ಹೈದರಾಬಾದ್​/ಮುಂಬೈ:ಕಳೆದೆರಡು ದಿನಗಳಲ್ಲಿ ತೆಲಂಗಾಣದ ಹೈದರಾಬಾದ್​ ವಿಮಾನ ನಿಲ್ದಾಣಕ್ಕೆ ‘ಅಟ್​-ರಿಸ್ಕ್​’ ದೇಶಗಳಿಂದ ಬಂದಿಳಿದ 13 ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಕರೊನಾ ಪಾಸಿಟೀವ್ ಬಂದಿದೆ. ಈ ಸೋಂಕಿತರ ಸ್ಯಾಂಪಲ್​ಗಳನ್ನು ಗಚಿಬೌಲಿಯ ತೆಲಂಗಾಣ ಇನ್​ಸ್ಟಿಟ್ಯೂಟ್​ ಆಫ್ ಮೆಡಿಕಲ್ ಸೈನ್ಸಸ್​ ಅಂಡ್ ರಿಸರ್ಚ್​​ಗೆ ಜೀನೋಮ್​ ಸೀಕ್ವೆಂಸಿಂಗ್​ಗಾಗಿ ಕಳುಹಿಸಲಾಗಿದೆ. ಪರೀಕ್ಷೆಯ ನಂತರ ಸೋಂಕು ಒಮಿಕ್ರಾನ್​ನಿಂದ ಉಂಟಾಗಿದೆಯೇ ಅಥವಾ ಡೆಲ್ಟಾ ವೇರಿಯೆಂಟ್​ನಿಂದ ಉಂಟಾಗಿದೆಯೇ ಎಂಬುದು ತಿಳಿಯಲಿದೆ.
ಶುಕ್ರವಾರದಂದು ಅಟ್​​-ರಿಸ್ಕ್​-ಕಂಟ್ರೀಸ್​ ಎಂದು ಹೆಸರಿಸಲಾಗಿರುವ ಒಮಿಕ್ರಾನ್​ ರೂಪಾಂತರಿ ಕಂಡುಬಂದಿರುವ ದೇಶಗಳಿಂದ 219 ಪ್ರಯಾಣಿಕರು ಹೈದರಾಬಾದ್​ಗೆ ಬಂದಿದ್ದು, ಅವರಲ್ಲಿ 9 ಜನರಿಗೆ ಕೋವಿಡ್​ ಪರೀಕ್ಷೆಯಲ್ಲಿ ಪಾಸಿಟೀವ್​ ಬಂದಿದೆ. ಡಿಸೆಂಬರ್ 1 ರಿಂದ ವಿಮಾನ ನಿಲ್ದಾಣದಲ್ಲಿ 909 ಪ್ರಯಾಣಿಕರನ್ನು ಹೆಚ್ಚಿನ ಸ್ಕ್ರೀನಿಂಗ್​ಗೆ ಒಳಪಡಿಸಿದ್ದು, ಒಟ್ಟು 13 ಜನರಿಗೆ ಕರೊನಾ ಕಂಡುಬಂದಿದೆ.
ಇದನ್ನೂ ಓದಿ:ಒಮಿಕ್ರಾನ್​ ಸೋಂಕಿನಿಂದ ಸಾವು ಕಂಡಿಲ್ಲ; ಡೆಲ್ಟಾ ಪ್ರಧಾನ ಸಮಸ್ಯೆ: WHO
ಮಹಾರಾಷ್ಟ್ರದಲ್ಲೂ 9 ಜನ ಪ್ರಯಾಣಿಕರಿಗೆ ಕರೊನಾ ಸೋಂಕು ಪತ್ತೆಯಾಗಿದ್ದು, ಅವರ ಸ್ಯಾಂಪಲ್​ಗಳನ್ನು ಜೀನೋಮ್​ ಸೀಕ್ವೆಂಸಿಂಗ್​ಗೆ ಕಳುಹಿಸಲಾಗಿದೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಹೈರಿಸ್ಕ್​ ದೇಶಗಳ ಪ್ರಯಾಣಿಕರ ಸ್ಕ್ರೀನಿಂಗ್​ ಕಟ್ಟುನಿಟ್ಟಾಗಿ ನಡೆಯುತ್ತಿದೆ ಎಂದು ರಾಜ್ಯದ ಆರೋಗ್ಯ ಸಚಿವ ರಾಜೇಶ್ ಟೋಪೆ ಹೇಳಿದ್ದಾರೆ.(ಏಜೆನ್ಸೀಸ್)
ಹೆಚ್ಚಿದ ಒಮಿಕ್ರಾನ್​ ಆತಂಕ: ಆಫ್ರಿಕಾದಿಂದ ಬೆಂಗಳೂರಿಗೆ ಬಂದ 10 ಜನ ನಾಪತ್ತೆ!

ಬರೋಬ್ಬರಿ 2.15 ಕೋಟಿ ರೂ. ಸಂಬಳ! ಐಐಟಿ ವಿದ್ಯಾರ್ಥಿಗೆ ಬಂಪರ್​ ಆಫರ್​​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 3 =
Remember me
