ಪ್ರಯಾಗರಾಜ್​:ಗ್ರಾಮಾಂತರ ಮಂಡಿ ಮಾರುಕಟ್ಟೆಯಲ್ಲಿ ನೆಲದ ಮೇಲೆ ಇಡಲಾಗಿದ್ದ ತರಕಾರಿಗಳ ಮೇಲೆ ಜೀಪ್​ ಹರಿಸಿ ಪೊಲೀಸರು ದರ್ಪ ಮೆರೆದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆದ ಬೆನ್ನಲ್ಲೇ ಉತ್ತರ ಪದೇಶದ ಪ್ರಯಾಗ್​ರಾಜ್ ಜಿಲ್ಲೆಯ​ ಸಬ್​ ಇನ್ಸ್​ಪೆಕ್ಟರ್​ರನ್ನು ಅಮಾನತು ಮಾಡಿ, ಜಿಲ್ಲೆಯಿಂದಲೇ ವರ್ಗಾವಣೆ ಮಾಡಲಾಗಿದೆ.
ಘಟನೆ ನಿನ್ನೆ (ಶುಕ್ರವಾರ) ಮಧ್ಯಾಹ್ನ ನಡೆದಿದ್ದು, ಇದೊಂದು ಶೋಚನೀಯ ಘಟನೆ ಎಂದಿರುವ ಪ್ರಯಾಗ್​ರಾಜ್​ ಪೊಲೀಸ್​ ಮುಖ್ಯಸ್ಥ ಸತ್ಯನಾಥ್​ ಅನಿರುದ್ಧ ಪಂಕಜ್, ಅಮಾನತು ಆದೇಶ ಹೊರಡಿಸಿದ್ದಾರೆ.​
ಎರಡು ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ. ಜಿಲ್ಲೆಯ ಘೂರ್​ಪುರ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೊದಲನೇ ವಿಡಿಯೋದಲ್ಲಿ ವೇಗವಾಗಿ ಬರುವ ಪೊಲೀಸ್​ ಜೀಪ್​ ನೆಲದ ಮೇಲಿನ ತರಕಾರಿ ಹಾಗೂ ಹಣ್ಣುಗಳ ಮೇಲೆ ಹರಿಸುತ್ತಾರೆ. ಮತ್ತೊಂದು ವಿಡಿಯೋದಲ್ಲಿ ಜೀಪ್​ ಮತ್ತೆ ರಿವರ್ಸ್​ ಬಂದು ತರಕಾರಿಗಳ ಮೇಲೆ ಮತ್ತೊಮ್ಮೆ ಹರಿಯುತ್ತದೆ. ಅಪಾಯಕಾರಿ ಚಾಲನೆಯಲ್ಲಿ ಬರುತ್ತಿದ್ದ ಪೊಲೀಸ್​ ವಾಹನದಿಂದ ಬಚಾವ್​ ಆಗಲು ಜನರು ಅತ್ತಿಂದಿತ್ತ ಓಡಾಡುತ್ತಿರುವುದು ವಿಡಿಯೋದಲ್ಲಿದೆ.ಇದನ್ನೂ ಓದಿ:ಕಾಲೇಜುಗಳ ಪುನರಾರಂಭ ಯಾವಾಗ?: ವಿದ್ಯಾರ್ಥಿಗಳ ಗೊಂದಲಕ್ಕೆ ಸಲಹಾ ಸಮಿತಿ ಅಧ್ಯಕ್ಷರ ಪರಿಹಾರ
ಪೊಲೀಸರು ಆ ರೀತಿ ನಡೆದುಕೊಳ್ಳಲು ಕಾರಣ ಏನೆಂಬುದು ತಿಳಿದುಬಂದಿಲ್ಲ. ಆದರೆ, ಜನರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹೇಳಿದರೂ ಅದನ್ನು ಪಾಲಿಸದಿದ್ದಕ್ಕೆ ಹೀಗೆ ಮಾಡಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಏನೇ ಆದರೂ ಜನರ ಹೊಟ್ಟೆ ಮೇಲೆ ಹೊಡೆಯುವುದು ತಪ್ಪಲ್ಲವೇ ಎಂದು ಪೊಲೀಸರ ಕ್ರಮವನ್ನು ನೆಟ್ಟಿಗರು ಪ್ರಶ್ನಿಸಿದ್ದಾರೆ.
ಕಳೆದ ತಿಂಗಳು ಮೀರತ್​ನಲ್ಲೂ ಸಹ ಇಂಥದ್ದೆ ಘಟನೆ ನಡೆದಿತ್ತು. ಪೊಲೀಸ್​ ಸಿಬ್ಬಂದಿ ಮೀರತ್​ನಲ್ಲಿನ ತರಕಾರಿ ಅಂಗಡಿಯನ್ನು ಕೆಡವಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್​ ಆಗಿ, ತನಿಖೆಗೂ ಆದೇಶಿಸಲಾಗಿತ್ತು.(ಏಜೆನ್ಸೀಸ್​)ಇದನ್ನೂ ಓದಿ:ಮುತ್ತಪ್ಪ ರೈ ಆಸ್ತಿಯಲ್ಲಿ 2ನೇ ಪತ್ನಿಗೆ ಏನೇನು ಸಿಕ್ತು? ಆರಂಭವಾಗಲಿದೆಯಾ ಆಸ್ತಿ ವಿವಾದ?
ವಿಶ್ವಸಂಸ್ಥೆಯ ಬಡವರ ಸದ್ಭಾವನಾ ರಾಯಭಾರಿಯಾದ 13ರ ಬಾಲಕಿ: ಈಕೆಯ ಸಹೃದಯ ಜಗತ್ತಿಗೆ ಸ್ಪೂರ್ತಿ!

Sign in to your account
Please enter an answer in digits:eighteen − 1 =
Remember me
