ತಿರುಪತಿ:ಪ್ರಭಾಸ್, ಕೃತಿ ಸನೊನ್, ಸೈಫ್​ ಅಲಿ ಖಾನ್​​​ ನಟನೆಯ ಬಹು ನಿರೀಕ್ಷಿತ ಆದಿ ಪುರುಷ್​ ಸಿನಿಮಾದ ಪ್ರೀ ರಿಲೀಸ್​ ಇವೆಂಟ್​ಗೆ ಭರ್ಜರಿ ರೆಸ್ಪಾನ್ಸ್​ ದೊರೆತ್ತಿದ್ದು, ಚಿತ್ರತಂಡವು ಅಂತಿಮ ಟ್ರೈಲರ್​​ ರಿಲೀಸ್​ ಮಾಡುವ ಮೂಲಕ ಅಭಿಮಾನಿಗಳನ್ನು ಖುಷಿ ಪಡಿಸಿದೆ.
ಬುಧವಾರ ಚಿತ್ರದ ನಿರ್ದೇಶಕ ಓಂ ರಾವತ್​ ಹಾಗೂ ನಾಯಕಿ ಕೃತಿ ಸನೊನ್​ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಆಧರೆ, ದೇವಸ್ಥಾನದ ಆವರಣದಲ್ಲಿ ಮಾಡಿದ ಆ ಒಂದು ಕೆಲಸ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ಚರ್ಚೆಗೆ ಗ್ರಾಸವಾಗಿದೆ.
ಆದಿಪುರುಷ್​ ಚಿತ್ರತಂಡವು ಮಂಗಳವಾರ ನಡೆದ ಪ್ರೀ ರಿಲೀಸ್​ ಇವೆಂಟ್​ನಲ್ಲಿ ಸಿನಿಮಾದ ಅಂತಿಮ ಟ್ರೈಲರ್​ ರಿಲೀಸ್​ ಮಾಡುವ ಮೂಲಕ ಅಭಿಮಾನಿಗಳ ಜೋಶ್​ ಅನ್ನು ಮತ್ತಷ್ಟು ಹೆಚ್ಚಿಸಿದೆ. ಚಿತ್ರತಂಡವು ಬುಧವಾರ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.
ಇದನ್ನೂ ಓದಿ:ಮೀಸಲಾತಿ ಹೆಚ್ಚಳ, ಸಂವಿಧಾನದ 9ನೇ ಶೆಡ್ಯೂಲ್​ಗೆ ಸೇರ್ಪಡೆಗೊಳಿಸಲು ಕೇಂದ್ರಕ್ಕೆ ಒತ್ತಾಯ: ಸಿಎಂ ಸಿದ್ದರಾಮಯ್ಯ
ದೇವಸ್ಥಾನದಿಂದ ಹೊರಬಂದ ಬಳಿಕ ನಾಯಕಿ ಕೃತಿ ಸನೋನ್​ ಅವರನ್ನು ಕಳುಹಿಸಿ ಕೊಡುವ ವೇಳೆ ನಿರ್ದೇಶಕ ಓಂ ರಾವತ್​ ಅವರ ಕೆನ್ನೆಗೆ ಮುತ್ತು ಕೊಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಈ ಕುರಿತು ಆಂಧ್ರಪ್ರದೇಶ ಬಿಜೆಪಿ ಕಾರ್ಯದರ್ಶಿ ರಮೇಶ್​ ನಾಯ್ಡು ನಗೋತು ಮೊದಲಿಗೆ ಟ್ವೀಟ್​​ ಮಾಡಿ ಆ ನಂತರ ಡಿಲೀಟ್​ ಮಾಡಿದ್ಧಾರೆ.
ವಿಡಿಯೋ ವೈರಲ್​ ಆದ ಬೆನ್ನಲ್ಲೇ ನೆಟ್ಟಿಗರು, ಭಕ್ತರು ಚಿತ್ರತಂಡದ ಸದಸ್ಯರ ವರ್ತನೆಗೆ ಕಿಡಿಕಾರಿದ್ದು ಇದು ಶೋಭೆ ತರುವಂತದ್ದಲ್ಲ ಎಂದು ಹರಿಹಾಯ್ದಿದ್ಧಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 2 =
Remember me
