ಪಟನಾ:ಎಲ್ಲಿ ನಮ್ಮನೆಲ್ಲ ಹಿಡಿದು ಕರೊನಾ ವೈರಸ್​ ಟೆಸ್ಟ್​ ಮಾಡಿಸುತ್ತಾರೋ ಎಂಬ ಭಯದಲ್ಲಿ ಮಕ್ಕಳು, ಯುವಕರು ಸೇರಿದಂತೆ ಅನೇಕರು ರೈಲು ನಿಲ್ದಾಣದಲ್ಲಿ ಯರ್ರಾಬಿರ್ರಿ ಓಡಿದ ಘಟನೆ ಬಿಹಾರದ ಬುಕ್ಸರ್​ನಲ್ಲಿ ಗುರುವಾರ ನಡೆದಿದೆ.​
ರೈಲು ಇಳಿದು ನಿಲ್ದಾಣದಿಂದ ಹೊರ ಹೋಗುವ ಮುಂಚೆ ಕರೊನಾ ಟೆಸ್ಟ್​ ಮಾಡಿಸಲು ಅಲ್ಲಿನ ಆರೋಗ್ಯ ಕಾರ್ಯಕರ್ತರು ಕೇಳಿದಾಗ, ಟೆಸ್ಟ್​ ತಪ್ಪಿಸಿಕೊಳ್ಳುವ ಉದ್ದೇಶದಿಂದಲೇ ಜನರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ರೈಲು ನಿಲ್ದಾಣಗಳಲ್ಲಿ ಟೆಸ್ಟಿಂಗ್​ ಮಾಡುವಂತೆ ಇತ್ತೀಚೆಗಷ್ಟೇ ಬಿಹಾರ ಸಿಎಂ ನಿತೀಶ್​ ಕುಮಾರ್​ ಸೂಚನೆ ನೀಡಿದ್ದಾರೆ. ದೇಶದ ವಿವಿಧ ಭಾಗಗಳಿಂದ ತವರಿಗೆ ಬರುವ ಜನರ ಪರೀಕ್ಷೆ ಮಾಡಬೇಕೆಂದು ನಿತೀಶ್​ ಅವರು ಹೇಳಿದ್ದರು. ಆದರೆ, ಜನರು ಕರೊನಾ ಟೆಸ್ಟ್​ ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದು, ಅವರಲ್ಲಿರುವ ಭಯವೇ ಕಾರಣ ಎನ್ನಲಾಗಿದೆ.
ಇದನ್ನೂ ಓದಿರಿ:ಕೋಟಿ ಗಳಿಕೆಯ ಮಾರ್ಗ ತುಂಬ ಸುಲಭ!
ಪಟನಾ: ಎಲ್ಲಿ ನಮ್ಮನೆಲ್ಲ ಹಿಡಿದು ಕರೊನಾ ವೈರಸ್​ ಟೆಸ್ಟ್​ ಮಾಡಿಸುತ್ತಾರೋ ಎಂಬ ಭಯದಲ್ಲಿ ಮಕ್ಕಳು, ಯುವಕರು ಸೇರಿದಂತೆ ಅನೇಕರು ರೈಲು ನಿಲ್ದಾಣದಲ್ಲಿ ಯರ್ರಾಬಿರ್ರಿ ಓಡಿದ ಘಟನೆ ಬಿಹಾರದ ಬುಕ್ಸರ್​ನಲ್ಲಿ ಗುರುವಾರ ನಡೆದಿದೆ.​#Bihar#RailwayStation#Coronavirus#Covid19#CoronaTestpic.twitter.com/t9S96awBus
— Vijayavani (@VVani4U)April 17, 2021

ನಾವು ಜನರನ್ನು ನಿಲ್ಲಿಸಲು ಯತ್ನಿಸಿದಾಗ ಅವರು ನಮ್ಮೊಂದಿಗೆ ವಾಗ್ವಾದಕ್ಕೆ ಇಳಿದರು. ಅಲ್ಲಿ ಯಾವೊಬ್ಬ ಪೊಲೀಸ್​ ಸಹ ಇರಲಿಲ್ಲ. ಇದಾದ ಬಳಿಕ ಮತ್ತೊಬ್ಬ ಮಹಿಳಾ ಪೊಲೀಸ್​ ಬಂದರು. ಆದರೆ ಒಬ್ಬಳೇ ಇದ್ದಿದ್ದರಿಂದ ನಾನು ಅಸಹಾಯಕನೆಂದರು ಎಂದು ಬುಕ್ಸರ್​ನ ಸ್ಥಳೀಯ ಕೋವಿಡ್​ ಸಮಾಲೋಚಕ್ ಜೈ ತಿವಾರಿ ಹೇಳಿದರು.
ಬಿಹಾರದಲ್ಲೂ ಸಹ ದಿನೇ ದಿನೆ ಕರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಶುಕ್ರವಾರವಷ್ಟೇ ನಿತೀಶ್​ ಕುಮಾರ್​ ಅವರು ಉನ್ನತ ಮಟ್ಟದ ಸಭೆ ನಡೆಸಿದ್ದು, ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಿದ್ದಾರೆ. ಇನ್ನು ಬಿಹಾರದಲ್ಲಿ 6253 ಹೊಸ ಪ್ರಕರಣಗಳು ಮತ್ತು 13 ಹೊಸ ಸಾವಿನ ಪ್ರಕರಣಗಳು ವರದಿಯಾಗಿವೆ.(ಏಜೆನ್ಸೀಸ್​)
ತಮಿಳು ಚಿತ್ರರಂಗದ​ ಹಿರಿಯ ಹಾಸ್ಯ ಕಲಾವಿದ ವಿವೇಕ್​ ವಿಧಿವಶ

ವಿಜಯವಾಣಿ ರಾಜ್ ಉತ್ಸವ: ಡಾ ರಾಜ್ ನಿರ್ಮಾಪಕರಾದಾಗ…

ಕೃಷ್ಣಾ ಟಾಕೀಸ್ ಚಿತ್ರ ವಿಮರ್ಶೆ: ಊಹೆಗೆ ನಿಲುಕುವ ಹಾರರ್ ಕಥೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 20 =
Remember me
