ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಬೆಳಗ್ಗೆ 8 ಗಂಟೆಗೆ ಆರಂಭವಾಗಿದ್ದು, ಇತ್ತೀಚಿನ ಮಾಹಿತಿ ಪ್ರಕಾರ, 11.00 ಗಂಟೆಗೆ ಮತದಾನ ಪ್ರಮಾಣ ಶೇಕಡ 6.28 ಆಗಿತ್ತು.
ಬೆಳಗ್ಗೆಯಿಂದಲೇ ಜನ ಮತಗಟ್ಟೆಗಳ ಎದುರು ಸರದಿಸಾಲಿನಲ್ಲಿ ನಿಂತು ಮತಚಲಾಯಿಸತೊಡಗಿದ್ದಾರೆ. ಪ್ರಮುಖ ರಾಜಕಾರಣಿಗಳು ಕೂಡ ಮತ ಚಲಾಯಿಸಿದ್ದು, ಇವರ ನಡುವೆ ಶತಾಯಿಷಿಯೊಬ್ಬರು ನಾಡಿನ ಗಮನಸೆಳೆದಿದ್ದಾರೆ. ದೆಹಲಿ ವಿಧಾನಸಭಾ ವ್ಯಾಪ್ತಿಯ ಅತಿ ಹಿರಿಯ ಮತದಾರರು ಇವರೆಂದು ಹೇಳಲಾಗುತ್ತಿದ್ದು, ಈ ಹಿರಿಯಜ್ಜಿ ಮನೆ ಮಂದಿ ಜತೆಗೆ ದೆಹಲಿಯ ಗ್ರೇಟರ್ ಕೈಲಾಶ್ ವಿಧಾನಸಭಾ ಕ್ಷೇತ್ರದ ಚಿತ್ತರಂಜನ್ ಪಾರ್ಕ್​ನ ಎಸ್​ಡಿಎಂಸಿ ಪ್ರೈಮರಿ ಸ್ಕೂಲ್​ನಲ್ಲಿರುವ ಮತಗಟ್ಟಗೆ ಆಗಮಿಸಿ ಮತಚಲಾಯಿಸಿದ್ದಾರೆ.
ಈ ಹಿರಿಯಜ್ಜಿಯ ವಯಸ್ಸು 111. ಹೆಸರು ಕಾಳಿತರ ಮಂಡಲ್​. ಮತ ಚಲಾಯಿಸಿದ ಬಳಿಕ ಮಾಧ್ಯಮಗಳ ಜತೆಗೆ ಮಾತನಾಡಿದ ಈ ಅಜ್ಜಿ, ಈ ಸಲದ ಚುನಾವಣೆಯಲ್ಲಿ ಮತ ಚಲಾಯಿಸಲು ಖುಷಿಯಾಗಿದೆ. ನಾನು ಇದುವರೆಗೆ ಎಷ್ಟು ಚುನಾವಣೆಗಳಲ್ಲಿ ಮತ ಚಲಾಯಿಸಿದ್ದೇನೆ ಎಂಬುದು ನೆನಪಿಲ್ಲ. ಆದರೂ, ಜವಾಬ್ದಾರಿಯಿತ ಪ್ರಜೆಯಾಗಿ ಮತ ಚಲಾಯಿಸಿದ್ದೇನೆ. ಎಲ್ಲ ಪೌರರೂ ಈ ಕರ್ತವ್ಯವನ್ನು ಮಾಡಬೇಕು ಎಂದು ವಿನಂತಿಸುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.
ಅವಿಭಜಿತ ಭಾರತದ ಬಾರಿಸಾಲ್​(ಈಗ ಬಾಂಗ್ಲಾದೇಶದಲ್ಲಿದೆ)ನಲ್ಲಿ 1908ರಲ್ಲಿ ಈ ಹಿರಿಯಜ್ಜಿ ಜನಿಸಿದರು. ದೇಶ ವಿಭಜನೆಯನ್ನು ಎರಡು ಬಾರಿ ಕಂಡವರು, ಅನೇಕ ರೀತಿಯ ವಿದ್ಯಮಾನಗಳಿಗೆ ಸಾಕ್ಷಿಯಾದವರು. ಎರಡು ಬಾರಿ ನಿರಾಶ್ರಿತರ ಶಿಬಿರದಲ್ಲಿ ಬದುಕಿದವರು. ದೆಹಲಿಯಲ್ಲಿ ಈ ಬಾರಿ 132 ಶತಾಯುಷಿಗಳು ಮತದಾರರ ಪಟ್ಟಿಯಲ್ಲಿದ್ದಾರೆ. ಅವರ ಪೈಕಿ 68 ಪುರುಷರು, 64 ಮಹಿಳೆಯರು. (ಏಜೆನ್ಸೀಸ್)
110-yrs-old Kalitara Mandal, the oldest voter of Delhi, casts her vote for#DelhiElections2020, at SDMC Primary School, Chittaranjan Park in Greater Kailash assembly constituencyhttps://t.co/AVBeQmkrpcpic.twitter.com/sqGFT1kyHy
— ANI (@ANI)February 8, 2020

Our Dadaji is a 107 years old this year. He was a member of the Drafting Committee of the Constitution of India. Dada has never missed casting his vote. Delhi, you have no excuse.#VoteKarDilli#DelhiElections2020#VoteKarDilli#DelhiElections2020pic.twitter.com/CVRLitewyW
— Mitali Mukherjee (@MitaliLive)February 8, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + nineteen =
Remember me
