ನವದೆಹಲಿ:ದೇಶದಲ್ಲಿ ಒಮಿಕ್ರಾನ್ ಅಲೆ ಗರಿಷ್ಠ ಮಟ್ಟ ತಲುಪುವ ವೇಳೆ ದೈನಿಕ ಸುಮಾರು 60,000 ಜನರು ಆಸ್ಪತ್ರೆಗಳಿಗೆ ದಾಖಲಾಗಬಹುದು ಎಂಬ ಆತಂಕ ಉಂಟಾಗಿದೆ. ಒಮಿಕ್ರಾನ್ ಅಲೆ ದಾಂಗುಡಿಯಿಟ್ಟಿದ್ದರೂ ಅದನ್ನು ಅಧಿಕೃತವಾಗಿ ಒಪ್ಪಿಕೊಳ್ಳಲಾಗು ತ್ತಿಲ್ಲ. ಭಾರತದ ಒಟ್ಟು ಕರೊನಾ ಪ್ರಕರಣದ ಶೇಕಡ 2 ಮಾತ್ರ ಒಮಿಕ್ರಾನ್ ರೂಪಾಂತರಿ ಕೇಸ್​ಗಳಿವೆ ಎಂದು ಸಮಾಧಾನ ಪಡುತ್ತಿರುವುದು ಮುಂದೆ ಪಶ್ಚಾತ್ತಾಪಕ್ಕೆ ಕಾರಣವಾಬಹುದು. ಸದ್ಯ ದೇಶದಲ್ಲಿ ಒಮಿಕ್ರಾನ್ ಪ್ರಭೇದವೇ ಪ್ರಮುಖ ತಳಿಯಾಗಿದ್ದು ಶೀಘ್ರವೇ ಆರೋಗ್ಯ ಬಿಕ್ಕಟ್ಟು ಅಪ್ಪಳಿಸ ಬಹುದು ಎಂದು ಖಾಸಗಿ ಅಧ್ಯಯನವೊಂದು ಹೇಳಿದೆ.
ದೇಶದಲ್ಲಿ 1,525 ಒಮಿಕ್ರಾನ್ ಕೇಸ್​ಗಳಿವೆ ಎಂದು ಸರ್ಕಾರ ಹೇಳಿದೆ. ಆದರೆ, ಅದಕ್ಕಿಂತ 10 ಪಟ್ಟು ಹೆಚ್ಚು, ಅಂದರೆ ಸುಮಾರು 18,000 ಒಮಿಕ್ರಾನ್ ಕೇಸ್​ಗಳಿದ್ದು ಅದು ದಿನೇ ದಿನೇ ಏರುತ್ತಿದೆ ಎಂದು ಅಧ್ಯಯನ ಎಚ್ಚರಿಸಿದೆ. ಜಗತ್ತಿನ ಕೆಲವು ದೇಶಗಳಲ್ಲಿ ಪ್ರಸಕ್ತ ದೈನಿಕ ಕರೊನಾ ಪ್ರಕರಣಗಳಲ್ಲಿ ಶೇಕಡ 90ರಷ್ಟು ಒಮಿಕ್ರಾನ್ ತಳಿಯ ಕೇಸ್​ಗಳಿವೆ. ಆದರೆ ಭಾರತದಲ್ಲಿ ಇಷ್ಟೊಂದು ಕಡಿಮೆ ಅಧಿಕೃತ ಸಂಖ್ಯೆ ತೋರಿಸುತ್ತಿರುವುದಕ್ಕೆ ಪರೀಕ್ಷಾ ವ್ಯವಸ್ಥೆಯ ಕೊರತೆ ಹಾಗೂ ಒಮಿಕ್ರಾನ್ ಪತ್ತೆಗೆ ಅಗತ್ಯವಾದ ಜಿನೋಮ್ ಸೀಕ್ವೆನ್ಸಿಂಗ್ ಲ್ಯಾಬ್​ಗಳ ಅಭಾವ ಕಾರಣವಿರಬಹುದು ಎಂದು ಹೇಳಲಾಗಿದೆ.
ಗಾಬರಿ ಬೇಡವೆಂದ ಕೇಜ್ರಿವಾಲ್:ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕರೊನಾ ಕೇಸ್ ತೀವ್ರ ಏರಿಕೆಯಾಗಿರುವ ನಡುವೆಯೇ ಜನರು ಗಾಬರಿಪಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಧೈರ್ಯ ತುಂಬಿದ್ದಾರೆ. ದೆಹಲಿಯಲ್ಲಿ ಒಮಿಕ್ರಾನ್ ಪ್ರಕರಣ ಕಳವಳಕಾರಿ ಪ್ರಮಾಣದಲ್ಲಿ ಏರುತ್ತಿವೆ. ದೆಹಲಿಯಲ್ಲಿ 6,360 ಸಕ್ರಿಯ ಪ್ರಕರಣಗಳಿವೆ. ಶನಿವಾರದವರೆಗೆ 246 ಆಸ್ಪತ್ರೆ ಬೆಡ್​ಗಳಲ್ಲಿ ಮಾತ್ರವೇ ಕೋವಿಡ್ ರೋಗಿಗಳಿದ್ದು ಬಹುತೇಕ ಜನರಲ್ಲಿ ರೋಗ ಸೌಮ್ಯ ಸ್ವರೂಪದ್ದಾಗಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಹೆಚ್ಚುತ್ತಿರುವ ಕೇಸ್​ಗಳ ತೀವ್ರತೆ ಎರಡನೇ ಅಲೆಯ ಸಮಯದ್ದಕ್ಕಿಂತ ಕಡಿಮೆಯಿರುವುದು ದತ್ತಾಂಶಗಳಿಂದ ಸಾಬೀತಾಗಿದೆ ಎಂದು ತಿಳಿಸಿದ್ದಾರೆ. ಏನಿದ್ದರೂ ಜನರು ಮುಂಜಾಗೃತಾ ಕ್ರಮಗಳನ್ನು ಸಡಿಲಿಸ ಬಾರದು. ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡಿದ್ದಾರೆ.
‘ನೈಸರ್ಗಿಕ ಲಸಿಕೆ’ ಹೇಳಿಕೆಗೆ ಆಕ್ರೋಶ:ಒಮಿಕ್ರಾನ್ ವೈರಸ್ ಒಂದು ನೈಸರ್ಗಿಕ ಲಸಿಕೆ ಎಂದು ಮಹಾರಾಷ್ಟ್ರದ ಆರೋಗ್ಯಾಧಿಕಾರಿಯೊಬ್ಬರು ಇತ್ತೀಚೆಗೆ ಹೇಳಿದ್ದು ತಜ್ಞರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಇಂಥ ಸಂದೇಶ ಹರಡುತ್ತಿರುವವರು ಬೇಜವಾಬ್ದಾರಿ ಜನರು. ಇವು ಅಪಾಯಕಾರಿ ಸಂದೇಶ ಎಂದು ತಜ್ಞರು ಹೇಳಿದ್ದಾರೆ. ಕೋವಿಡ್ ಸಾಂಕ್ರಾಮಿಕದಿಂದ ಎಂಡೆಮಿಕ್ ಹಂತಕ್ಕೆ ಇಳಿಸಲು ಒಮಿಕ್ರಾನ್ ಸಹಕಾರಿಯಾಗಿದೆ ಎಂದು ಆರೋಗ್ಯಾಧಿಕಾರಿಯೊಬ್ಬರು ಹೇಳಿದ್ದರು. ಒಮಿಕ್ರಾನ್ ಸ್ವಾಭಾವಿಕ ಲಸಿಕೆ ಎಂದು ಭಾವಿಸುವುದು ಅತ್ಯಂತ ಅಪಾಯಕಾರಿ ಹಾಗೂ ಬೇಜವಾಬ್ದಾರಿತನ ಪರಮಾವಧಿ ಎಂದು ಖ್ಯಾತ ವೈರಾಣು ತಜ್ಞ ಶಾಹಿದ್ ಜಮೀಲ್ ಅಭಿಪ್ರಾಯ ಪಟ್ಟಿದ್ದಾರೆ.
ವಿಶ್ವದ ಯಶಸ್ವಿ ಲಸಿಕೆ ಅಭಿಯಾನ:ಭಾರತದಲ್ಲಿ ನಡೆಯುತ್ತಿರುವ ಕೋವಿಡ್ ಲಸಿಕೆ ಅಭಿಯಾನ ಜಗತ್ತಿನ ಅತ್ಯಂತ ಯಶಸ್ವಿ ಹಾಗೂ ಅತಿ ದೊಡ್ಡ ಲಸಿಕೆ ಆಂದೋಲನವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಭಾನುವಾರ ವರ್ಣಿಸಿದೆ. ಲಸಿಕೆ ಹಾಕುವ ಗುರಿ ಸಾಧಿಸುವಲ್ಲಿ ದೇಶ ವಿಫಲವಾಗಿದೆ ಎಂಬ ಮಾಧ್ಯಮ ವರದಿಗಳು ದಾರಿತಪ್ಪಿಸುವಂಥದ್ದು ಎಂದೂ ಅದು ಆಕ್ಷೇಪ ವ್ಯಕ್ತಪಡಿಸಿದೆ. 2021 ಜನವರಿ 16ರಂದು ರಾಷ್ಟ್ರೀಯ ಕೋವಿಡ್ ಲಸಿಕೆ ಅಭಿಯಾನ ಆರಂಭಿಸಲಾಗಿದೆ. ಅಂದಿನಿಂದ ಇದುವರೆಗೆ ಶೇಕಡ 90ರಷ್ಟು ಅರ್ಹರಿಗೆ ಮೊದಲ ಡೋಸ್ ಲಸಿಕೆ ಹಾಕಲಾಗಿದೆ. ಶೇಕಡ 65 ಮಂದಿಗೆ ಎರಡೂ ಡೋಸ್ ಲಸಿಕೆ ನೀಡಲಾಗಿದೆ ಎಂದು ಹೇಳಿಕೆಯೊಂದರಲ್ಲಿ ಅದು ವಿವರಿಸಿದೆ. ಅಂತಾರಾಷ್ಟ್ರೀಯ ಸುದ್ದಿಸಂಸ್ಥೆಯೊಂದರ ಲೇಖನದಲ್ಲಿ ಲಸಿಕೆ ಗುರಿ ಸಾಧಿಸುವಲ್ಲಿ ಭಾರತ ಎಡವಿದೆ ಎಂದು ಆರೋಪಿಸಲಾಗಿತ್ತು. ಅದು ತಪು್ಪ ದಾರಿಗೆಳೆಯುವಂಥದ್ದಾಗಿದ್ದು ಸರಿಯಾದ ಚಿತ್ರಣ ನೀಡಿಲ್ಲ ಎಂದು ಹೇಳಿಕೆ ತಿಳಿಸಿದೆ.
ಬಂಗಾಳದಲ್ಲಿ ಶಾಲೆ ಬಂದ್:ಕರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಯಲ್ಲಿ ಬಂಗಾಳದಲ್ಲಿ ಸೋಮವಾರದಿಂದ ಶಾಲೆ-ಕಾಲೇಜುಗಳನ್ನು ಮುಚ್ಚಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಎಲ್ಲ ಕಚೇರಿಗಳು ಶೇಕಡ 50 ಹಾಜರಾತಿಯೊಂದಿಗೆ ಕಾರ್ಯ ನಿರ್ವಹಿಸಲಿವೆ. ಕರ್ನಾಟಕ, ಹರಿಯಾಣ, ದೆಹಲಿ ಮತ್ತು ಉತ್ತರ ಪ್ರದೇಶದಂತೆ ರಾಜ್ಯದಲ್ಲಿ ರಾತ್ರಿ 10ರಿಂದ ಬೆಳಿಗೆ 5 ಗಂಟೆವರೆಗೆ ರಾತ್ರಿ ಕರ್ಫ್ಯೂ ಕೂಡ ಹೇರಲಾಗಿದೆ. ವಿಶ್ವ ವಿದ್ಯಾಲಯಗಳು ಕೂಡ ಅನಿರ್ದಿಷ್ಟಾವಧಿಗೆ ಮುಚ್ಚಿರುತ್ತವೆ. ಈಜುಕೊಳ, ಜಿಮ್ ಸ್ಪಾಗಳು ಮತ್ತು ಆರೈಕೆ ಕೇಂದ್ರಗಳನ್ನು ಕೂಡ ಮುಚ್ಚಲು ಆದೇಶಿಸಲಾಗಿದೆ.
ನ್ಯೂಯಾರ್ಕ್​ನಲ್ಲಿ ಆತಂಕ:ಅಮೆರಿಕದ ನ್ಯೂಯಾರ್ಕ್ ಮಹಾನಗರದಲ್ಲಿ ಕರೊನಾ ಪ್ರಕರಣಗಳಲ್ಲಿ ಭಾರಿ ಏರಿಕೆಯಾಗಿದ್ದು ಶನಿವಾರ ಒಂದೇ ದಿನ 85 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇದು ಕೋವಿಡ್ ಆರಂಭವಾದಾಗಿ ನಿಂದ ಅತಿ ಹೆಚ್ಚಿನ ದೈನಿಕ ಪ್ರಕರಣವಾಗಿದೆ.
ಮಹಾರಾಷ್ಟ್ರದಲ್ಲಿ ಅತ್ಯಧಿಕ:ಕರೊನಾ ಪ್ರಕರಣದಲ್ಲಿ ಮಹಾರಾಷ್ಟ್ರ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ. ಭಾನುವಾರ 11,877 ಕೇಸ್ ಪತ್ತೆಯಾಗಿದ್ದು, ಮುಂಬೈನಲ್ಲಿ 8,063 ಹೊಸ ಪ್ರಕರಣ ಪತ್ತೆಯಾಗಿದೆ.
3ನೇ ಡೋಸ್ ಒಮಿಕ್ರಾನ್​ಗೆ ಪರಿಣಾಮಕಾರಿ:ಕರೊನಾ ಲಸಿಕೆಯ ಬೂಸ್ಟರ್ ಡೋಸ್ ನೀಡಿಕೆಯಿಂದ ಒಮಿಕ್ರಾನ್ ಪ್ರಭೇದದ ವಿರುದ್ಧ ಶೇಕಡ 88ರಷ್ಟು ರಕ್ಷಣೆ ಸಿಗುತ್ತದೆಂದು ಬ್ರಿಟನ್​ನಲ್ಲಿ ನಡೆಸಿದ ಅಧ್ಯಯನವೊಂದು ಹೇಳಿದೆ. ಎರಡನೇ ಡೋಸ್​ಗೆ ಹೋಲಿಸಿದರೆ ಒಮಿಕ್ರಾನ್ ರೂಪಾಂತರಿ ವಿರುದ್ಧ 3ನೇ ಡೋಸ್​ನಿಂದ ಸಿಗುವ ರಕ್ಷಣೆ ಗಣನೀಯವಾಗಿ ಹೆಚ್ಚಿದೆ ಎಂದು ಸ್ಕ್ರಿಪ್ಸ್ ರೀಸರ್ಚ್ ಟ್ರಾನ್ಸ್​ಲೇಷನಲ್ ಇನ್​ಸ್ಟಿಟ್ಯೂಟ್​ನ ಎರಿಕ್ ಟೊಪೋಲ್ ಹೇಳಿದ್ದಾರೆ. ಬ್ರಿಟನ್ ಆರೋಗ್ಯ ಭದ್ರತಾ ಸಂಸ್ಥೆ ಈ ಅಧ್ಯಯನ ವರದಿಯನ್ನು ಕ್ರೋಡೀಕರಿಸಿದೆ. ಎರಡನೇ ಡೋಸ್ ಪಡೆದ ಆರು ತಿಂಗಳ ನಂತರ ಒಮಿಕ್ರಾನ್ ವಿರುದ್ಧದ ಪರಿಣಾಮ ಶೇಕಡ 52ಕ್ಕೆ ಕುಸಿಯುತ್ತದೆನ್ನುವುದು ಅಧ್ಯಯನದಿಂದ ಗೊತ್ತಾಗಿದೆ. ಆದರೆ ಮೂರನೇ ಡೋಸ್ ರೋಗನಿರೋಧಕ ಶಕ್ತಿಯನ್ನು (ಇಮ್ಯುನಿಟಿ) ಹೆಚ್ಚಿಸುತ್ತದೆ. ಒಮಿಕ್ರಾನ್​ನಿಂದ ಆಸ್ಪತ್ರೆಗೆ ಸೇರಬೇಕಾದ ಪ್ರಮಾಣವೂ ತಗ್ಗುತ್ತದೆಂದು ಅಧ್ಯಯನ ತಿಳಿಸಿದೆ.
ನಿಂತಿದ್ದ ಬಸ್​ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ, ತಂತಾನೇ ಚಲನೆ; ನಂತರ ಮುಂದಿದ್ದ ಬಸ್​ಗೆ ಡಿಕ್ಕಿ: ಕೊಟ್ಟಿಗೆಹಾರದಲ್ಲಿ ಇದೆಂಥ ಅಚ್ಚರಿ!?

ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್​ ಸಾಹಸಕ್ಕೆ ಭಾರಿ ಮೆಚ್ಚುಗೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × three =
Remember me
