ಹೈದರಾಬಾದ್:ಕರೊನಾವೈರಸ್​​ಗೆ ತುತ್ತಾಗಿರುವ ಅನುಮಾನದ ಮೇಲೆ ವೃದ್ಧ ದಂಪತಿ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೈದರಾಬಾದ್‌ನ ಪಂಜಗುಟ್ಟದಲ್ಲಿ ನಡೆದಿದೆ.63 ವರ್ಷದ ವೃದ್ಧ ಹಾಗೂ ಅವರ 60 ವರ್ಷದ ಪತ್ನಿ ಆತ್ಮಹತ್ಯೆ ಮಾಡಿಕೊಂಡವರು.ಕಳೆದ ಕೆಲವು ದಿನಗಳಿಂದ ಶೀತ ಮತ್ತು ಜ್ವರದಿಂದ ಬಳಲುತ್ತಿದ್ದ ಅವರು ತಮಗೆ ಸೋಂಕು ತಗುಲಿರಬಹುದು ಮತ್ತು ಅದು ಕುಟುಂಬದ ಇತರ ಸದಸ್ಯರಿಗೂ ಹರಡಬಹುದೆಂದು ಭಯಪಟ್ಟಿದ್ದರು.ವೃದ್ಧ ದಂಪತಿ ತಮ್ಮ ಪುತ್ರರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು.
ಇದನ್ನೂ ಓದಿ:ನನ್ನ ಜತೆ ‘ಕದ್ದು ಮುಚ್ಚಿ’ ಮುಂದುವರಿಸು.. ಇಲ್ಲದಿದ್ದರೆ ಖಾಸಗಿ ಕ್ಷಣಗಳ ವಿಡಿಯೋ ಬಹಿರಂಗಗೊಳಿಸುವೆ ಎಂದ
ಘಟನಾ ಸ್ಥಳದಿಂದ ಆತ್ಮಹತ್ಯೆ ಪತ್ರವನ್ನು ವಶಪಡಿಸಿಕೊಳ್ಳಲಾಗಿದೆ. ಶನಿವಾರ ಬೆಳಿಗ್ಗೆ 11: 30 ಕ್ಕೆ ಅವರ ಮಗ ಅವರನ್ನು ಭೇಟಿಯಾಗಲು ಮನೆಗೆ ಬಂದಾಗ ಆ ಮನೆ ಬೀಗ ಹಾಕಿರುವುದನ್ನು ಕಂಡರು. ಕಿಟಕಿಯಲ್ಲಿ ಇಣುಕಿ ನೋಡಿದಾಗ, ಅವರ ತಂದೆ ತಾಯಿ ನೆಲದ ಮೇಲೆ ಮಲಗಿರುವುದನ್ನು ಗಮನಿಸಿದರು. ಆಘಾತಗೊಂಡ ಅವರು ತಕ್ಷಣ ಬಲವಾಗಿ ಬಾಗಿಲು ತಳ್ಳಿ ತೆರೆದಾಗ ಅದಾಗಲೇ ವೃದ್ಧ ದಂಪತಿಯ ಪ್ರಾಣಪಕ್ಷಿ ಹಾರಿಹೋಗಿತ್ತು. ಈ ಕುರಿತು ಅವರು ಪೊಲೀಸರಿಗೆ ಮಾಹಿತಿ ನೀಡಿದರು.
ವೃದ್ಧೆ ಬರೆದಿಟ್ಟ ಆತ್ಮಹತ್ಯೆ ಪತ್ರದಲ್ಲೇನಿದೆ? :ಶವಗಳ ಬಳಿ ಆತ್ಮಹತ್ಯೆ ಪತ್ರ ಕಂಡುಬಂದಿದ್ದು, ಅದನ್ನು ವೃದ್ಧೆ ಬರೆದಿದ್ದಾರೆನ್ನಲಾಗಿದೆ. ‘ಕಳೆದ ಕೆಲವು ದಿನಗಳಿಂದ ತಾನು ಮತ್ತು ಪತಿ ಜ್ವರ ಮತ್ತು ಶೀತದಿಂದ ಬಳಲುತ್ತಿದ್ದೆವು’ ಎಂದು ಪತ್ರದಲ್ಲಿ ಬರೆಯಲಾಗಿದೆ. ತಮಗೆ ಕರೊನಾವೈರಸ್ ತಗುಲಿರಬಹುದು ಮತ್ತು ಅವರ ಮಕ್ಕಳು ಮತ್ತು ಮೊಮ್ಮಕ್ಕಳಿಗೂ ಇದು ಹರಡಬಹುದೆಂದು ಶಂಕಿಸಿ, ಅವರು ಕೀಟನಾಶಕ ಸೇವಿಸಿದ್ದಾರೆ” ಎನ್ನಲಾಗಿದೆ.
ಇದನ್ನೂ ಓದಿ:ಬಿಸಿಯೂಟದ ಜತೆಗೆ ಮಕ್ಕಳಿಗೆ ಇನ್ಮುಂದೆ ಉಪಾಹಾರ- ಹೊಸ ನಿಯಮದಲ್ಲೇನಿದೆ?
ಆದರೆ ಮೃತ ದಂಪತಿ COVID-19 ಪರೀಕ್ಷೆಗೆ ಒಳಗಾಗಿದ್ದರೇ? ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಈ ದಂಪತಿಯನ್ನು ಮಕ್ಕಳು ಆಗಾಗ್ಗೆ ಭೇಟಿ ಮಾಡುತ್ತಿದ್ದರು ಎಂದು ಪಂಜಗುಟ್ಟಾ ವಿಭಾಗ ಸಹಾಯಕ ಪೊಲೀಸ್ ಆಯುಕ್ತರು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.ಪ್ರಕರಣ ದಾಖಲಿಸಲಾಗಿದೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವೃದ್ಧ ದಂಪತಿ ಶನಿವಾರ ಬೆಳಿಗ್ಗೆ ಸಾವಿಗೀಡಾದ ಐದು ಗಂಟೆಗಳ ನಂತರ ಈ ಘಟನೆ ಬೆಳಕಿಗೆ ಬಂದಿದೆ ಎಂದು ತನಿಖಾ ಅಧಿಕಾರಿಗಳು ಶಂಕಿಸಿದ್ದಾರೆ.
ಖಿನ್ನತೆಗೆ ಒಳಗಾಗಿದ್ದ ಸುಶಾಂತ್​ ಅರೆಹುಚ್ಚರಂತಾಗಿದ್ದರು, ತಾಯಿಯಂತೆ ರಿಯಾ ಆರೈಕೆ ಮಾಡುತ್ತಿದ್ದರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − seven =
Remember me
