ನವದೆಹಲಿ:ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸಿದ ಟ್ರ್ಯಾಕ್ಟರ್​ ರ್ಯಾಲಿಯ ವೇಳೆ ಕೇಂದ್ರ ದೆಹಲಿಯ ಐಟಿಒ ಜಂಕ್ಷನ್​ ಬಳಿ ಟ್ರ್ಯಾಕ್ಟರ್​ ಉರುಳಿಬಿದ್ದು ರೈತನೊಬ್ಬ ಮೃತಪಟ್ಟಿರುವುದಾಗಿ ಪೊಲೀಸರು ಮಂಗಳವಾರ ಮಾಹಿತಿ ನೀಡಿದ್ದಾರೆ.
ಪೊಲೀಸರು ಮತ್ತು ರೈತರ ನಡುವಿನ ತಿಕ್ಕಾಟದಲ್ಲಿ ದುರ್ಘಟನೆ ಸಂಭವಿಸಿದ್ದು, ಪ್ರತಿಭಟನೆ ಕೂರುವ ಮುನ್ನ ಪೊಲೀಸರು ನಡೆಸಿದ ಫೈರಿಂಗ್​ನಲ್ಲಿ ರೈತ ಮೃತಪಟ್ಟಿದ್ದಾನೆಂದು ಇದೇ ವೇಳೆ ದೀನ ದಯಾಳ್​ ಉಪಾಧ್ಯಾಯ ಮಾರ್ಗದ ಬಳಿಯಿದ್ದ ರೈತರು ಆರೋಪಿಸಿದ್ದಾರೆ.
ಇದನ್ನೂ ಓದಿರಿ:ನೀ ಬಂದ ಮೇಲೆ ಸಾಲ ಹೆಚ್ಚಾಯಿತೆಂದು ಸೊಸೆಯನ್ನು ಹೀಯಾಳಿಸಿದ ಮಾವ; ಕೆಲವೇ ದಿನಗಳಲ್ಲಿ ಹಾದಿಯ ಹೆಣವಾದ
ವೈರಲ್​ ಆಗಿರುವ ಸಿಸಿಟಿವಿ ವಿಡಿಯೋದಲ್ಲಿ ವೇಗವಾಗಿ ಬರುತ್ತಿದ್ದ ನೀಲಿ ಬಣ್ಣದ ಟ್ರ್ಯಾಕ್ಟರ್​, ದೆಹಲಿ ಪೊಲೀಸರು ರಸ್ತೆಗೆ ಅಡ್ಡಲಾಗಿ ಇರಿಸಿದ್ದ ಬ್ಯಾರಿಕೇಡ್​ ಗುದ್ದಿ ಎರಡು ಬಾರಿ ರಸ್ತೆಯ ಮೇಲೆ ಪಲ್ಟಿ ಹೊಡೆಯುತ್ತದೆ.
https://t.co/UKzxWpvNsZ
— Vijayavani (@VVani4U)January 26, 2021

ಮೃತ ರೈತನನ್ನು ನವದೀಪ್​ ಸಿಂಗ್​ ಹುಂಡಾಲ್​ಗ (26) ಎಂದು ಗುರುತಿಸಲಾಗಿದ್ದು, ಈತ ಉತ್ತರಖಂಡದ ಬಜ್ಪುರ್​ ಏರಿಯಾ ನಿವಾಸಿ. ನವದೀಪ್​ ಇತ್ತೀಚೆಗಷ್ಟೇ ಮದುವೆಯಾಗಿದ್ದರು. ಪೊಲೀಸರು ಮಾಡಿದ ಫೈರಿಂಗ್​ನಿಂದ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟನೆಂದು ಉತ್ತರಖಂಡದ ಇತರೆ ಇಬ್ಬರು ರೈತರು ಆರೋಪ ಮಾಡಿದ್ದಾರೆ. ಮಧ್ಯಾಹ್ನದ ಬಳಿಕ ನವದೀಪ್​ ಮೃತದೇಹವನ್ನು ಸ್ಥಳದಿಂದ ತೆಗೆಯಲು ರೈತರು ಅನುಮತಿ ನೀಡಿದರು.
ಗಣರಾಜ್ಯೋತ್ಸವ ದಿನದಂದೇ ರೈತರು ಹಮ್ಮಿಕೊಂಡಿದ್ದ ಟ್ರ್ಯಾಕ್ಟರ್​ ರ್ಯಾಲಿ ಹಿಂಸಾಚಾರಕ್ಕೆ ತಿರುಗಿತು. ಪೊಲೀಸರು ಮತ್ತು ರೈತರ ನಡುವೆ ತೀವ್ರ ತಿಕ್ಕಾಟ ನಡೆಯಿತು. ಈ ವೇಳೆ ರೈತರನ್ನು ಚೆದುರಿಸಲು ಲಾಠಿಚಾರ್ಜ್​ ಮತ್ತು ಅಶ್ರುವಾಯು ಬಳಸಲಾಯಿತು. ಉದ್ರಿಕ್ತ ರೈತರು ಪೊಲೀಸರು ರಸ್ತೆಗಳಲ್ಲಿ ಹಾಕಿದ್ದ ಬ್ಯಾರಿಕೇಡ್​ಗಳನ್ನು ಕಿತ್ತೆಸೆದು, ಕೆಂಪುಕೋಟೆಗೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದರು.(ಏಜೆನ್ಸೀಸ್​)
ಇದನ್ನೂ ಓದಿರಿ:ಆ ಒಂದು ವಾಟ್ಸ್​ಆ್ಯಪ್​ ಮೆಸೇಜ್​ಗೆ ಆತುರ ನಿರ್ಧಾರ: ಪ್ರೇಮಿಗಳಿಬ್ಬರ ದುರಂತ ಅಂತ್ಯ!
ಎಟಿಎಂ ಕೀಪ್ಯಾಡ್​ ನೆಕ್ಕಿ ಅಶ್ಲೀಲ ಪದ ಪ್ರಯೋಗಿಸಿದ ಅಪರಿಚಿತ: ಬೆಚ್ಚಿಬಿದ್ದ ಮಹಿಳೆಯಿಂದ ದೂರು!

ಮತ್ತೊಬ್ಬರ ನೋವು ಅರ್ಥವಾಗದ ಆದಿತ್ಯಾನಾಥ ನಿಜವಾದ ಯೋಗಿಯಲ್ಲ; ಬಿಜೆಪಿ ಕಾಲೆಳೆದ ಅಖಿಲೇಶ್​ ಯಾದವ್​

ಹಣೆ ಮೇಲೆ ಒಂದೇ ಕಣ್ಣು ಎರಡು ಕಣ್ಣಿನ ಪಾಪೆ: ವಿಚಿತ್ರ ಮೇಕೆ ಮರಿ ದೇವರ ಅವತಾರವಂತೆ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twenty − six =
Remember me
