ಜಲೌನ್​:ಕೆಲ ಸ್ಥಳೀಯ ಗೂಂಡಾಗಳು ಎಂಟು ತಿಂಗಳ ಗರ್ಭಿಣಿಯ ಮೇಲೆ ಹಲ್ಲೆ ಮಾಡಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಜಲೌನ್​ನಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್​ ಆಗಿದೆ. ಗರ್ಭಿಣಿ ಎಂದೂ ನೋಡದೆ ಮೃಗಗಳಂತೆ ವರ್ತಿಸಿರುವ ಗೂಂಡಾಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಗರ್ಭಿಣಿಯ ಜೊತೆಗೆ ಆಕೆಯ ಪತಿಯ ಮೇಲೆಯೂ ದುಷ್ಕರ್ಮಿಗಳು ಮನಸೋ ಇಚ್ಛೆ ಥಳಿಸಿದ್ದಾರೆ. ಗಂಡನ ಚಿಕ್ಕಪ್ಪನ ಬಗ್ಗೆ ಮಾಹಿತಿ ನೀಡಲಿಲ್ಲ ಎಂಬ ಕಾರಣಕ್ಕೆ ಗರ್ಭಿಣಿ ಮೇಲೆ ದೌರ್ಜನ್ಯ ಮೆರೆದಿದ್ದಾರೆ.
ಆರೋಪಿಗಳಾದ ರವೀಂದ್ರ, ಮನಮೋಹನ್ ಮತ್ತು ಮನಮೋಹನ್ ಅವರ ಪುತ್ರ ಆದೇಶ್, ಗರ್ಭಿಣಿ ಉಪಾಸನ ಮನೆಗೆ ಬಂದು ಗಂಡನ ಚಿಕ್ಕಪ್ಪನ ವಿರುದ್ಧ ನಿಂದಿಸಲು ಪ್ರಾರಂಭಿಸಿದರು. ಈ ವೇಳೆ ಗರ್ಭಿಣಿಯ ಪತಿ ಸಂದೀಪ್ ಆಕ್ಷೇಪ ವ್ಯಕ್ತಪಡಿಸಿದಾಗ ಆರೋಪಿಗಳು ಜಗಳವಾಡಲು ಶುರು ಮಾಡಿದ್ದಾರೆ ಎಂದು ಜಲೌನ್ ಉಪ ಪೊಲೀಸ್ ವರಿಷ್ಠಾಧಿಕಾರಿ ಶೈಲೇಂದ್ರ ಬಾಜ್‌ಪೇಯ್ ಹೇಳಿದರು.
ಜಗಳ ತಾರಕಕ್ಕೇರಿ ಸಂದೀಪ್​ನನ್ನು ಥಳಿಸಲು ಆರಂಭಿಸಿದಾಗ ಗಂಡನನ್ನು ಬಿಡಿಸಲು ಬಂದ ಗರ್ಭಿಣಿ ಉಪಾಸನಾ ಮೇಲೂ ದುಷ್ಕರ್ಮಿಗಳು ಥಳಿಸಿದ್ದಾರೆ. ಉಪಾಸನಾ 8 ತಿಂಗಳ ಗರ್ಭಿಣಿಯಾಗಿದ್ದು, ದುಷ್ಕರ್ಮಿಗಳಿಂದ ಥಳಿತಕ್ಕೊಳಗಾದ ಆಕೆ ಮೂರ್ಚೆ ಹೋದಳು. ನಂತರ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಬಂದು ಆಕೆಗೆ ನೆರವು ನೀಡಿದರು ಎಂದು ಶೈಲೇಂದ್ರ ಬಾಜ್‌ಪೇಯ್ ತಿಳಿಸಿದರು.
ಘಟನೆ ಸಂಬಂಧ ದೂರು ದಾಖಲಾಗಿದ್ದು, ವಿಡಿಯೋ ಆಧಾರದ ಮೇಲೆ ದುಷ್ಕರ್ಮಿಗಳ ವಿರುದ್ಧ ಕ್ರಮ ಜರುಗಿಸಲು ಪೊಲೀಸರು ಮುಂದಾಗಿದ್ದಾರೆ.(ಏಜೆನ್ಸಿಸ್​)
ಪ್ರಧಾನಿ ಮೋದಿ ವಿರುದ್ಧ ಪಾಕ್​ ವಿದೇಶಾಂಗ ಸಚಿವ ಬಿಲಾವಲ್ ಕೀಳುಪದ ಬಳಕೆ: ಮಾಜಿ ಸಿಎಂ ಯಡಿಯೂರಪ್ಪ ಖಂಡನೆ

ರಾಮನಗರದಲ್ಲಿ ಅದ್ದೂರಿ ಶ್ರೀನಿವಾಸ ಕಲ್ಯಾಣೋತ್ಸವ: ತಿರುಮಲದ ಪ್ರತಿಬಿಂಬದಂತೆ ಕಂಗೊಳಿಸಿದ ಕ್ರೀಡಾಂಗಣ, ಭಕ್ತಿಭಾವದಲ್ಲಿ ಮಿಂದೆದ್ದ ಸಹಸ್ರಾರು ಮಂದಿ

ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಶಂಕಿತ ಉಗ್ರ ಶಾರಿಖ್ ಬೆಂಗಳೂರಿಗೆ ಸ್ಥಳಾಂತರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − twelve =
Remember me
