ಕೋಟಾ:ರಾಜಸ್ಥಾನದ ಕೋಟಾದಲ್ಲಿನ ಜೆ.ಕೆ.ಲಾನ್ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ಮರಣದ ಸಂಖ್ಯೆ ದಿನೇದಿನೆ ಏರುತ್ತಿದೆ. ಕಳೆದವಾರ 91 ಇದ್ದ ಸಂಖ್ಯೆ 107ಕ್ಕೆ ಏರಿಕೆಯಾಗಿದೆ. ಇಂದು ಕೂಡ ಒಂದು ಶಿಶು ಮೃತಪಟ್ಟಿದ್ದಾಗಿ ವರದಿಯಾಗಿದೆ.
ಒಂದೇ ತಿಂಗಳಲ್ಲಿ 100ಕ್ಕೂ ಹೆಚ್ಚು ನವಜಾತ ಶಿಶುಗಳು ಮೃತಪಟ್ಟಿದ್ದು ನಿಜಕ್ಕೂ ಆತಂಕ ಮೂಡಿಸಿದೆ. ಕೋಟಾ ಕ್ಷೇತ್ರದ ಸಂಸದರಾಗಿರುವ ಲೋಕಸಭಾ ಸ್ಪೀಕರ್​ ಓಂ ಬಿರ್ಲಾ ಇಂದು ಆಸ್ಪತ್ರೆಯಲ್ಲಿ ಮೃತಪಟ್ಟ ಶಿಶುವಿನ ಕುಟುಂಬವನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ.
ಬಳಿಕ ಮಾತನಾಡಿದ ಓಂ ಬಿರ್ಲಾ ಅವರು, ಮಕ್ಕಳನ್ನು ಕಳೆದುಕೊಂಡ ಕೆಲವು ಕುಟುಂಬದವರನ್ನು ಭೇಟಿಯಾಗಿದ್ದೇನೆ. ಅವರೊಂದಿಗೆ ನಾವಿದ್ದೇವೆ. ವೈದ್ಯಕೀಯವಾಗಿ ತೆಗೆದುಕೊಳ್ಳಬೇಕಾದ ಸುಧಾರಿತ ಕ್ರಮಗಳ ಬಗ್ಗೆ ರಾಜಸ್ಥಾನ ಮುಖ್ಯಮಂತ್ರಿಗೆ ಈಗಾಗಲೇ ಎರಡು ಬಾರಿ ಪತ್ರ ಬರೆದಿದ್ದೇನೆ ಎಂದಿದ್ದಾರೆ.
ಬರೀ ಕೋಟಾ ಆಸ್ಪತ್ರೆಯಲ್ಲಿ ಅಷ್ಟೇ ಅಲ್ಲದೆ ಬೂಂದಿ ಜಿಲ್ಲೆಯಲ್ಲಿರುವ ಆಸ್ಪತ್ರೆಯೊಂದರಲ್ಲೂ ಡಿಸೆಂಬರ್​ ತಿಂಗಳಲ್ಲಿ ಒಟ್ಟು 10 ಶಿಶುಗಳು ಮೃತಪಟ್ಟಿವೆ ಎಂದು ವರದಿಯಾಗಿದೆ.
ಆಸ್ಪತ್ರೆಯಲ್ಲಿ ಶಿಶುಗಳ ಸಾವಿನಸಂಖ್ಯೆ ಹೆಚ್ಚುತ್ತಿರುವುದರಿಂದ ಪರಿಶೀಲನೆಗಾಗಿ ಕೇಂದ್ರದಿಂದ ತಜ್ಞ ವೈದ್ಯರ ತಂಡವೊಂದು ಕೋಟಾಕ್ಕೆ ಆಗಮಿಸಿದೆ. ಈ ಉನ್ನತ ಮಟ್ಟದ ತಂಡದಲ್ಲಿ ಏಮ್ಸ್​, ಜೋಧಪುರ ತಜ್ಞ ವೈದ್ಯರು, ಆರೋಗ್ಯ ಶಾಸ್ತ್ರಜ್ಞರು ಇದ್ದಾರೆ. ಆಸ್ಪತ್ರೆಯಲ್ಲಿರುವ ಮೂಲ ಸೌಕರ್ಯಗಳ ಕೊರತೆಯಿಂದ ಹಿಡಿದು ಏನೇನು ಸಮಸ್ಯೆಯಾಗುತ್ತದೆ ಎಂಬ ಬಗ್ಗೆ ಇವರು ಪರಿಶೀಲನೆ ನಡೆಸಲಿದ್ದು, ಮುಂದೆ ಶಿಶುಗಳು ಮರಣವನ್ನಪ್ಪುವುದನ್ನು ತಡೆಯಲು ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳನ್ನು ನಿರ್ಣಯಿಸಲಿದ್ದಾರೆ.
ರಾಜಸ್ಥಾನ ಆಸ್ಪತ್ರೆಗಳಲ್ಲಿ ಸಾವನ್ನಪ್ಪುತ್ತಿರುವ ಶಿಶುಗಳ ಸಂಖ್ಯೆ ಹೆಚ್ಚಾಗುತ್ತಿರುವ ಬಗ್ಗೆ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಗಮನಹರಿಸಬೇಕು. ಮರಣ ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಶುಕ್ರವಾರ ಗೃಹಸಚಿವ ಅಮಿತ್​ ಷಾ ಆಗ್ರಹಿಸಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + twelve =
Remember me
