ಮುಂಬೈ:ರಿಲಾಯನ್ಸ್ ಫೌಂಡೇಷನ್ ಅಧ್ಯಕ್ಷೆ ನೀತಾ ಅಂಬಾನಿ ಅವರು ಮಹಿಳಾ ಸಬಲೀಕರಣಕ್ಕಾಗಿ ಜಾರಿಗೆ ತಂದಿರುವ ಹರ್​ ಸರ್ಕಲ್ ಎಂಬ ಡಿಜಿಟಲ್​ ವೇದಿಕೆಯು ದೇಶದ 75ನೇ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವ ಅಂಗವಾಗಿ “ಯಾವುದು ಭಾರತೀಯ ಮಹಿಳೆಯುರನ್ನು ಸ್ವತಂತ್ರವಾಗಿಸುತ್ತದೆ” ಎಂಬ ಪರಿಕಲ್ಪನೆಯೊಂದಿಗೆ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ. ಈ ವಿಡಿಯೋದಲ್ಲಿ 6 ರಿಂದ 99 ವರ್ಷದವರೆಗಿನ ಮಹಿಳೆಯರು ಸ್ವಾತಂತ್ರ್ಯದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ತನ್ನ ಚಲನಾವಲನವನ್ನು ಮೊಟುಕುಗೊಳಿಸುವುದು, ತನ್ನ ಸುತ್ತ ಒಂದು ಚೌಕಟ್ಟು ನಿರ್ಮಿಸುವುದು, ಸಾಮಾಜಿಕ ನಿಯಮಗಳು ಹಾಗೂ ಕಡಿಮೆ ಅವಕಾಶಗಳಿಂದ ಮಹಿಳಾ ದೃಷ್ಟಿಯಲ್ಲಿ ಸ್ವಾತಂತ್ರ್ಯವು ಅಸ್ಪಷ್ಟ ಆಕಾರವನ್ನು ಪಡೆದುಕೊಂಡಿದೆ. ಹರ್​ ಸರ್ಕಲ್​ ಸಂದರ್ಶಿಸಿರುವ ಪ್ರತಿ ಮಹಿಳೆಯ ದೃಷ್ಟಿಯಲ್ಲಿ ಸ್ವಾತಂತ್ರ್ಯವು ಒಂದು ಪರಿಕಲ್ಪನೆಯಾಗಿ, ವಿಭಿನ್ನ ವ್ಯಾಖ್ಯಾನಗಳನ್ನು ಹೊಂದಿದೆ.
ಇದೊಂದು ವಿಶೇಷ ಪ್ರಯತ್ನವಾಗಿದ್ದು, ಆರು ವರ್ಷದ ಬಾಲಕಿಯಿಂದಿಡಿದು 99 ವರ್ಷದ ಹಿರಿಯ ಮಹಿಳೆಯವರೆಗೂ ಹರ್​ ಸರ್ಕಲ್​ ಸಂದರ್ಶಿಸಿದೆ. ವಿಭಿನ್ನ ವಲಯ, ವಿವಿಧ ಸಮುದಾಯ ಹಾಗೂ ಜೀವನದ ವಿವಿಧ ಹಂತದ ಮಹಿಳೆಯರನ್ನು ಹರ್​ ಸರ್ಕಲ್​ ಮಾತನಾಡಿಸಿದೆ. ಒಂದು ಹೆಣ್ಣು ಮಗುವಿಗೆ, ಆಟವಾಡುವುದು ಮತ್ತು ಅವಳ ಕೈಗಳನ್ನು ಕೊಳಕು ಮಾಡಿಕೊಳ್ಳುವುದೇ ಸ್ವಾತಂತ್ರ್ಯದ ಅಂತಿಮ ರೂಪವಾಗಿದೆ. ಒಬ್ಬ ಯುವತಿಗೆ, ಆಕೆಯ ಆರ್ಥಿಕ ಸ್ವಾತಂತ್ರ್ಯವು ತನ್ನನ್ನು ತಾನು ಸ್ವತಂತ್ರ ವ್ಯಕ್ತಿ ಎಂದು ಕರೆಯುವ ತಿರುಳನ್ನು ರೂಪಿಸಿದೆ. ವಯಸ್ಸಾದ ಮಹಿಳೆಗೆ, ತನ್ನ ಚಲಿಸುವ ಸಾಮರ್ಥ್ಯವೇ ಅವಳ ರೆಕ್ಕೆಗಳಾಗಿದೆ ಎಂಬ ಅಭಿಪ್ರಾಯಗಳು ಬಂದಿರುವುದಾಗಿ ಹರ್​ ಸರ್ಕಲ್​ ಹೇಳಿದೆ.
ಪ್ರತಿಯೊಬ್ಬರ ಸ್ವಾತಂತ್ರ್ಯದ ಕಲ್ಪನೆಯು ವೈವಿಧ್ಯಮಯ ವ್ಯಾಖ್ಯಾನಗಳನ್ನು ಅನುಸರಿಸಿದೆ. ತನ್ನ ಸ್ವಂತ ವ್ಯವಹಾರವನ್ನು ನಡೆಸುವುದು, ತನ್ನ ಸ್ವಂತ ಆಯ್ಕೆಗಳ ಮೇಲೆ ನಿಲ್ಲುವ ಜವಾಬ್ದಾರಿಯನ್ನು ತೆಗೆದುಕೊಳ್ಳುವುದು, ಏಕಾಂಗಿಯಾಗಿ ಪ್ರಯಾಣಿಸುವುದು, ತನ್ನದೇ ತಪ್ಪುಗಳನ್ನು ಮಾಡುವ ಹಕ್ಕನ್ನು ಹೊಂದಿರುವುದು, ಕೆಲಸ ಮಾಡುವ ಸಾಮರ್ಥ್ಯ, ವಯಸ್ಸಾದ ಬಳಿಕ ಪಿಂಚಣಿ ಗಳಿಸುವುದು, ತೆಗೆದುಕೊಳ್ಳುವುದು, ಯಾರನ್ನಾದರೂ ನೋಡಿಕೊಳ್ಳುವುದು ಮತ್ತು ಜವಾಬ್ದಾರಿಯ ಪ್ರಜ್ಞೆಯನ್ನು ಅನುಭವಿಸುವುದು, ಆಕೆಯ ಹೆತ್ತವರ ಸ್ಥಳದಲ್ಲಿ ಇರುವುದು ಮತ್ತು ಅವಳು ಇಷ್ಟಪಡುವುದನ್ನು ಮಾಡುವುದು, ದ್ವಿಚಕ್ರ ವಾಹನದಲ್ಲಿ ಸವಾರಿ ಮಾಡುವುದು, ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಮಾತನಾಡುವ ಸ್ವಾತಂತ್ರ್ಯ, ಸ್ನೇಹಿತರೊಂದಿಗೆ ಸುತ್ತಾಡುವುದು, ಯಾರನ್ನೂ ಅವಲಂಬಿಸದೆ, ತನ್ನ ಸ್ವಂತ ಜೀವನ ನಿರ್ಧಾರಗಳನ್ನು ತೆಗೆದುಕೊಳ್ಳುವುದು, ದೈಹಿಕ ಮತ್ತು ಮಾನಸಿಕ ನ್ಯೂನತೆ ಹೊಂದಿರುವ ಮಕ್ಕಳಿಗೆ ಬೋಧನೆ ಮತ್ತು ಅಧಿಕಾರ ನೀಡುವುದು, ಹಾಡುವ ಅವಕಾಶ ಮತ್ತು ಅಂತಿಮವಾಗಿ ತೀರ್ಪುಗಳನ್ನು ನಿರ್ಲಕ್ಷಿಸುವ ಶಕ್ತಿಯೇ ಅವರ ಸ್ವಾತಂತ್ರ್ಯದ ಪರಿಕಲ್ಪನೆಯಾಗಿದೆ.
ಹರ್​​ ಸರ್ಕಲ್​ ವಿಡಿಯೋ ಮಾಡಿದ್ದೇಕೆ?ಭಾರತೀಯ ಮಹಿಳೆಯರು, ಕ್ರೀಡೆ, ವ್ಯಾಪಾರ, ಸಂಸ್ಕೃತಿ ಮತ್ತು ಮನರಂಜನೆಯ ಜಾಗದಲ್ಲಿ ಜಾಗತಿಕ ಮಟ್ಟದಲ್ಲಿ ದೊಡ್ಡ ಪ್ರಗತಿ ಸಾಧಿಸಿದ್ದಾರೆ. “ಹರ್​ ಸರ್ಕಲ್​” ಡಿಜಿಟಲ್​ ವೇದಿಕೆ ಕೇವಲ ಯಶಸ್ಸಿನ ಕಥೆಗಳನ್ನು ಮಾತ್ರವಲ್ಲದೆ, ಪ್ರತಿಯೊಬ್ಬ ಭಾರತೀಯ ಮಹಿಳೆಯನ್ನೂ ಪರಿಗಣಿಸುತ್ತದೆ ಎಂದು ನಂಬುತ್ತದೆ. ಡಿಜಿಟಲ್ ಗಮ್ಯಸ್ಥಾನವಾಗಿ, ಹರ್​​ ಸರ್ಕಲ್​, ಮಹಿಳೆಯರಿಗೆ ತಮ್ಮ ಧ್ವನಿ ಮತ್ತು ಅಭಿಪ್ರಾಯಗಳನ್ನು ಕೇಳಲು ವೇದಿಕೆಯನ್ನು ಒದಗಿಸುತ್ತದೆ. ನಿಜವಾಗಿಯೂ ಸ್ವತಂತ್ರವಾಗಿರಲು, ದೇಶದ ಎಲ್ಲ ವ್ಯಕ್ತಿಗಳು ಅಭಿವ್ಯಕ್ತಿ ಸ್ವಾತಂತ್ರ್ಯದಿಂದ ಆರಂಭವಾಗುವ ಸ್ವಾತಂತ್ರ್ಯದ ಮೂಲಭೂತ ಹಕ್ಕುಗಳನ್ನು ಹೊಂದಿರಬೇಕು ಎಂಬುದೇ ಹರ್​ ಸರ್ಕಲ್​ ಆಶಯವಾಗಿದೆ. ಹೀಗಾಗಿ ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ನಾವು ಕೆಲವು ಮಹಿಳೆಯರನ್ನು ಅವರ ಸ್ವಾತಂತ್ರ್ಯದ ಕಲ್ಪನೆ ಏನು ಎಂದು ಕೇಳಿದೆವು, ಇದರಿಂದ ಸಮಾನತೆ ಮತ್ತು ಲಿಂಗ ಸಬಲೀಕರಣದ ಕಡೆಗೆ ನಿಜವಾಗಿಯೂ ಕೆಲಸ ಮಾಡುವ ಸಮಯವಾಗಿದೆ ಎಂದು ಹರ್​ ಸರ್ಕಲ್​ ಹೇಳಿದೆ.
ಏನಿದು ಹರ್​ ಸರ್ಕಲ್​?ಅಂತಾರಾಷ್ಟ್ರೀಯ ಮಹಿಳಾ ದಿನ ಪ್ರಯುಕ್ತ ಮಹಿಳೆಯರ ಸಬಲೀಕರಣಕ್ಕಾಗಿ ಅವಳ ಸರ್ಕಲ್(ಹರ್ ಸರ್ಕಲ್) ಎಂಬ ವಿನೂತನ ಯೋಜನೆಯನ್ನು ರಿಲಾಯನ್ಸ್ ಫೌಂಡೇಶನ್ ಅಧ್ಯಕ್ಷೆ ನೀತಾ ಮುಕೇಶ್ ಅಂಬಾನಿ ಲೋಕಾರ್ಪಣೆಗೊಳಿಸಿದ್ದಾರೆ. ಈ ಮೂಲಕ ಮಹಿಳೆಯರಿಗಾಗಿಯೇ ಡಿಜಿಟಲ್ ವೇದಿಕೆ ತೆರೆದಿಟ್ಟಿದ್ದಾರೆ. ಡಿಜಿಟಲ್ ಕ್ರಾಂತಿಯ ಸಹಾಯದಿಂದ, ಮಹಿಳೆಯರಿಗೆ ಸುರಕ್ಷಿತ ತಾಣ ನೀಡುವುದು ಉದ್ದೇಶವಾಗಿದೆ. ಡಿಜಿಲಟ್ ವೇದಿಕೆಯ ಮೂಲಕ ಮಹಿಳೆಯರ ಸಬಲೀಕರಣ ಸಮನ್ವಯ, ಸಹಭಾಗಿತ್ವದ ಪಾಲ್ಗೊಳ್ಳುವಿಕೆಯನ್ನು ಸದೃಢಗೊಳಿಸುವ ಕಾರ್ಯಕ್ರಮ ಇದಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − ten =
Remember me
