ನವದೆಹಲಿ:ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಡೀಪ್​ಫೇಕ್​ ವಿಡಿಯೋ ಮತ್ತು ಫೋಟೋಗಳು ಹರಿದಾಡುತ್ತಿದ್ದು, ಇದರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಜಾಲತಾಣ ವೇದಿಕೆಗಳಿಗೆ ಖಡಕ್​ ಎಚ್ಚರಿಕೆ ನೀಡಿರುವ ಕೇಂದ್ರ ಸಚಿವ ರಾಜೀವ್​ ಚಂದ್ರಶೇಖರ್​, 7 ದಿನಗಳ ಗಡುವು ನೀಡಿದ್ದು, ಇಂತಹ ಕಂಟೆಂಟ್​ಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಲು ಶೀಘ್ರದಲ್ಲೇ ಸರ್ಕಾರ ಅಧಿಕಾರಿಯೊಬ್ಬರನ್ನು ನೇಮಿಸಲಿದೆ ಎಂದು ತಿಳಿಸಿದ್ದಾರೆ.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ವೆಬ್​ಸೈಟ್​ ಒಂದನ್ನು ಅಭಿವೃದ್ಧಿಪಡಿಸಲಿದ್ದು, ಅದರಲ್ಲಿ ಬಳಕೆದಾರರು ಐಟಿ ನಿಯಮ ಉಲ್ಲಂಘಿಸುವ ಸಾಮಾಜಿಕ ಜಾಲತಾಣ ವೇದಿಕೆಗಳ ವಿರುದ್ಧ ದೂರು ನೀಡಬಹುದು. ಐಟಿ ನಿಯಮ ಉಲ್ಲಂಘನೆಯ ಕುರಿತಾದ ಮಾಹಿತಿ ಮತ್ತು ಎಫ್‌ಐಆರ್ ದಾಖಲಿಸುವಲ್ಲಿ ಬಳಕೆದಾರರಿಗೆ ಸಚಿವಾಲಯದ ವೆಬ್​ಸೈಟ್​ ನೆರವಾಗಲಿದೆ ಎಂದು ಕೇಂದ್ರ ಕೌಶಲಾಭಿವೃದ್ಧಿ ಹಾಗು ಉದ್ಯಮಶೀಲತೆ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್‌ ಹೇಳಿದರು.
ಮಧ್ಯವರ್ತಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು. ಅಲ್ಲದೆ, ಕಂಟೆಂಟ್ ಎಲ್ಲಿಂದ ಪೋಸ್ಟ್​ ಮಾಡಲಾಗಿದೆ ಎಂಬ ವಿವರಗಳನ್ನು ಬಹಿರಂಗಪಡಿಸಿದರೆ ಅವರ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದು ಎಂದು ಸಚಿವರು ತಿಳಿಸಿದರು. ಇದೇ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣ ವೇದಿಕೆಗಳಿಗೆ 7 ದಿನಗಳ ಗಡುವು ನೀಡಿರುವ ಸಚಿವರು ಅಷ್ಟರೊಳಗೆ ಐಟಿ ನಿಯಮಗಳಿಗೆ ಹೊಂದಾಣಿಕೆಯಾಗುವಂತೆ ತಮ್ಮ ನಿಯಮಗಳನ್ನು ಬದಲಿಸುವಂತೆ ಖಡಕ್​ ಸೂಚನೆ ನೀಡಿದ್ದಾರೆ. ಇಂದಿನಿಂದಲೇ ಐಟಿ ನಿಯಮಗಳ ಉಲ್ಲಂಘನೆಗೆ ಶೂನ್ಯ ಸಹಿಷ್ಣುತೆ ಇರಲಿದೆ ಎಂದರು.
ಕಳೆದ ವಾರ ಪ್ರಧಾನಿ ಮೋದಿ ಅವರು ಸ್ವತಃ ಡೀಪ್​ಫೇಕ್​ ವಿಡಿಯೋಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಇದೊಂದು ದೊಡ್ಡ ಕಳವಳ ಎಂದಿದ್ದರು. ಕೃತಕ ಬುದ್ಧಿಮತ್ತೆಯ ಸಮಯದಲ್ಲಿ, ತಂತ್ರಜ್ಞಾನವನ್ನು ಜವಾಬ್ದಾರಿಯುತವಾಗಿ ಬಳಸುವುದು ಮುಖ್ಯವಾಗಿದೆ ಎಂದು ಪ್ರಧಾನಿ ಮೋದಿ ಎಚ್ಚರಿಸಿದರು.
ಏನಿದು ಡೀಪ್​ಫೇಕ್​?:ಒಬ್ಬ ವ್ಯಕ್ತಿಯ ಹೋಲಿಕೆಯನ್ನು ಮನವರಿಕೆಯಾಗುವ ರೀತಿಯಲ್ಲಿ ಇನ್ನೊಬ್ಬರಿಗೆ ಬದಲಾಯಿಸುವುದು. ಒಬ್ಬ ವ್ಯಕ್ತಿಯ ಫೋಟೋ, ವಿಡಿಯೋ, ಧ್ವನಿಯನ್ನು ಇನ್ನೊಬ್ಬರ ವ್ಯಕ್ತಿಯೊಂದಿಗೆ ಸುಲಭವಾಗಿ ಗೊತ್ತಾಗದ ರೀತಿಯಲ್ಲಿ ಜೋಡಿಸಿ ನಕಲು ಸೃಷ್ಟಿಸುವುದು. ಡೀಪ್‌ಫೇಕ್‌ಗಳು ಆಳವಾದ ಉತ್ಪಾದಕ ವಿಧಾನಗಳ ಮೂಲಕ ಮುಖದ ನೋಟವನ್ನು ಕುಶಲತೆಯಿಂದ ನಿರ್ವಹಿಸುತ್ತವೆ. ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್​ ಇಂಟಲಿಜೆನ್ಸ್) ಮೂಲಕ ದೃಶ್ಯ ಮತ್ತು ಆಡಿಯೋ ವಿಷಯ ತಿರುಚಲಾಗುತ್ತದೆ. ಡೀಪ್‌ಫೇಕ್‌ಗಳಿಂದ ಉಂಟಾಗುವ ದೊಡ್ಡ ಅಪಾಯವೆಂದರೆ ಸುಳ್ಳು ಮಾಹಿತಿ ಹರಡುವ ಸಾಮರ್ಥ್ಯ. ಉದಾಹರಣೆಗೆ, 2022ರಲ್ಲಿ ಯೂಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಅವರು ತಮ್ಮ ಸೇನೆಗೆ ಶರಣಾಗುವಂತೆ ಹೇಳುವ ಡೀಪ್‌ಫೇಕ್ ವಿಡಿಯೋವನ್ನು ಬಿಡುಗಡೆ ಮಾಡಲಾಗಿತ್ತು.
3 ವರ್ಷ ಜೈಲು 1 ಲಕ್ಷ ರೂ. ದಂಡರಶ್ಮಿಕಾ ವಿಡಿಯೋ ವೈರಲ್​ ಆದ ಬೆನ್ನಲ್ಲೇ ಎಲೆಕ್ಟ್ರಾನಿಕ್ಸ್​ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಸಾಮಾಜಿಕ ಜಾಲತಾಣ ವೇದಿಕೆಗಳಿಗೆ ಕೆಲವೊಂದಿಷ್ಟು ಸಲಹೆಗಳನ್ನು ನೀಡಿದ್ದು, ಡೀಪ್‌ಫೇಕ್‌ಗಳ ಮೇಲಿನ ಕಾನೂನು ನಿಬಂಧನೆಗಳು, ಅವುಗಳ ರಚನೆ ಮತ್ತು ಪ್ರಸಾರಗಳ ಮೇಲಿನ ದಂಡಗಳನ್ನು ಸಚಿವಾಲಯ ಒತ್ತಿಹೇಳಿದೆ. ಮಾಹಿತಿ ತಂತ್ರಜ್ಞಾನ ಕಾಯಿದೆ 2000, ಸೆಕ್ಷನ್​ 66ಡಿ ಅನ್ನು ಸರ್ಕಾರ ಉಲ್ಲೇಖಿಸಿದೆ. ಕಂಪ್ಯೂಟರ್ ಸಂಪನ್ಮೂಲವನ್ನು ಬಳಸಿಕೊಂಡು ವ್ಯಕ್ತಿಗತವಾಗಿ ವಂಚನೆ ಮಾಡಿದರೆ ಅಂಥವರಿಗೆ ವಿಧಿಸುವ ಶಿಕ್ಷೆಯನ್ನು ಈ ಸೆಕ್ಷನ್​ ಒಳಗೊಂಡಿದೆ. ಇದರ ಅರ್ಥ ಯಾವುದೇ ಸಂವಹನ ಸಾಧನ ಅಥವಾ ಕಂಪ್ಯೂಟರ್ ಸಂಪನ್ಮೂಲಗಳನ್ನು ಬಳಸಿಕೊಂಡು ವ್ಯಕ್ತಿಗತಗೊಳಿಸುವ ಮೂಲಕ ವಂಚನೆ ಮಾಡಿದವರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿಗಳವರೆಗೆ ದಂಡವನ್ನು ವಿಧಿಸಬಹುದಾಗಿದೆ ಎಂದು ಎಚ್ಚರಿಸಿದೆ.(ಏಜೆನ್ಸೀಸ್​)
ಡೀಪ್‌ಫೇಕ್ ಕಡಿವಾಣಕ್ಕೆ ಶೀಘ್ರವೇ ನಿಯಮಾವಳಿ

ಗೋಣಿ ಚೀಲಾ..ಹರಕು ಬಟ್ಟೆ ಯಾವುದನ್ನು ಬಿಟ್ಟಿಲ್ಲ! ಇದೆಂಥಾ ಫ್ಯಾಶನ್​ ಗುರು ಎಂದ್ರು ನೆಟ್ಟಿಗರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − one =
Remember me
