ವಾಷಿಂಗ್ಟನ್​ ಡಿಸಿ:ಕೆಲವರು ಮಾತ್ರ ದೀರ್ಘಕಾಲದವರೆಗೆ ಆರೋಗ್ಯಕರವಾಗಿ ಮತ್ತು ಜೀವಂತವಾಗಿರಲು ಸಾಕಷ್ಟು ಅದೃಷ್ಟವನ್ನು ಹೊಂದಿರುತ್ತಾರೆ. ಆ ಸಾಲಿಗೆ ಅಮೆರಿಕದ ಎಲಿಜಬೆತ್​​ ಫ್ರಾನ್ಸಿಸ್​​ ಕೂಡ ಸೇರಿದ್ದಾರೆ. ಪ್ರಸ್ತುತ ಹೂಸ್ಟನ್‌ನಲ್ಲಿ ವಾಸಿಸುತ್ತಿರುವ ಎಲಿಜಬೆತ್ ಫ್ರಾನ್ಸಿಸ್ ಜುಲೈ 25ರಂದು 115ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಮೊದಲನೆಯ ಮಹಾಯುದ್ಧದಿಂದ ಟೈಟಾನಿಕ್ ಮುಳುಗುವವರೆಗೆ ಎಲ್ಲವನ್ನೂ ಇವರು ನೋಡಿದ್ದಾರೆ.
ಇದನ್ನು ಓದಿ:ವಿದೇಶಕ್ಕೆ ತೆರಳುವ ಎಲ್ಲರಿಗೂ ಟ್ಯಾಕ್ಸ್​​​ ಕ್ಲಿಯರೆನ್ಸ್ ಸರ್ಟಿಫಿಕೇಟ್ ಅವಶ್ಯಕತೆ ಇಲ್ಲ; ಸರ್ಕಾರದ ಸ್ಪಷ್ಟನೆ
ದಿ ಗಾರ್ಡಿಯನ್ ಪ್ರಕಾರ, ಎಲಿಜಬೆತ್​​ ಫ್ರಾನ್ಸಿಸ್ ವಿಶ್ವದ ನಾಲ್ಕನೇ ಅತ್ಯಂತ ಹಳೆಯ ವ್ಯಕ್ತಿಯಾಗಿ ಸ್ಥಾನ ಪಡೆದುಕೊಂಡಿದ್ದಾರೆ. ಅವರು ವಾಸಿಸುತ್ತಿರುವ ಅತ್ಯಂತ ಹಿರಿಯ ಅಮೆರಿಕನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಫ್ರಾನ್ಸಿಸ್ ಈಗ ತನ್ನ ಮಗಳೊಂದಿಗೆ ವಾಸಿಸುತ್ತಿದ್ದಾರ. ಅವರು ಬಹಳಷ್ಟು ಟಿವಿ ಕಾರ್ಯಕ್ರಮಗಳನ್ನು ಒಟ್ಟಿಗೆ ವೀಕ್ಷಿಸಲು ಇಷ್ಟಪಡುತ್ತಾರೆ. ಅವರ ಜೀವನದ ಇಂತಹ ಸುದೀರ್ಘ ಹಂತದಲ್ಲಿ ಒಟ್ಟಿಗೆ ಇರುವುದು ನಮ್ಮ ಅದೃಷ್ಟ. ದೇವರಿಗೆ ಧನ್ಯವಾದ ಅರ್ಪಿಸುತ್ತೇನೆ. ಅಜ್ಜಿ ಇನ್ನೂ ನಮ್ಮೊಂದಿಗಿದ್ದಾಳೆ. ಪ್ರತಿ ವರ್ಷ ಅವರ ಹುಟ್ಟುಹಬ್ಬಕ್ಕೆ ಕೇಕ್ ಪಡೆಯುವುದನ್ನು ಆನಂದಿಸುತ್ತೇನೆ ಎಂದು ಫ್ರಾನ್ಸಿಸ್ ಮೊಮ್ಮಗಳು ಹ್ಯಾರಿಸನ್ ಹೇಳಿದರು.
ಫ್ರಾನ್ಸಿಸ್ 1909ರಲ್ಲಿ ಲೂಯಿಸಿಯಾನದ ಸೇಂಟ್ ಮೇರಿ ಪ್ಯಾರಿಷ್‌ನಲ್ಲಿ ಜನಿಸಿದರು. ಅವರು ಒಂಟಿಯಾಗಿ ತಮ್ಮ ಮಗಳನ್ನು ಬೆಳೆಸಿದರು. ಹೂಸ್ಟನ್‌ನಲ್ಲಿ ಕಾಫಿ ಅಂಗಡಿಯನ್ನು ನಡೆಸುತ್ತಿದ್ದರು. ಫ್ರಾನ್ಸಿಸ್ ಕಾರಿಗಿಂತ ಕಾಲ್ನಡಿಗೆಗೆ ಹೆಚ್ಚು ಆದ್ಯತೆ ನೀಡುತ್ತಾರೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ. ಫೆಬ್ರವರಿಯಲ್ಲಿ ಫ್ರಾನ್ಸಿಸ್ ಅವರಿಗೆ ದೇಶದ ಹಿರಿಯ ವ್ಯಕ್ತಿ ಎಂಬ ಬಿರುದನ್ನು ನೀಡಲಾಯಿತು. ಇದಕ್ಕೂ ಮೊದಲು ಈ ದಾಖಲೆಯನ್ನು ಎಡ್ಡಿ ಸೆಕರೆಲ್ಲಿ ಹೊಂದಿದ್ದರು. 116ನೇ ಹುಟ್ಟುಹಬ್ಬದ ಕೆಲವು ವಾರಗಳ ನಂತರ ಕ್ಯಾಲಿಫೋರ್ನಿಯಾದಲ್ಲಿ ಎಡ್ಡಿ ಸೆಕರೆಲ್ಲಿ ನಿಧನರಾದರು.
ವಾಷಿಂಗ್ಟನ್ ಪೋಸ್ಟ್‌ ಜತೆ ಫ್ರಾನ್ಸಿಸ್ ಮಾತನಾಡುವಾಗ, ದೀರ್ಘ, ಸಂತೋಷದ ಜೀವನವನ್ನು ಹೇಗೆ ಬದುಕಬೇಕು ಎಂಬುದರ ಕುರಿತು ಅವರು ಒಂದೇ ಸಲಹೆಯನ್ನು ನೀಡಿದ್ದಾರೆ. ನಿಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹೇಳಿ ಎಂದಿದ್ದಾರೆ. (ಏಜೆನ್ಸೀಸ್​​)
https://www.vijayavani.net/will-pm-narendra-modi-visit-manipur-before-or-after-his-ukraine-visit-questioning-congress-leader-jairam-rames
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:4 × 2 =
Remember me
