕೆಯ ಮಗ ಕೂಲಿ ಕೆಲಸಕ್ಕೆಂದು ವಲಸೆ ಹೋಗಿದ್ದಾನೆ. ಹೀಗಾಗಿ ಪಿಂಚಣಿ ಹಣ ತಂದು ಕೊಡಲು ಯಾರೂ ಇಲ್ಲವಾಗಿರುವುದರಿಂದ, ಕೊನೆಗೆ ವೃದ್ಧೆಯೇ ಪಿಂಚಣಿ ಮೊತ್ತ ಪಡೆದುಕೊಳ್ಳಲು ಕಷ್ಟ ಪಟ್ಟು ಹೋಗಿದ್ದಾಳೆ. ವೃದ್ಧೆಯ ಇನ್ನೋರ್ವ ಪುತ್ರ ದನ ಮೇಯಿಸಲು ಕೆಲಸಕ್ಕೆ ಹೋಗಿ ಜೀವನ ಸಾಗಿಸುತ್ತಿದ್ದಾನೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಸಿದ್ದರಾಮಯ್ಯ ಕೋಟಿಗಟ್ಟಲೇ ಸಾಲಗಾರ! ಮಾಜಿ ಸಿಎಂಗಿಂತ ಪತ್ನಿಯೇ ಶ್ರೀಮಂತೆ
ಹಿಂದಿನಿಂದಲೂ ವೃದ್ಧೆಗೆ ಆನ್​ಲೈನ್ ಮೂಲಕ ಪಿಂಚಣಿ ಮೊತ್ತ ಬ್ಯಾಂಕ್ ಖಾತೆಗೆ ಜಮಾವಣೆಯಾಗುತ್ತಿತ್ತು. ಆದರೆ ಬ್ಯಾಂಕ್ ಪ್ರಾಧಿಕಾರದ ಪ್ರಕಾರ ಆಕೆಯ ಎಡಗೈ ಹೆಬ್ಬರಳಿನ ಮಾದರಿ ಕೆಲವೊಮ್ಮೆ ಹೊಂದಿಕೆಯಾಗುವುದಿಲ್ಲ. ಇದರಿಂದ ಸೂಕ್ತವಾಗಿ ಪಿಂಚಣಿ ಹಣವನ್ನು ಪಾವತಿಸಲು ಸಮಸ್ಯೆಯಾಗುತ್ತಿದೆ. ಇದರಿಂದಾಗಿ ಕಳೆದ ಮೂರ್ನಾಲ್ಕು ತಿಂಗಳಿನಿಂದ ಸರಿಯಾಗಿ ಪಿಂಚಣಿ ಮೊತ್ತ ಜಮೆ ಆಗುತ್ತಿರಲಿಲ್ಲ. ಹೀಗಾಗಿ ವೃದ್ಧೆ ಬ್ಯಾಂಕ್​ಗೆ ತೆರಳಬೇಕಾಗಿ ಬಂತು ಎಂದು ವರದಿಯಾಗಿದೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eighteen − seven =
Remember me
