ವಾಷಿಂಗ್ಟನ್​ಡಿಸಿ:ಭಾರತೀಯ ಮೂಲದ ಸುನೀತಾ ವಿಲಿಯಮ್ಸ್ ಸೇರಿದಂತೆ ಆರು ನಾಸಾ ಗಗನಯಾತ್ರಿಗಳು ಪ್ರಸ್ತುತ ಬಾಹ್ಯಾಕಾಶದಲ್ಲಿದ್ದಾರೆ ಎಂಬುದು ಗೊತ್ತೆ ಇದೆ. ಜುಲೈ 26ರಿಂದ ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ 2024ರ ಒಲಿಂಪಿಕ್ ಕ್ರೀಡಾಕೂಟವು ಪ್ರಾರಂಭವಾಗಿರುವುದು ತಿಳಿದಿದೆ. ಆದರೆ ಈ ಜಾಗತಿಕ ಸಂಭ್ರಮಕ್ಕೆ ನಾಸಾ ಗಗನಯಾತ್ರಿಗಳು ಸಹ ತಮ್ಮದೇ ಆದ ಬೇಸಿಗೆ ಒಲಿಂಪಿಕ್ಸ್​​​​ನೊಂದಿಗೆ ಸೇರಿಕೊಂಡರು.
ಇದನ್ನು ಓದಿ:ಮೊದಲ ವಿಶ್ವ ಯುದ್ಧ ನೋಡಿದ ದೀರ್ಘಾಯುಷಿ ಮಹಿಳೆ; 115ನೇ ವಸಂತಕ್ಕೆ ಕಾಲಿಟ್ಟ ಹಿರಿಯ ಜೀವ ಇವರೆ ನೋಡಿ..
ಪ್ಯಾರಿಸ್ ಒಲಿಂಪಿಕ್ಸ್ ಆರಂಭವನ್ನು ಆಚರಿಸಲು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಗಗನಯಾತ್ರಿಗಳು ತಮ್ಮದೇ ಆದ ಅಣಕು ಬೇಸಿಗೆ ಆಟಗಳನ್ನು ಆಡಿದ್ದಾರೆ. ನಾಸಾ ಬಿಡುಗಡೆ ಮಾಡಿರುವ ಹೊಸ ವೀಡಿಯೊದಲ್ಲಿ ಸುನೀತಾ ವಿಲಿಯಮ್ಸ್ ಸೇರಿದಂತೆ ಗಗನಯಾತ್ರಿಗಳು ಅಥ್ಲೀಟ್‌ಗಳಂತೆ ನಟಿಸಿದ್ದಾರೆ. ಎರಡು ನಿಮಿಷಗಳ ವೀಡಿಯೊವನ್ನು ನಾಸಾ ಹಂಚಿಕೊಂಡಿದೆ.
ವಿನೋದದಿಂದ ತುಂಬಿದ ಚಟುವಟಿಕೆಗಳು ಸುನೀತಾ ವಿಲಿಯಮ್ಸ್ ಸೇರಿದಂತೆ ಇತರೆ ಗಗನಯಾತ್ರಿಗಳು ಅಣಕು ಒಲಿಂಪಿಕ್ ಜ್ಯೋತಿಯನ್ನು ರವಾನಿಸುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ. ನಂತರ ಅವರ ಕ್ರೀಡಾ ಕೌಶಲಗಳ ತರಬೇತಿ ಪ್ರದರ್ಶನ. ಗಗನಯಾತ್ರಿಗಳು ಜಿಮ್ನಾಸ್ಟಿಕ್ಸ್, ವೇಟ್‌ಲಿಫ್ಟಿಂಗ್, ಓಟ, ಪಲ್ಟಿ, ಮತ್ತು ಹಾಸ್ಯಮಯವಾಗಿ ತೇಲುವ ನೀರನ್ನು ಕುಡಿಯುವುದು ಸೇರಿದಂತೆ ವಿಶಿಷ್ಟವಾದ ಮೈಕ್ರೋಗ್ರಾವಿಟಿ ಘಟನೆಗಳನ್ನು ವೀಡಿಯೊದಲ್ಲಿ ಹೈಲೈಟ್​ ಮಾಡಿದ್ದಾರೆ.
ಆಟಗಳು ಪ್ರಾರಂಭವಾಗಲಿ! 2024ರ #ಒಲಿಂಪಿಕ್ಸ್ ಅನ್ನು ಪ್ರಾರಂಭಿಸಲು ಪ್ರಪಂಚದಾದ್ಯಂತದ ಕ್ರೀಡಾಪಟುಗಳು ಒಟ್ಟುಗೂಡುತ್ತಿದ್ದಾರೆ. ನೀವು ಒಲಿಂಪಿಕ್ ಅಥ್ಲೀಟ್ ಆಗಿದ್ದರೆ, ನೀವು ಯಾವ ಕ್ರೀಡೆಯನ್ನು ಆಡುತ್ತೀರಿ? ಎಂಬ ಶಿರ್ಷಿಕೆಯಡಿ ವೀಡಿಯೊವನ್ನು ನಾಸಾ ಹಂಚಿಕೊಂಡಿದೆ.
Let the games begin!Athletes from across the world are gathering today to kick off the 2024#Olympics– pushing boundaries and inspiring generations. If you were an Olympic athlete, which sport would you play?pic.twitter.com/mnFC3vpvly
ವೀಡಿಯೊದ ಅಂತ್ಯದಲ್ಲಿ ಆರು ಗಗನಯಾತ್ರಿಗಳು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಶುಭ ಹಾರೈಸಿದ್ದಾರೆ.(ಏಜೆನ್ಸೀಸ್​​)
ವಿದೇಶಕ್ಕೆ ತೆರಳುವ ಎಲ್ಲರಿಗೂ ಟ್ಯಾಕ್ಸ್​​​ ಕ್ಲಿಯರೆನ್ಸ್ ಸರ್ಟಿಫಿಕೇಟ್ ಅವಶ್ಯಕತೆ ಇಲ್ಲ; ಸರ್ಕಾರದ ಸ್ಪಷ್ಟನೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + seven =
Remember me
