ನವದೆಹಲಿ:ಕರೊನಾ ವೈರಸ್​ ಜಗತ್ತಿಗೇ ಬಂದೊದಗಿದ ಮಹಾನ್​ ಬಿಕ್ಕಟ್ಟು. ಇಡೀ ಮಾನವ ಜನಾಂಗವನ್ನೇ ಆವರಿಸಿಕೊಂಡಿದೆ. ಕಳೆದ ಎರಡು ತಿಂಗಳುಗಳಿಂದ ವಿಶ್ವದೆಲ್ಲೆಡೆ ಕರೊನಾ ವೈರಸ್​ ಹರಡುತ್ತಿರುವ ಸುದ್ದಿಗಳನ್ನೇ ಕೇಳುತ್ತಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಕರೊನಾ ವೈರಸ್​ನಂತಹ ಜಾಗತಿಕ ಸಾಂಕ್ರಾಮಿಕ ರೋಗದ ಬಗ್ಗೆ ಅಲಕ್ಷ್ಯ ಮಾಡುವುದು ಸರಿಯಲ್ಲ. ನನಗೆ ತಿಳಿದ ಮಟ್ಟಿಗೆ ಈಗಿನವರೆಗೆ ಕರೊನಾ ವೈರಸ್​ಗೆ ವಿಜ್ಞಾನ ಸೂಕ್ತ ಔಷಧಿಯನ್ನು ಕಂಡುಹಿಡಿದಿಲ್ಲ. ಹಾಗೇ ಅದು ಬಾರದಂತೆ ತಡೆಯಲು ಯಾವುದೇ ಲಸಿಕೆಯೂ ಇಲ್ಲ. ಸಂದರ್ಭ ಹೀಗಿರುವಾಗ ಆತಂಕ ಆಗುವುದು ಸಹಜ. ಸಾಮಾಜಿಕವಾಗಿ ಅಂತರ ಕಾಯ್ದುಕೊಳ್ಳುವುದೇ ರೋಗ ನಿಯಂತ್ರಣಕ್ಕೆ ಇರುವ ಮಾರ್ಗ ಎಂದರು.
ಕರೊನಾ ವೈರಸ್​ ನಮಗೆ ತಗುಲುವುದಿಲ್ಲ ಎಂದು ಯಾರೂ ನಿರ್ಲಕ್ಷ್ಯ ಮಾಡಬಾರದು. ವೈರಸ್​ನಿಂದ ಸುರಕ್ಷಿತವಾಗಿದ್ದೇವೆ ಎಂದು ಭಾವಿಸಿಕೊಂಡು ಸುಮ್ಮನೆ ಇರುವ ಸಮಯ ಇದಲ್ಲ. ಪ್ರತಿ ಭಾರತೀಯನೂ ಕರೊನಾ ಬಗ್ಗೆ ಜಾಗೃತನಾಗಿರಬೇಕು. ಮುನ್ನೆಚ್ಚರಿಕೆ ವಹಿಸಬೇಕು ಎಂದು ನರೇಂದ್ರ ಮೋದಿ ಹೇಳಿದರು.
ಭಾರತದಂತಹ ಹೆಚ್ಚಿನ ಜನಸಂಖ್ಯೆ ಇರುವ ಅಭಿವೃದ್ಧಿ ಶೀಲ ರಾಷ್ಟ್ರಗಳಲ್ಲಿ ಕರೊನಾ ವೈರಸ್​ ಪಸರಿಸುತ್ತಿದೆ. ಇದು ಖಂಡಿತ ಒಂದು ಸವಾಲು. ಪರಿಸ್ಥಿತಿ ಸಹಜವಾಗಿ ಇಲ್ಲ. ಯುದ್ಧ ಸಂದರ್ಭ ಎದುರಾಗಿದೆ. ಜಿಲ್ಲೆ, ಹಳ್ಳಿಗಳೆಲ್ಲ ಪೂರ್ತಿ ಬಂದ್ ಆಗುತ್ತಿವೆ. ಹಾಗಾಗಿ ಸಾಧ್ಯವಾದಷ್ಟು ಎಲ್ಲರೂ ಮನೆಯಲ್ಲೇ ಇರಿ. ರಸ್ತೆಗಳಲ್ಲಿ ಓಡಾಡಬೇಡಿ. 60 ವರ್ಷ ಮೇಲ್ಪಟ್ಟವರು ಮನೆಯಿಂದ ಹೊರಬೀಳಲೇಬೇಡಿ. ದೇಶ ಹಿತವನ್ನು ಕಾಪಾಡಲು ಆತ್ಮಸಂಯಮ ವಹಿಸಿ. ತೀರ ಅನಿವಾರ್ಯ ಆದಾಗ ಮಾತ್ರ ಮನೆಯಿಂದ ಹೊರಬನ್ನಿ ಎಂದರು.
ಮಾ.22ರಂದು ಬೆಳಗ್ಗೆ 7ರಿಂದ ರಾತ್ರಿ 9ರವರೆಗೆ ಎಲ್ಲ ದೇಶವಾಸಿಗಳೂ ಜನತಾ ಕರ್ಫ್ಯೂವನ್ನು ಪಾಲಿಸಿ ಎಂದು ಪ್ರಧಾನಿ ಕರೆ ನೀಡಿದ್ದಾರೆ. ಅಂದು ಯಾರೂ ಮನೆಯಿಂದ ಹೊರಗೆ ಬರಲೇಬೇಡಿ. ಎಲ್ಲರೂ ಸಹಕರಿಸಿ. ಇದು ನನ್ನ ಆಗ್ರಹ ಎಂದು ಹೇಳಿದ್ದಾರೆ.
ಮಾ.22ರ ‘ಜನತಾ ಕರ್ಫ್ಯೂ’ ದಿನದಂದು ಸಂಜೆ 5ಗಂಟೆಗೆ 5 ನಿಮಿಷ ಮೀಸಲಿಡಿ…; ಪ್ರಧಾನಿ ಮೋದಿಯವರು ಹೀಗೆ ಹೇಳಿದ್ದೇಕೆ ಗೊತ್ತಾ?

ಏರುತ್ತಲೇ ಇದೆ ಕರೊನಾ ಸೋಂಕಿತರ ಸಂಖ್ಯೆ; ವೈರಸ್​ ಪಸರಿಸುವುದನ್ನು ತಡೆಯಲು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಹೆಚ್ಚುವರಿ ಸಲಹೆಗಳು ಹೀಗಿವೆ….

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + eleven =
Remember me
