ಮುಂಬೈ:ವಾಣಿಜ್ಯ ನಗರಿ ಮುಂಬೈನಲ್ಲಿ ವರುಣನ ಆರ್ಭಟದಿಂದ ಅವಾಂತರ ಸೃಷ್ಟಿಯಾಗಿದ್ದು, ನಿಮಿಷಗಳ ಅಂತರದಲ್ಲಿ ಮಹಿಳೆಯರಿಬ್ಬರು ತೆರೆದ ಮ್ಯಾನ್​ ಹೋಲ್​ಗೆ ಬಿದ್ದಿರುವ ಘಟನೆ ಮುಂಬೈನ ಭಂಡೂಪ್​ ಏರಿಯಾದಲ್ಲಿ ನಡೆದಿದ್ದು, ಅದೃಷ್ಟವಶಾತ್​ ಇಬ್ಬರು ಸಹ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋದಲ್ಲಿರುವಂತೆ ಭಾರಿ ಮಳೆಯಿಂದ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು, ಪುಟ್​ಪಾತ್​ ಮೇಲೆ ನಡೆದು ಹೋಗುತ್ತಿದ್ದ ಮಹಿಳೆಯರು ಒಬ್ಬರ ಹಿಂದಂತೆ ಒಬ್ಬರು ನಿಮಿಷಗಳ ಅಂತರದಲ್ಲಿ ಮ್ಯಾನ್​ ಹೋಲ್​ಗೆ ಒಳಗೆ ಬೀಳುತ್ತಾರೆ.
ವಿಡಿಯೋ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರು ಮುಂಬೈ ನಾಗರಿಕ ಮಂಡಳಿ ಬಿಎಂಸಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ತೆರೆದಿರುವ ಮ್ಯಾನ್​ ಹೋಲ್​ಗಳನ್ನು ಮುಚ್ಚುವಂತೆ ಆಗ್ರಹಿಸಿದ್ದಾರೆ.
ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ ವರುಣನ ಆರ್ಭಟದಿಂದ ಅವಾಂತರ ಸೃಷ್ಟಿಯಾಗಿದ್ದು, ನಿಮಿಷಗಳ ಅಂತರದಲ್ಲಿ ಮಹಿಳೆಯರಿಬ್ಬರು ತೆರೆದ ಮ್ಯಾನ್​ ಹೋಲ್​ಗೆ ಬಿದ್ದಿರುವ ಘಟನೆ ಮುಂಬೈನ ಭಂಡೂಪ್​ ಏರಿಯಾದಲ್ಲಿ ನಡೆದಿದ್ದು, ಅದೃಷ್ಟವಶಾತ್​ ಇಬ್ಬರು ಸಹ ಪ್ರಾಣಾಪಾಯದಿಂದ ಪಾರಾಗಿದ್ದಾರೆ.#Mumbai#Women#HeavyRain#Manholepic.twitter.com/WNvxl8yEX9
— Vijayavani (@VVani4U)June 10, 2021

ಮುಂಗಾರು ಪೂರ್ವ ಮಳೆಗೂ ಮುನ್ನ ಮ್ಯಾನ್​ ಹೋಲ್​ಗಳ ದುರಸ್ಥಿ ಕಾರ್ಯ ನಗರದಲ್ಲಿ ನಡೆಯುತ್ತಿತ್ತು. ಆದರೆ, ನಿನ್ನೆ ಸುರಿದ ಮಳೆಯಿಂದಾಗಿ ನಗರದಲ್ಲಿ ಈ ಅವಾಂತರ ಸೃಷ್ಟಿಯಾಗಿದೆ. ಘಟನೆ ಬೆನ್ನಲ್ಲೇ ಎಚ್ಚೆತ್ತಿರುವ ಬಿಎಂಸಿ, ಮ್ಯಾನ್​ ಹೋಲ್​ಗಳನ್ನು ಮುಚ್ಚಲು ಸೂಚನೆ ನೀಡಿದೆ.(ಏಜೆನ್ಸೀಸ್​)
ತಿಂಗಳ ಬಳಿಕ ಪತ್ತೆಯಾದ ಕಿಮ್​ ಜಾಂಗ್​ ಉನ್​ಗೆ ಏನಾಗಿದೆ? ವೈರಲ್​ ಫೋಟೋ ಹಿಂದೆ ಬಿದ್ದ ಮಾಧ್ಯಮಗಳು!

ದೆಹಲಿ ತಲುಪಿದ ಯೋಗಿ; ನಾಳೆ ಪ್ರಧಾನಿ ಜತೆ ಮಾತುಕತೆ

5 ರೂಪಾಯಿ ನೋಟು ವಿನಿಮಯ ಮಾಡಿ 30 ಸಾವಿರ ರೂ. ಸಂಪಾದಿಸಿ! ಹೇಗೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + 20 =
Remember me
