ನವದೆಹಲಿ :ಭಾರತದ ಸ್ವಾತಂತ್ರ್ಯದಿನದ ಅಮೃತ ಮಹೋತ್ಸವದ ಸಂದರ್ಭಕ್ಕೆ ನಾಳೆ (ಆಗಸ್ಟ್​ 15) ಬೆಳಿಗ್ಗೆ 7 ಗಂಟೆಗೆ ದೆಹಲಿಯ ಕೆಂಪುಕೋಟೆಯ ಆವರಣದಲ್ಲಿ ಪಾರಂಪರಿಕ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಆರಂಭವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪುಕೋಟೆಯ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಲಿದ್ದಾರೆ.
ಬೆಳಿಗ್ಗೆ 7.30ಕ್ಕೆ ಪ್ರಧಾನಿ ಮೋದಿ ದೇಶವನ್ನು ಕುರಿತು ಮಾತನಾಡಲಿದ್ದಾರೆ. ಮೊದಲ ಬಾರಿಗೆ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದಿರುವ 32 ಕ್ರೀಡಾಪಟುಗಳು ಕೆಂಪುಕೋಟೆಯ ಸ್ವಾತಂತ್ರ್ಯೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಜಾವಲಿನ್​ ಎಸೆತದಲ್ಲಿ ಸ್ವರ್ಣ ಪದಕ ಗೆದ್ದ ಸುಬೇದಾರ್​ ನೀರಜ್​ ಚೋಪ್ರ, ಪುರುಷರ ಹಾಕಿ ತಂಡದ ಸದಸ್ಯರು ಸೇರಿದಂತೆ ಪದಕ ಗೆದ್ದ ಇತರ ಕ್ರೀಡಾಪಟುಗಳು ಪಾಲ್ಗೊಳ್ಳುವರು.
ಇದನ್ನೂ ಓದಿ:ಆಗಸ್ಟ್ 15: ಭಾರತದ ಜೊತೆ ಈ ದೇಶಗಳಿಗೂ ‘ರಾಷ್ಟ್ರೀಯ ದಿನ’
ಕರೊನಾ ಸಂಬಂಧಿತ ಕಟ್ಟುಪಾಡುಗಳ ನಡುವೆಯೂ “ಆಜಾದಿ ಕಾ ಅಮೃತ್​ ಮಹೋತ್ಸವ್”ನ ಆಚರಣೆಗೆ ಹಲವು ಸಿದ್ಧತೆಗಳು ನಡೆದಿವೆ. ಈ ವಿಶೇಷ ಸಂದರ್ಭದ ದೃಶ್ಯಾವಳಿಗಳನ್ನು ಡಿಡಿ ನ್ಯೂಸ್​ ಮತ್ತು ಸರ್ಕಾರದ ಯೂಟ್ಯೂಬ್​ ಚ್ಯಾನೆಲ್​ನಲ್ಲಿ ನೇರ ಪ್ರಸಾರದಲ್ಲಿ ವೀಕ್ಷಿಸಬಹುದಾಗಿದೆ.(ಏಜೆನ್ಸೀಸ್)
ಒಲಿಂಪಿಕ್​​ ಕ್ರೀಡಾಪಟುಗಳ ಸಾಧನೆ ಐತಿಹಾಸಿಕ! 75ನೇ ಸ್ವಾತಂತ್ರ್ಯೋತ್ಸವಕ್ಕೆ ಶುಭ ಕೋರಿದ ರಾಷ್ಟ್ರಪತಿ ಕೋವಿಂದ್​

ಏರ್​ಪೋರ್ಟಲ್ಲಿ ಗಾರ್ಡ್​ ಆಫ್​ ಆನರ್ ಬೇಡ ಎಂದ ಸಿಎಂ ಬೊಮ್ಮಾಯಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 7 =
Remember me
