ದೆಹಲಿ:ಓಮಿಕ್ರಾನ್ ವಿರುದ್ಧ ನಿರ್ದಿಷ್ಟ mRNA ಆಧಾರಿತ ಕೋವಿಡ್‌ ಬೂಸ್ಟರ್ ಲಸಿಕೆಯನ್ನು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಬಿಡುಗಡೆ ಮಾಡಿದ್ದಾರೆ.ಸ್ಥಳೀಯ ತಂತ್ರಜ್ಞಾನವನ್ನು ಬಳಸಿಕೊಂಡು ಅಭಿವೃದ್ಧಿಪಡಿಸಿದ ಭಾರತದ ಮೊದಲ mRNA ಲಸಿಕೆಯಾಗಿದ್ದು, ಬಯೋಟೆಕ್ನಾಲಜಿ ಇಂಡಸ್ಟ್ರಿ ರಿಸರ್ಚ್ ಅಸಿಸ್ಟೆನ್ಸ್ ಕೌನ್ಸಿಲ್ (BIRAC) ಹಾಗೂ GEMCOVAC-OM ಜೈವಿಕ ತಂತ್ರಜ್ಞಾನ ಇಲಾಖೆಯಿಂದ(DBT) ಜಾರಿಗೊಳಿಸಲಾದ ಮಿಷನ್ COVID ಸುರಕ್ಷಾ ಬೆಂಬಲದೊಂದಿಗೆ ಜೆನೋವಾ ಇದನ್ನು ಅಭಿವೃದ್ಧಿಪಡಿಸಿದೆ.ಇದನ್ನೂ ಓದಿ:ಪ್ರತಿಷ್ಠಿತ ಶಾಲೆಯಲ್ಲಿ ಸೀಟ್​ ಪಡೆಯಲು PMO ಅಧಿಕಾರಿಯಂತೆ ಪೋಸ್​ ನೀಡಿದ ವ್ಯಕ್ತಿಇದರ ವಿಶಿಷ್ಟ ವೈಶಿಷ್ಟ್ಯವೆಂದರೆ ಈ ಲಸಿಕೆಯನ್ನು ಸೂಜಿ ಇಲ್ಲದೆ ನೀಡಬಹುದಾಗಿದ್ದು, ಈ ಲಸಿಕೆಯ ತುರ್ತು ಬಳಕೆಯ ಅಧಿಕಾರಕ್ಕಾಗಿ ಡ್ರಗ್ ಕಂಟ್ರೋಲ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ) ಕಚೇರಿಯಿಂದ ಕೆಲವು ದಿನಗಳ ಹಿಂದೆ ಅನುಮೋದನೆಯನ್ನು ಪಡೆಯಲಾಗಿತ್ತು. ಸೂಜಿ-ಮುಕ್ತ ಇಂಜೆಕ್ಷನ್ ಸಾಧನದಿಂದ ಒಳ-ಚರ್ಮಕ್ಕೆ ನೇರವಾಗಿ ಲಸಿಕೆಯನ್ನು ನೀಡಲಾಗುತ್ತದೆ.
ಕಡಿಮೆ ಸಮಯದಲ್ಲಿ ಇತರ ಲಸಿಕೆಗಳನ್ನು ತಯಾರಿಸಲು ಈ ತಂತ್ರಜ್ಞಾನವನ್ನು ಬಳಸಿಕೊಳ್ಳಬಹುದಾಗಿದ್ದು, GEMCOVAC-OMವೊಂದು ಥರ್ಮೋಸ್ಟೆಬಲ್ ಲಸಿಕೆಯಾಗಿದೆ. ಇತರ ಅನುಮೋದಿತ mRNA-ಆಧಾರಿತ ಲಸಿಕೆಗಳಿಗೆ ಬಳಸಲಾಗುವ ಅಲ್ಟ್ರಾ-ಕೋಲ್ಡ್ ಚೈನ್ ಮೂಲಸೌಕರ್ಯವು ಈ ಲಸಿಕೆಗೆ ಅಗತ್ಯವಿಲ್ಲ ಎಂದು ಹೇಳಲಾಗಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − five =
Remember me
