ಕೋಲ್ಕತ:ಸುಮಾರು ಒಂದು ಗಂಟೆಗಳ ಕಾಲ ಚುನಾವಣಾ ಪ್ರಚಾರ ನಡೆಸಿ ತಾಳ್ಮೆ ಕಳೆದುಕೊಂಡು ಕೋಪ ಮಾಡಿಕೊಂಡ ತೃಣಮೂಲ ಕಾಂಗ್ರೆಸ್​ (ಟಿಎಂಸಿ) ಸಂಸದೆ ನುಸ್ರತ್​ ಜಹಾನ್​ರನ್ನು ಬಿಜೆಪಿ ವ್ಯಂಗ್ಯವಾಡಿದೆ.
“ನಾನು ಒಂದು ಗಂಟೆಗೂ ಹೆಚ್ಚು ಸಮಯ ಪ್ರಚಾರ ಮಾಡುತ್ತಿದ್ದೇನೆ. ಹೇಳಬೇಕೆಂದರೆ ಮುಖ್ಯಮಂತ್ರಿಯವರಿಗೂ ಇಷ್ಟು ಸಮಯ ಪ್ರಚಾರ ಮಾಡುವುದಿಲ್ಲ,” ಎಂದು ಬೇಸರದಿಂದ ವಿಡಿಯೋದಲ್ಲಿ ಹೇಳಿರುವುದನ್ನು ಕೇಳಬಹುದು.
ದಿನಾಂಕವೇ ಇಲ್ಲದ ವಿಡಿಯೋ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದು, ತೆರೆದ ವಾಹನ ಒಂದರಲ್ಲಿ ನಿಂತಿರುವ ನುಸ್ರತ್​ರನ್ನು ವ್ಯಕ್ತಿಯೊಬ್ಬ ಮನವಿ ಮಾಡಿಕೊಳ್ಳುತ್ತಿರುವುದು ವಿಡಿಯೋದಲ್ಲಿ ಇದೆ. ಮುಖ್ಯ ರಸ್ತೆಯವರೆಗೂ ಪ್ರಚಾರ ಮಾಡೋಣ, ಇಲ್ಲೇ ಹತ್ತಿರದಲ್ಲಿದೆ. ಇನ್ನು ಅರ್ಧ ಕಿ.ಮೀ ಗೆ ಮುಖ್ಯರಸ್ತೆ ಸಿಗುತ್ತದೆ ಎಂದು ಹೇಳಿದರೂ ಕೇಳದ ನುಸ್ರತ್​, ವಾಹನದಿಂದ ಕೆಳಗಿಳಿದು ಪ್ರಚಾರಕ್ಕೆ ಗುಡ್​ಬೈ ಹೇಳುತ್ತಾರೆ.
ಇದನ್ನೂ ಓದಿರಿ:ಕರೊನಾ ಎರಡನೇ ಅಲೆಯ ತೀವ್ರತೆ ಹೆಚ್ಚಳ; ಒಂದೇ ದಿನ 3,082 ಮಂದಿಯಲ್ಲಿ ಸೋಂಕು ಪತ್ತೆ!
25 ಸೆಕೆಂಡಿನ ವಿಡಿಯೋವನ್ನು ಪಶ್ಚಿಮ ಬಂಗಾಳ ಬಿಜೆಪಿ, ತನ್ನ ಟ್ವಿಟರ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದು, #MamataLosingNandigram ಎಂಬ ಅಡಿಬರಹ ನೀಡಿದ್ದಾರೆ.
TMC MP Nusrat Jahan " I can't do rally for more than 1 hour, I don't even do it for CM"😆#MamataLosingNandigrampic.twitter.com/p0jOm4iy03
— BJP Bengal (@BJP4Bengal)March 28, 2021

ಪ್ರತಿಷ್ಠೆಯ ಕಣವಾಗಿರುವ ನಂದಿಗ್ರಾಮದಲ್ಲಿ ಎರಡು ಪಕ್ಷಗಳಿಂದ ಸ್ಟಾರ್​ ಪ್ರಚಾರಕರನ್ನು ನೇಮಿಸಿವೆ. ಹೈವೋಲ್ಟೇಜ್​ ಕ್ಷೇತ್ರವಾಗಿರುವ ನಂದಿಗ್ರಾಮದಲ್ಲಿ ಹಾಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಬಿಜೆಪಿಯ ಸುವೆಂದು ಅಧಿಕಾರಿಯ ನಡುವೆ ತೀವ್ರ ಪೈಪೋಟಿ ಇದೆ.
ಅಂದಹಾಗೆ ಪಶ್ಚಿಮ ಬಂಗಾಳದ 294 ವಿಧಾನಸಭಾ ಕ್ಷೇತ್ರಗಳಿಗೆ 7 ಹಂತಗಳಲ್ಲಿ ಮನತದಾನ ನಡೆಯಲಿದೆ. ಏಪ್ರಿಲ್​ 29ಕ್ಕೆ ಮತದಾನ ಮುಗಿಯಲಿದ್ದು, ಮೇ 2ರಂದು ಫಲಿತಾಂಶ ಹೊರಬೀಳಲಿದೆ.(ಏಜೆನ್ಸೀಸ್​)
ಸದೃಢಗೊಂಡ ಸಂಬಂಧ; ಭಾರತ-ಬಾಂಗ್ಲಾದೇಶ ಹಲವು ಒಪ್ಪಂದ…

ಭಾರತಕ್ಕೆ ಆಂಗ್ಲರ ಎದುರು ಹ್ಯಾಟ್ರಿಕ್ ಸರಣಿ ಗೆಲುವು, ಅಂತಿಮ ಏಕದಿನದಲ್ಲಿ ಕೊಹ್ಲಿ ಪಡೆ ವಿಕ್ರಮ

ನಾಳೆಯಿಂದ ರಾಜ್ಯದಲ್ಲಿ ಮಳೆ; ಹವಾಮಾನ ಇಲಾಖೆ ಮೂನ್ಸೂಚನೆ..

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:2 × 1 =
Remember me
