ಪಂಜಾಬ್​​:73 ವರ್ಷದ ಮಹಿಳೆಗೆ ತನ್ನ ಸ್ವಂತ ಮನೆಯಲ್ಲಿ ಮಗ, ಸೊಸೆ ಮತ್ತು ಮೊಮ್ಮಗ ಸೇರಿ ಹೊಡೆದು ಚಿತ್ರಹಿಂಸೆ ನೀಡಿದ್ದಾರೆ. ಪಂಜಾಬ್​ನಲ್ಲಿ ಈ ಆಘಾತಕಾರಿ ಘಟನೆಯೊಂದು ವೈರಲ್​​ ಆಗಿದೆ.
ವೃದ್ಧ ಮಹಿಳೆ ಆಶಾರಾಣಿ (73) ಎಂದು ಗುರುತಿಸಲಾಗಿದ್ದು, ಸೊಸೆ ಹಾಗೂ ಮೊಮ್ಮಗನೊಂದಿಗೆ ಪಂಜಾಬ್‌ನ ರೂಪ್‌ನಗರದಲ್ಲಿ ವಾಸವಿದ್ದರು.   ಈ ಮಹಿಳೆ ಮಗನಾದ ಅಂಕುರ್ ವರ್ಮಾ ಲಾಯರ್ ಆಗಿ ಕೆಲಸ ಮಾಡುತ್ತಾನೆ. ನಿರ್ದಯವಾಗಿ ಪದೇ ಪದೇ ತಾಯಿಯನ್ನು ಥಳಿಸಿದ್ದಾನೆ. ಈ ಕೃತ್ಯಕ್ಕೆ ವೃದ್ಧೆಯ ಸೊಸೆ ಹಾಗೂ ಮೊಮ್ಮಗನೂ ಸಾಥ್ ನೀಡಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬಂದಿದೆ. ಸಿಸಿಟಿವಿ ಕ್ಯಾಮೆರಾದ ಪುರಾವೆಗಳ ಆಧಾರದ ಮೇಲೆ ಈ ಮೂವರನ್ನು ಅರೆಸ್ಟ್​​ ಮಾಡಲಾಗಿದೆ.
ಆಶಾರಾಣಿ ಅವರ ಪತಿ ಇತ್ತೀಚೆಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಮಗನ ಜತೆ ವಾಸವಾಗಿದ್ದಾರೆ. ತಮ್ಮ ಪುತ್ರ ಅಂಕುರ್ ವರ್ಮಾ ಮತ್ತು ಅವರ ಪತ್ನಿ ಸುಧಾ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮಗಳು ದೀಪಶಿಖಾ ಅವರಿಗೆ ತಿಳಿಸಿದ್ದರು. ಮಗಳು ಆಶಾರಾಣಿಯ ಕೋಣೆಯಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಿಂದ ದೃಶ್ಯಗಳನ್ನು ಪಡೆದುಕೊಂಡಳು. ಸೆಪ್ಟೆಂಬರ್ 19, ಅಕ್ಟೋಬರ್ 21 ಮತ್ತು ಅಕ್ಟೋಬರ್ 24 ರಂದು ನಡೆದ ಹಲ್ಲೆಯ ವೀಡಿಯೊಗಳಲ್ಲಿ ಗುದ್ದುವುದು ಮತ್ತು ಕಪಾಳಮೋಕ್ಷ ಮಾಡುವುದನ್ನು ತೋರಿಸಿದೆ. ಸುಧಾ ಆಶಾರಾಣಿಗೆ ಕಪಾಳಮೋಕ್ಷ ಮಾಡಿದ್ದು, ಮೊಮ್ಮಗ ಆಕೆಯನ್ನು ಎಳೆದೊಯ್ಯುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಇದನ್ನು ನೋಡಿದ ಮಗಳು ದೀಪಶಿಖಾ ಪೊಸಲೀಸ್​​ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ಪೊಲೀಸ್ ತಂಡ ಮತ್ತು ಎನ್‌ಜಿಒದ ಕೆಲವರು ಶನಿವಾರ ಆಶಾರಾಣಿ ಮನೆಗೆ ಆಗಮಿಸಿ ವೃದ್ಧೆಯನ್ನು ರಕ್ಷಿಸಿದ್ದಾರೆ.
This gruesome video gave me nightmaresIn Ropar, A son beating his mother and a grandson poring water on bed and blaming her for urinating in bedLawyer son was doing same to his deceased fatherpic.twitter.com/QRACY8AiSX
— Swathi Bellam (@BellamSwathi)October 29, 2023

ಅಂಕುರ್‌ನನ್ನು ಬಂಧಿಸಲಾಗಿದೆ ಮತ್ತು ಆಸ್ತಿಯನ್ನು ಸುಲಿಗೆ ಮಾಡಲು ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು, ಅಕ್ರಮ ಬಂಧನ ಮತ್ತು ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆಯ ಸೆಕ್ಷನ್ 24 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಖ್ಯಾತ ನಟನ ಮನೆಯಲ್ಲಿ ಭಾರೀ ಕಳ್ಳತನ; ಚಿನ್ನ, ಹಣ ದೋಚಿದ ಕೆಲಸದಾಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
