ನವದೆಹಲಿ:ಜಗತ್ತಿನ ಹಲವು ರಾಷ್ಟ್ರಗಳಲ್ಲಿ ತಲ್ಲಣ ಮೂಡಿಸಿದ್ದ ಒಮಿಕ್ರಾನ್​ ಭಾರತ ಪ್ರವೇಶಿಸಿದ್ದಾಗಿದೆ. ಕರ್ನಾಟಕದಲ್ಲೇ ಇಬ್ಬರು ಪುರುಷರಲ್ಲಿ ಕಂಡುಬಂದಿರುವ ಕರೊನಾ ಸೋಂಕಿಗೆ ಈ ಹೆಚ್ಚು ಹರಡುವ ರೂಪಾಂತರಿ ಕಾರಣವಾಗಿರುವುದು ಜಿನೋಮ್ ಸೀಕ್ವೇಂಸಿಂಗ್​ನಿಂದ ತಿಳಿದುಬಂದಿದೆ. ಈ ಹೊತ್ತಲ್ಲಿ ಜನರು ಮಾಡಬೇಕಾದ್ದೇನು ಎಂಬುದನ್ನು ಕೇಂದ್ರ ಸರ್ಕಾರ ವಿವರಿಸಿದೆ.
“ಆತಂಕ ಪಡುವ ಅಗತ್ಯವಿಲ್ಲ. ಆದರೆ, ಜಾಗೃತಿ ಮೂಡಿಸುವುದು ಸಂಪೂರ್ಣ ಅವಶ್ಯಕ. ಕೋವಿಡ್​​ ಸೂಕ್ತ ನಡವಳಿಕೆ ಅವಶ್ಯಕ” ಎಂದು ಐಸಿಎಂಆರ್​ ಡೈರೆಕ್ಟರ್​ ಜನರಲ್​ ಬಲರಾಂ ಭಾರ್ಗವ ಹೇಳಿದ್ದಾರೆ. ಮಾಸ್ಕ್​ ತೊಡುವುದು, ಸಾಮಾಜಿಕ ಅಂತರ ಪಾಲಿಸುವುದು, ಶುಚಿತ್ವ ಕಾಪಾಡುವುದು ಎಲ್ಲಾ ಈಗ ಮತ್ತೆ ಹೆಚ್ಚಿನ ಮಹತ್ವ ಪಡೆದಿವೆ.
ಇದನ್ನೂ ಓದಿ:ಕರ್ನಾಟಕಕ್ಕೂ ವಕ್ಕರಿಸಿದ ಒಮಿಕ್ರಾನ್​: ಇಬ್ಬರಲ್ಲಿ ಸೋಂಕು ಪತ್ತೆ, ದೇಶದಲ್ಲಿ ಇದೇ ಮೊದಲ ಪ್ರಕರಣ
ಮತ್ತೆ ಸಾರ್ವಜನಿಕ ಕಾರ್ಯಕ್ರಮಗಳಿಗೆ ಹೋಗದೇ ಇರುವುದು, ಜನ ಸೇರುವಂಥ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳದಿರುವುದು ಮುಂತಾಗಿ ಎಚ್ಚರ ವಹಿಸಿದರೆ ಒಮಿಕ್ರಾನ್​ ಹರಡುವಿಕೆಯನ್ನು ತಡೆಯಬಹುದು. ಕರೊನಾ ಲಸಿಕೆಯ ಎರಡೂ ಡೋಸ್​ಗಳನ್ನು ಎಲ್ಲರೂ ಪಡೆಯುವಂತೆ ಕ್ರಮ ಕೈಗೊಳ್ಳುವುದು ಈಗಿನ ಅಗತ್ಯ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.(ಏಜೆನ್ಸೀಸ್)
ಆರು ತಿಂಗಳಿಂದ ಭತ್ಯೆಯೇ ನೀಡಿಲ್ಲ! ರಕ್ತದಾನ ಮಾಡಿ ಪ್ರತಿಭಟಿಸಿದ ವೈದ್ಯರು

VIDEO| 2024ರ ಚುನಾವಣೇಲಿ ತಮ್ಮ ಪಕ್ಷಕ್ಕೆ ಬಹುಮತ ಬರೋದಿಲ್ಲ ಎಂದ ಕೈ ನಾಯಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − nine =
Remember me
