ಮುಂಬೈ:ದೇಶದ ಬೆಳವಣಿಗೆಯ ವೇಗವನ್ನು ಕುಂಟಿತಗೊಳಿಸುವಂತೆ ಒಮಿಕ್ರಾನ್ ಸವಾಲು ಎದುರಾಗಿದೆ. ಆದಾಗ್ಯೂ ಅದನ್ನು ಎದುರಿಸುವ ಸಾಮರ್ಥ್ಯ ಅರ್ಥವ್ಯವಸ್ಥೆಗೆ ಇದೆ. ಬ್ಯಾಂಕುಗಳು ಕೂಡ ಸವಾಲುಗಳನ್ನು ಎದುರಿಸುವ ಮಟ್ಟಿಗೆ ಬಲಿಷ್ಠವಾಗಿವೆ ಎಂದು ಬುಧವಾರ ಬಿಡುಗಡೆಯಾದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ)ನ ಎರಡನೇ ಹಣಕಾಸು ಸ್ಥಿರತೆ ವರದಿ ತಿಳಿಸಿದೆ. ವಿನಾಶಕಾರಿ ಎರಡನೇ ಅಲೆ 2021ರ ಏಪ್ರಿಲ್-ಮೇ ತಿಂಗಳಲ್ಲಿ ಉಂಟಾಗಿತ್ತು. ಆದರೂ ಬೆಳವಣಿಗೆ ಸಾಕಷ್ಟು ಸುಧಾರಣೆ ಕಂಡಿತು. ಈಗ ಒಮಿಕ್ರಾನ್ ವೈರಸ್ ಸೋಂಕು ಜಾಗತಿಕವಾಗಿ ಕೂಡ ಕಳವಳ ಸೃಷ್ಟಿಸಿದೆ. ಇದನ್ನು ಮೀರಿ ನಿಲ್ಲುವ ಸಾಮರ್ಥ್ಯವನ್ನು ಭಾರತದ ಅರ್ಥವ್ಯವಸ್ಥೆ ಹೊಂದಿದೆ. ಬ್ಯಾಂಕುಗಳ ಎನ್​ಪಿಎ ಪ್ರಮಾಣ ಕೂಡ ಇಳಿಕೆಯಾಗಿದ್ದು 2021ರ ಸೆಪ್ಟೆಂಬರ್​ನಲ್ಲಿ ಶೇಕಡ 6.9 ಇದ್ದದ್ದು, ಮುಂದಿನ ವರ್ಷ ಸೆಪ್ಟೆಂಬರ್ ವೇಳೆಗೆ ಶೇಕಡ 8.1ರಿಂದ ಶೇಕಡ 9.5ಕ್ಕೆ ಏರಿಕೆಯಾಗಬಹುದು ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಮ್ಮ ಟಿಪ್ಪಣಿಯಲ್ಲಿ ಹೇಳಿದ್ದಾರೆ.
ಆರ್​ಬಿಐನ ಪೂರ್ವಾನುಮತಿ ಬೇಕಿಲ್ಲ:ಅನಿವಾಸಿ ಭಾರತೀಯರು (ಎನ್​ಆರ್​ಐ) ಮತ್ತು ಭಾರತದ ಸಾಗರೋತ್ತರ ಪೌರರು (ಒಸಿಐ) ಇನ್ನು ಮುಂದೆ ಆಯ್ದ ಪ್ರಕರಣಗಳನ್ನು ಹೊರತುಪಡಿಸಿ ಭಾರತದಲ್ಲಿ ಆಸ್ತಿ ಖರೀದಿಗೆ ಆರ್​ಬಿಐನ ಪೂರ್ವಾನುಮತಿ ಪಡೆಯಬೇಕಾಗಿಲ್ಲ. ಸ್ಥಿರಾಸ್ತಿಯ ಸ್ವಾಧೀನ, ವರ್ಗಾವಣೆಗೆ ಇದು ಅನ್ವಯ. ಆದರೆ, ಕೃಷಿ ಭೂಮಿ, ಫಾಮ್ರ್ ಹೌಸ್ ಮತ್ತು ತೋಟದ ಆಸ್ತಿಗಳಿಗೆ ಇದು ಅನ್ವಯವಾಗುವುದಿಲ್ಲ ಎಂದು ಆರ್​ಬಿಐ ಬುಧವಾರ ಸ್ಪಷ್ಟಪಡಿಸಿದೆ.
ಮುಂಬೈ:ಷೇರುಪೇಟೆಯ ಸೆನ್ಸೆಕ್ಸ್ ಸೂಚ್ಯಂಕದಲ್ಲಿ 90.99 ಅಂಶ ಇಳಿಕೆಯಾಗಿದ್ದು, 57,806.49ಕ್ಕೆ ಬುಧವಾರದ ವಹಿವಾಟು ಮುಗಿದಿದೆ. ನಿಫ್ಟಿಯಲ್ಲಿ 19.65 ಪಾಯಿಂಟ್ ತಗ್ಗಿದ್ದು, 17,213.60ಕ್ಕೆ ವಹಿವಾಟು ಕೊನೆಗೊಂಡಿದೆ. ಎಸ್​ಬಿಐ, ಐಟಿಸಿ, ಎನ್​ಟಿಪಿಸಿ, ಟೆಕ್ ಮಹಿಂದ್ರಾ, ಟಾಟಾ ಸ್ಟೀಲ್, ಕೊಟಾಕ್ ಬ್ಯಾಂಕ್, ಎಂ ಆಂಡ್ ಎಂ ಷೇರು ಮೌಲ್ಯ ಕುಸಿದಿದೆ. ಇನ್ನೊಂದೆಡೆ ಸನ್ ಫರ್ವ, ಇಂಡಸ್​ಇಂಡ್ ಬ್ಯಾಂಕ್, ಡಾ.ರೆಡ್ಡಿಸ್ ಲ್ಯಾಬ್, ಬಜಾಜ್ ಫಿನ್​ಸರ್ವ್​ಗಳು ಲಾಭ ಗಳಿಸಿವೆ.
ಚಿನ್ನ-ಬೆಳ್ಳಿ ಅಗ್ಗ:ಚಿನಿವಾರ ಪೇಟೆಯಲ್ಲಿ ಬಂಗಾರದ ದರ 216 ರೂ. ಇಳಿಕೆಯಾಗಿದ್ದು, 10 ಗ್ರಾಂ ಬೆಲೆ 47,010 ರೂ.ಗೆ ಕುಗ್ಗಿದೆ. ಬೆಳ್ಳಿ ಬೆಲೆ 179 ರೂ. ಕಡಿಮೆ ಆಗುವ ಮೂಲಕ ಕೆ.ಜಿ. ಧಾರಣೆ 61,348 ರೂ.ಗೆ ಇಳಿದಿದೆ.
ಇದು ವಾಟ್ಸ್​ಆ್ಯಪ್​ ಅಡ್ಮಿನ್ಸ್​ ಓದಲೇಬೇಕಾದ ವಿಚಾರ; ಗ್ರೂಪ್​ ಸದಸ್ಯರ ಪೋಸ್ಟ್​ಗಳಿಗೆ ಸಂಬಂಧಿಸಿದಂತೆ ಮತ್ತದೇ ಆದೇಶ ಪುನರುಚ್ಚಾರ..

ಹೆಂಡತಿಯೊಂದಿಗೆ ಜಗಳವಾಡಿದ ಡಾಕ್ಟರ್​ ಸಾವು; ಬೆಡ್​ರೂಮ್​ನಲ್ಲಿ ಹೊತ್ತಿ ಉರಿದ ಬೆಂಕಿ..!

ನೀನೇ ಸಾಕಿದ ಗಿಣಿ ನಿನ್ನ ಹದ್ದಾಗಿ ಕುಕ್ಕಿತಲ್ಲೋ..; ಆರ್​ಟಿಐ ಕಾರ್ಯಕರ್ತನನ್ನೇ ಇಕ್ಕಟ್ಟಿಗೆ ಸಿಲುಕಿಸಿದ ಮಹಿಳಾ ಅಧಿಕಾರಿ!?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × four =
Remember me
