ತಿರುಪತಿ:ಪತಿಯೇ ಹೆಂಡತಿಯನ್ನು ಕೊಂದು, ಆಕೆಯ ದೇಹವನ್ನು ಸುಟ್ಟು ಸೂಟ್​ಕೇಸ್​ನಲ್ಲಿ ತುಂಬಿ ಆಸ್ಪತ್ರೆಯ ಬಳಿ ಎಸೆದು ಹೋಗಿರುವ ಘಟನೆ ಆಂಧ್ರಪ್ರದೇಶದ ತಿರುಪತಿಯಲ್ಲಿ ನಡೆದಿದೆ.
ಶ್ರೀಕಾಂತ್ ರೆಡ್ಡಿ ಹಾಗೂ ಭುವನೇಶ್ವರಿ (27) ದಂಪತಿಗೆ ಒಂದೂವರೆ ವರ್ಷದ ಮಗಳಿದ್ದಾಳೆ. ಖಾಸಗಿ ಸಂಸ್ಥೆಯೊಂದರಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದ ಭುವನೇಶ್ವರಿ ಕಳೆದ ಕೆಲ ತಿಂಗಳಿನಿಂದ ಮನೆಯಿಂದಲೇ ಕೆಲಸ ಮಾಡುತ್ತಿದ್ದರು. ಶ್ರೀಕಾಂತ್​ ನಿರುದ್ಯೋಗಿಯಾಗಿದ್ದ ಕಾರಣ ಆತನೂ ಮನೆಯಲ್ಲೇ ಇರುತ್ತಿದ್ದ. ಈ ಮಧ್ಯೆ ಭುವನೇಶ್ವರಿಗೆ ಕರೊನಾ ಬಂದು ಆಕೆ ಸಾವನ್ನಪ್ಪಿದ್ದಾಗಿ ಶ್ರೀಕಾಂತ್ ಭುವನೇಶ್ವರಿ ಮನೆಗೆ ತಿಳಿಸಿದ್ದಾನೆ. ಪೊಲೀಸರೇ ಆಕೆಯ ದೇಹದ ಅಂತ್ಯಸಂಸ್ಕಾರ ಮಾಡಿದ್ದಾರೆ ಎಂದೂ ಹೇಳಿದ್ದಾನೆ.
ಅಳಿಯನ ಮಾತಿನ ಬಗ್ಗೆ ಅನುಮಾನ ಬಂದ ಹಿನ್ನೆಲೆಯಲ್ಲಿ ಭುವನೇಶ್ವರಿ ತಂದೆ ತಾಯಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಆಗ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಎಸ್​ವಿಆರ್​ಆರ್​ ಸರ್ಕಾರಿ ಆಸ್ಪತ್ರೆ ಬಳಿ ಸೂಟ್​ಕೇಸ್​ ಒಂದರಲ್ಲಿ ಅರ್ಧ ಬೆಂದಿದ್ದ ಮಹಿಳೆಯ ಮೃತ ದೇಹ ಸಿಕ್ಕಿದೆ. ಅದನ್ನು ಭುವನೇಶ್ವರಿ ತಂದೆ ತಾಯಿಗೆ ತೋರಿಸಿದಾಗ ಅದು ಅವರ ಮಗಳೇ ಎಂದು ಅವರು ಗುರುತಿಸಿದ್ದಾರೆ. ನಂತರ ಶ್ರೀಕಾಂತ್ ಮೇಲೆ ಅನುಮಾನ ಹೆಚ್ಚಾಗಿ ಆತನ ಬಗ್ಗೆ ವಿಚಾರಣೆ ನಡೆಸಿದಾಗ ಆತನೇ ಹೆಂಡತಿಯನ್ನು ಕೊಂದಿರುವ ವಿಚಾರ ಹೊರಬಿದ್ದಿದೆ. ತಾವಿದ್ದ ಫ್ಲಾಟ್​ನಲ್ಲಿ ಶ್ರೀಕಾಂತ್ ದೊಡ್ಡದೊಂದು ಸೂಟ್​ಕೇಸ್​ ಅನ್ನು ಎಳೆದು ತರುತ್ತಿರುವ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅದೇ ಸೂಟ್​ಕೇಸ್​ನಲ್ಲಿ ಭುವನೇಶ್ವರಿ ದೇಹ ಸಿಕ್ಕಿದ್ದಾಗಿಯೂ ಹೇಳಲಾಗಿದೆ. ಇದೀಗ ಆರೋಪಿ ನಾಪತ್ತೆಯಾಗಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. (ಏಜೆನ್ಸೀಸ್)
ಮೂರನೇ ಅಲೆ ತಡೆಯಲೆಂದು 100 ಕೋಟಿ ರೂ. ಮಂಜೂರು ಮಾಡಿದ ತಮಿಳುನಾಡು ಮುಖ್ಯಮಂತ್ರಿ
ಸತ್ತ ಬಾಯ್​ಫ್ರೆಂಡ್ ದೇಹದ ವೀರ್ಯಾಣು ಬಳಸಿ ಗರ್ಭಿಣಿ ಆದ ಯುವತಿ! ಇನ್​ಸ್ಟಾಗ್ರಾಂನಲ್ಲಿ ಫೋಟೋ ಶೇರ್​ ಮಾಡಿಕೊಂಡ ಪ್ರೇಮಿ
ಹೆರಿಗೆಯಾದ ಅಕ್ಕನನ್ನು ನೋಡಲು ಹೋದ ತಂಗಿಯನ್ನೇ ರೇಪ್ ಮಾಡಿದ ಭಾವ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 6 =
Remember me
