ಲಂಡನ್/ನವದೆಹಲಿ:ಕರೊನಾ ವೈರಸ್​ನ ಒಮಿಕ್ರಾನ್ ತಳಿಯ ಜಾಗತಿಕ ಕೇಂದ್ರವಾಗಿ ಮಾರ್ಪಡುತ್ತಿರುವ ಬ್ರಿಟನ್​ನಲ್ಲಿ ಈ ಪ್ರಭೇದದ ಹೊಸ ಪ್ರಕರಣ ಮೂರು ಪಟ್ಟು ಹೆಚ್ಚಾಗಿದೆ. 10,000ಕ್ಕೂ ಹೆಚ್ಚು ಪ್ರಕರಣಗಳು ಶನಿವಾರ ದಾಖಲಾಗಿವೆ. ಏಳು ಜನರು ಬಲಿಯಾಗಿದ್ದಾರೆ. ಮುಂದೆ ಪರಿಸ್ಥಿತಿ ಇನ್ನೂ ಅಪಾಯಕಾರಿ ಆಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಪರಿಸ್ಥಿತಿ ಎದುರಿಸಲು ಸರ್ಕಾರ ಮುಂದಾಗಿದೆ.
ಭಾನುವಾರ ಬ್ರಿಟನ್​ನಲ್ಲಿ 10,259 ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದ್ದು, ಕೇಸ್​ನ ಒಟ್ಟು ಸಂಖ್ಯೆ 24,968ಕ್ಕೆ ಏರಿದೆ ಎಂದು ಬ್ರಿಟನ್ ಆರೋಗ್ಯ ಭದ್ರತಾ ಸಂಸ್ಥೆ (ಯುಕೆಎಚ್​ಎಸ್​ಎ) ತಿಳಿಸಿದೆ. ಒಂದು ದಿನದಲ್ಲಿ ಒಟ್ಟಾರೆ ಕರೊನಾ ವೈರಸ್​ನ 90,418 ಕೇಸ್​ಗಳು ವರದಿಯಾಗಿದ್ದು ಸೋಂಕಿತರ ಒಟ್ಟು ಸಂಖ್ಯೆ 1,12,79,428ಕ್ಕೆ ಏರಿದೆ. ಈ ಅವಧಿಯಲ್ಲಿ ಸೋಂಕಿನಿಂದ 125 ಜನರು ಮೃತಪಟ್ಟಿದ್ದು ಮರಣದ ಒಟ್ಟು ಸಂಖ್ಯೆ 1,47,173 ಆಗಿದೆ. ಒಮಿಕ್ರಾನ್ ತಳಿ ವೇಗವಾಗಿ ಹರಡುತ್ತಿರುವುದರಿಂದ ಬ್ರಿಟನ್ ರಾಜಧಾನಿ ಗಂಭೀರ ಸ್ಥಿತಿ ಎದುರಿಸಲಿದೆ ಎಂದು ಲಂಡನ್ ಮೇಯರ್ ಸಾದಿಕ್ ಖಾನ್ ಘೋಷಿಸಿದ್ದಾರೆ. ಪ್ರತಿ ದಿನ ಲಕ್ಷಾಂತರ ಜನರು ಒಮಿಕ್ರಾನ್ ಸೋಂಕಿತರಾಗು ವುದು ‘ಬಹುತೇಕ ಖಚಿತ’ ಎಂದು ತುರ್ತಪರಿಸ್ಥಿತಿ ಕುರಿತ ವೈಜ್ಞಾನಿಕ ಸಲಹಾ ಗುಂಪು (ಎಸ್​ಎಜಿಇ-ಸೇಜ್) ಎಚ್ಚರಿಕೆ ನೀಡಿದೆ. ಒಂದು ವೇಳೆ ಕಟ್ಟುನಿಟ್ಟಿನ ಕೋವಿಡ್ ನಿಯಂತ್ರಣ ಕ್ರಮಗಳನ್ನು ಪಾಲಿಸದಿದ್ದರೆ ಇಂಗ್ಲೆಂಡ್​ನಲ್ಲಿ ದಿನಕ್ಕೆ ಕನಿಷ್ಠ 3,000 ಜನರು ಆಸ್ಪತ್ರೆಗೆ ದಾಖಲಾಗಬೇಕಾಗಬಹುದು ಎಂದು ಹೇಳಿದೆ.
ಭಾರತದಲ್ಲಿ 145ಕ್ಕೇರಿದ ರೂಪಾಂತರಿ:ಬ್ರಿಟನ್​ನಿಂದ ಇತ್ತೀಚೆಗೆ ಗುಜರಾತ್​ಗೆ ಆಗಮಿಸಿದ್ದ 45 ವರ್ಷದ ಅನಿವಾಸಿ ಭಾರತೀಯ, ಬಾಲಕನಲ್ಲಿ ಒಮಿಕ್ರಾನ್ ಸೋಂಕಿರುವುದು ದೃಢಪಟ್ಟಿದೆ. ಇದರೊಂದಿಗೆ ಭಾರತದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 145ಕ್ಕೆ ಏರಿದೆ. ದೇಶದ 11 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಮಿಕ್ರಾನ್ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಹಾರಾಷ್ಟ್ರ (48), ಕರ್ನಾಟಕ (14), ತೆಲಂಗಾಣ (20), ಗುಜರಾತ್ (9), ಕೇರಳ (11), ಆಂಧ್ರ ಪ್ರದೇಶ, ಚಂಡೀಗಢ, ತಮಿಳು ನಾಡು, ಬಂಗಾಳದಲ್ಲಿ ತಲಾ 1 ಒಮಿಕ್ರಾನ್ ಪ್ರಕರಣ ದೃಢಪಟ್ಟಿದೆ.
ನ್ಯೂಯಾರ್ಕ್ ದುಃಸ್ವಪ್ನದ ಕೇಂದ್ರ:2020ರಲ್ಲಿ ಅಮೆರಿಕದಲ್ಲಿ ಕರೊನಾ ಮಹಾಮಾರಿಯ ಕೇಂದ್ರವಾಗಿದ್ದ ನ್ಯೂಯಾರ್ಕ್​ನಲ್ಲಿ ಮತ್ತೆ ಅಲೆ ಮರು ಕಳಿಸುವ ಸೂಚನೆಗಳು ಕಾಣಿಸುತ್ತಿವೆ. ಮಹಾನಗರದಲ್ಲಿ ದೈನಿಕ ಪ್ರಕರಣಗಳ ಉಬ್ಬರ ಕಂಡುಬಂದಿದ್ದು, ಸತತ ಎರಡನೇ ದಿನವೂ ಸುಮಾರು 22,000 ಪಾಸಿಟಿವ್ ಕೇಸ್​ಗಳು ವರದಿಯಾಗಿವೆ. ಬ್ರೂಕ್ಲಿನ್​ನ ಗ್ರೀನ್​ಪಾಯಿಂಟ್ ಒಂದರಲ್ಲೇ ಡಜನ್​ಗೂ ಹೆಚ್ಚು ರೆಸ್ಟೋರೆಂಟ್ ಮತ್ತು ಬಾರ್​ಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಕೋವಿಡ್ ಪರೀಕ್ಷಾ ಕೇಂದ್ರಗಳ ಮುಂದೆ ಜನರು ಉದ್ದನೆಯ ಸಾಲುಗಳಲ್ಲಿ ನಿಂತು ತಮ್ಮ ಸರದಿಗಾಗಿ ಕಾಯುತ್ತಿದ್ದಾರೆ.
ನೆದರ್ಲೆಂಡ್ ಲಾಕ್​ಡೌನ್:ಒಮಿಕ್ರಾನ್ ಪ್ರಭೇದದ ಹಾವಳಿ ಹೆಚ್ಚುತ್ತಿರುವುದರಿಂದ ಯುರೋಪ್​ನಾದ್ಯಂತ ಬಿಗಿ ನಿಯಂತ್ರಣಾ ಕ್ರಮಗಳನ್ನು ಕೈಗೊಳ್ಳುತ್ತಿರುವುದರ ನಡುವೆ ನೆದರ್ಲೆಂಡ್ ಮತ್ತೆ ರಾಷ್ಟ್ರವ್ಯಾಪಿ ಲಾಕ್​ಡೌನ್ ಘೋಷಿಸಿದೆ. ಅಗತ್ಯವಲ್ಲದ ಅಂಗಡಿಗಳು, ಬಾರ್, ರೆಸ್ಟೋರೆಂಟ್​ಗಳನ್ನು ಭಾನುವಾರದಿಂದ ಜನವರಿ 14ರ ವರೆಗೆ ಮುಚ್ಚುವಂತೆ ಹಂಗಾಮಿ ಪ್ರಧಾನಿ ಮಾರ್ಕ್ ರ್ಯುಟ್ಟೆ ಆದೇಶಿಸಿದ್ದಾರೆ. ಶಾಲೆ, ಕಾಲೇಜ್ ಮತ್ತು ವಿಶ್ವ ವಿದ್ಯಾಲಯಗಳು ಜನವರಿ 9ರ ವರೆಗೆ ಮುಚ್ಚಿರುತ್ತವೆ. ಒಮಿಕ್ರಾನ್ ಇಟಲಿಯಲ್ಲಿ ವೇಗವಾಗಿ ಹರಡುತ್ತಿದೆ. ದೇಶದ ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿ ಸೋಂಕಿನ ಹೊಸ ಪ್ರಕರಣಗಳು ಪತ್ತೆಯಾಗಿವೆ ಎಂದು ರಾಷ್ಟ್ರೀಯ ಆರೋಗ್ಯ ಸಂಸ್ಥೆ ತಿಳಿಸಿದೆ.
ಒಮಿಕ್ರಾನ್​ಗೆ ಬೂಸ್ಟರ್ ಡೋಸ್ ಮದ್ದು:ಲಸಿಕೆಯ ಬೂಸ್ಟರ್ ಡೋಸ್ ನೀಡುವುದರಿಂದ ಒಮಿಕ್ರಾನ್​ನ ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರಿಗೆ ಶೇಕಡ 80ರಷ್ಟು ರಕ್ಷಣೆ ಒದಗಿಸಬಹುದು ಎಂದು ಅಮೆರಿಕದ ಸಂಶೋಧಕರ ತಂಡವೊಂದು ವಿಶ್ವಾಸ ವ್ಯಕ್ತಪಡಿಸಿದೆ. ಆದರೆ, ಬೂಸ್ಟರ್ ಡೋಸ್ ನೀಡುವ ರಕ್ಷಣೆಯು ಕೋವಿಡ್​ನ ಹಿಂದಿನ ರೂಪಾಂತರಿಗಳಲ್ಲಿ ಒದಗಿಸಿದ್ದಕ್ಕಿಂತ ಸ್ವಲ್ಪ ಕಡಿಮೆಯಿರುತ್ತದೆ ಎಂದು ಇಂಪೀರಿಯಲ್ ಕಾಲೇಜ್ ಲಂಡನ್​ನ ಸಂಶೋಧಕರು ಹೇಳಿದ್ದಾರೆ.
ಲಸಿಕೆ ಪರಿಣಾಮಕಾರಿ:ಕೋವಿಶೀಲ್ಡ್ ಲಸಿಕೆಯ ಎರಡೂ ಡೋಸ್ ಪಡೆದ ಏಳು ತಿಂಗಳ ನಂತರವೂ ಅದರಿಂದ ರಕ್ಷಣೆಯ ಪ್ರಮಾಣ ಅತ್ಯುನ್ನತವಾಗಿದೆ ಎಂಬುದು ಅಧ್ಯಯನವೊಂದರಿಂದ ತಿಳಿದು ಬಂದಿದೆ. ಲಸಿಕೆ ಪಡೆದವರಲ್ಲಿ ಶೇಕಡ 90ರಷ್ಟು ರಕ್ಷಣೆಯ (ಸೆರೊ) ಪ್ರಮಾಣ ಇರುವುದು 500ಕ್ಕೂ ಹೆಚ್ಚು ಆರೋಗ್ಯ ಕಾರ್ಯಕರ್ತರಲ್ಲಿ ನಡೆಸಿದ ವಿಶ್ಲೇಷಣೆಯಿಂದ ದೃಢಪಟ್ಟಿದೆ ಎಂದು ಪುಣೆಯ ಬಿಜೆ ಸರ್ಕಾರಿ ಮೆಡಿಕಲ್ ಕಾಲೇಜ್ ಮತ್ತು ಸಸೂನ್ ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ದೇಶದ ಬಹಳಷ್ಟು ಜನರಿಗೆ ಎರಡನೇ ಡೋಸ್ ಲಸಿಕೆ ಇನ್ನೂ ಸಿಗದಿರುವಾಗ ಬೂಸ್ಟರ್ ಡೋಸ್ ನೀಡಿಕೆ ಈ ಹಂತದಲ್ಲಿ ಅಪೇಕ್ಷಿತವಲ್ಲ ಎಂದು ಆಸ್ಪತ್ರೆಯ ಸಾಮುದಾಯಿಕ ಔಷಧಿ ವಿಭಾಗದ ಡಾ. ಮುರಳೀಧರ ತಾಂಬೆ ಅಭಿಪ್ರಾಯ ಪಟ್ಟಿದ್ದಾರೆ.
ಬ್ರೆಕ್ಸಿಟ್ ಮಂತ್ರಿ ರಾಜೀನಾಮೆ:ಹೊಸ ಕರೊನಾ ನಿಯಂತ್ರಣ ನಿಯಮಗಳಿಗೆ ಆಕ್ರೋಶ ವ್ಯಕ್ತವಾಗಿರುವುದರ ನಡುವೆ, ಹಠಾತ್ ಬೆಳವಣಿಗೆಯೊಂದರಲ್ಲಿ ಬ್ರಿಟನ್​ನ ಬ್ರೆಕ್ಸಿಟ್ ಸಚಿವ ಡೇವಿಡ್ ಫ್ರಾಸ್ಟ್ ಶನಿವಾರ ರಾತ್ರಿ ರಾಜೀನಾಮೆ ಸಲ್ಲಿಸಿದ್ದಾರೆ.
ಶೇಕಡ 100 ಲಸಿಕೆ ಸಾಧನೆ:ಕೇಂದ್ರಾಡಳಿತ ಪ್ರದೇಶ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಎಲ್ಲ ಅರ್ಹ ವ್ಯಕ್ತಿಗಳಿಗೆ ಕರೊನಾ ಲಸಿಕೆ ನೀಡಲಾಗಿದ್ದು, ಲಸಿಕೆ ಅಭಿಯಾನವನ್ನು ಪೂರ್ಣಗೊಳಿಸಲಾಗಿದೆ. ‘ಜಗತ್ತಿನ ತೀರಾ ಒಳನಾಡು ಪ್ರದೇಶಗಳಲ್ಲಿ ಒಂದೆನಿಸಿದ ಅಂಡಮಾನ್ ಮತ್ತು ನಿಕೋಬಾರ್​ನಲ್ಲಿ ಕಷ್ಟಕರ ಸನ್ನಿವೇಶದಲ್ಲಿ ಈ ಅಸಾಮಾನ್ಯ ಸಾಧನೆ ಮಾಡಲಾಗಿದೆ’ ಎಂದು ಅಧಿಕಾರಿಗಳು ಟ್ವೀಟ್ ಮಾಡಿದ್ದಾರೆ.
ಹೆದ್ದಾರಿಯಲ್ಲಿ ಭೀಕರ ಅಪಘಾತ: ತಂದೆ-ತಾಯಿ ಜತೆಗಿದ್ದ 3 ವರ್ಷದ ಅವಳಿ ಮಕ್ಕಳಿಬ್ಬರೂ ಸ್ಥಳದಲ್ಲೇ ಸಾವು!

ಫ್ಲೈಟಲ್ಲಿ ಬಂದು ಕಳವು ಮಾಡಿ ಫ್ಲೈಟಲ್ಲೇ ಮರಳಿದ; 5 ವರ್ಷಗಳ ಹಿಂದೆ ಕದ್ದು ಸಿಕ್ಕಿಬಿದ್ದಿದ್ದ ಆ ದ್ವೇಷವನ್ನು ಮತ್ತೆ ಕದ್ದೇ ತೀರಿಸಿಕೊಂಡ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 12 =
Remember me
