ನವದೆಹಲಿ:ಇಂದು (ಡಿ.25) ಈ ವರ್ಷದ ಕೊನೆಯ ಹಾಗೂ 96ನೇ ಆವೃತ್ತಿಯ ಮನ್​ ಕೀ ಬಾತ್​ ಬಾನುಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, 2022ನೇ ವರ್ಷ ಅದ್ಭುತವಾಗಿತ್ತು ಎಂದರು. ಅಲ್ಲದೆ, ರಕ್ಷಣಾ, ಬಾಹ್ಯಾಕಾಶ, ಆರೋಗ್ಯ ಕ್ಷೇತ್ರದ ಭಾರತದ ಸಾಧನೆಯನ್ನು ಸ್ಮರಿಸಿದರು.
2022ನೇ ವರ್ಷವನ್ನು ಸ್ಮರಿಸಿದ ಪ್ರಧಾನಿ ಮೋದಿ, ಅಮೃತ ಕಾಲ ಪ್ರಾರಂಭವಾದಾಗ ಭಾರತವು ಸ್ವಾತಂತ್ರ್ಯದ 75 ವರ್ಷಗಳನ್ನು ಪೂರೈಸಿತು. ಭಾರತವು ವೇಗವಾಗಿ ಪ್ರಗತಿ ಸಾಧಿಸಿತು ಮತ್ತು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಮೊದಲ ಸ್ವದೇಶಿ ವಿಮಾನವಾಹಕ ನೌಕೆ INS ವಿಕ್ರಾಂತ್‌, ಕಾರ್ಯಾರಂಭದೊಂದಿಗೆ 2022ನೇ ವರ್ಷವು ‘ಆತ್ಮನಿರ್ಭರ್ ಭಾರತ್’ ವರ್ಷವಾಗಿದೆ. ಬಾಹ್ಯಾಕಾಶ, ಡ್ರೋನ್ ಮತ್ತು ರಕ್ಷಣಾ ವಲಯದಲ್ಲಿ ಭಾರತ ತನ್ನ ಶಕ್ತಿಯನ್ನು ತೋರಿಸಿದೆ. ಭಾರತವು 220 ಕೋಟಿ ಲಸಿಕೆಯ ಮೈಲಿಗಲ್ಲನ್ನು ಮುಟ್ಟಿದೆ ಮತ್ತು ಭಾರತೀಯ ರಫ್ತು 2022 ರಲ್ಲಿ 440 ಬಿಲಿಯನ್ ಡಾಲರ್​ ಅನ್ನು ದಾಟಿದೆ ಎನ್ನುವ ಮೂಲಕ ನಿರ್ಗಮಿತ 2022ನೇ ವರ್ಷವನ್ನು ಸ್ಮರಿಸಿದರು.
ಭಾರತದ ಆರೋಗ್ಯ ಕ್ಷೇತ್ರಕ್ಕೆ ಒತ್ತು ನೀಡಿ ಮಾತನಾಡಿದ ಪ್ರಧಾನಿ ಮೋದಿ, ಮುಂಬೈನ ಟಾಟಾ ಮೆಮೋರಿಯಲ್ ಸೆಂಟರ್‌ನ ಸಂಶೋಧನೆಯು ಸ್ತನ ಕ್ಯಾನ್ಸರ್ ರೋಗಿಗಳಿಗೆ ಯೋಗವು ಪರಿಣಾಮಕಾರಿಯಾಗಿದೆ ಎಂದು ಹೇಳಿದೆ. ನಿಯಮಿತವಾಗಿ ಯೋಗಾಭ್ಯಾಸ ಮಾಡುವುದರಿಂದ ರೋಗಿಗಳಲ್ಲಿ ರೋಗದ ಮರುಕಳಿಸುವಿಕೆಯು ಶೇಕಡಾ 15 ರಷ್ಟು ಕಡಿಮೆಯಾಗಿದೆ. ಕಳೆದ ಕೆಲವು ವರ್ಷಗಳಲ್ಲಿ, ನಾವು ಆರೋಗ್ಯ ಕ್ಷೇತ್ರದಲ್ಲಿ ವಿವಿಧ ಸವಾಲುಗಳನ್ನು ಎದುರಿಸಿದ್ದೇವೆ. ನಾವು ಭಾರತದಿಂದ ಸಿಡುಬು ಮತ್ತು ಪೋಲಿಯೊ ತರಹದ ರೋಗಗಳನ್ನು ನಿರ್ಮೂಲನೆ ಮಾಡಿದ್ದೇವೆ ಎಂದರು.
ಇಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಅವರನ್ನು ಸ್ಮರಿಸಿದ ಪ್ರಧಾಮಿ ಮೋದಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಶಿಕ್ಷಣ, ವಿದೇಶಾಂಗ ನೀತಿ ಮತ್ತು ಮೂಲಸೌಕರ್ಯ ಕ್ಷೇತ್ರ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು ಎಂದು ಗುಣಗಾನ ಮಾಡಿದರು.
ಇದೇ ಸಂದರ್ಭದಲ್ಲಿ ಸ್ವಚ್ಛ ಭಾರತ್ ಮಿಷನ್ ಕುರಿತು ಮಾತನಾಡಿದ ಮೋದಿ, ನಮಾಮಿ ಗಂಗೆ ಮಿಷನ್ ಸಹ ಜೀವವೈವಿಧ್ಯವನ್ನು ಸುಧಾರಿಸಲು ಸಹಾಯ ಮಾಡಿದೆ. ಸ್ವಚ್ಛ ಭಾರತ್ ಮಿಷನ್ ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲಿ ಭದ್ರವಾಗಿ ಬೇರೂರಿದೆ. ಸ್ವಚ್ಛತೆಯ ಪರಂಪರೆಯನ್ನು ಈಗ ಎಲ್ಲಾ ಭಾರತೀಯರು ಒಟ್ಟಿಗೆ ಒಯ್ಯುತ್ತಿದ್ದಾರೆ ಎಂದರು.
ಇಂದು ಕ್ರಿಸ್‌ಮಸ್ ಹಬ್ಬ ಹಿನ್ನೆಲೆಯಲ್ಲಿ ಶುಭಾಶಯಗಳನ್ನು ತಿಳಿಸಿದ ಪ್ರಧಾನಿ ಮೋದಿ, ಇದು ಲಾರ್ಡ್ ಜೀಸಸ್ ಕ್ರೈಸ್ಟ್ ಅವರ ಜೀವನ ಮತ್ತು ಬೋಧನೆಗಳನ್ನು ನೆನಪಿಸಿಕೊಳ್ಳುವ ಸಮಯ ಎಂದು ಹೇಳಿದರು.
ಪ್ರಪಂಚದ ಹಲವು ದೇಶಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ನಾವು ಜಾಗರೂಕರಾಗಿರಬೇಕು ಮತ್ತು ಮಾಸ್ಕ್​ಗಳನ್ನು ಧರಿಸಬೇಕು ಹಾಗೂ ಆಗಾಗ ನಮ್ಮ ಕೈಗಳನ್ನು ಶುಚಿಗೊಳಿಸಬೇಕು ಎಂದು ಪ್ರಧಾನಿ ಮೋದಿ ದೇಶದ ಜನರಿಗೆ ಸಲಹೆ ನೀಡಿದರು.(ಏಜೆನ್ಸೀಸ್​)
ಬಿಜೆಪಿ ಮೇಲಿನ ನಂಬಿಕೆ ಹುಸಿಯಾಗಿದೆ ಎನ್ನುತ್ತಲೇ ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ ಘೋಷಿಸಿದ ಜನಾರ್ದನ ರೆಡ್ಡಿ

ಬಿಚ್ಚಮ್ಮಳ ಮೇಕಪ್​ ಇಲ್ಲದ ಅವತಾರ ಕಂಡು ಬೆರಗಾದ ನೆಟ್ಟಿಗರು! ಪೂರ್ತಿ ಬಟ್ಟೆಯಲ್ಲಿ ಗುರುತಿಸೋದು ಕಷ್ಟವೆಂದ ನೆಟ್ಟಿಗ

ಹೊಸ ವರ್ಷಕ್ಕೆ ಹೊಸ ರೆಸಲ್ಯೂಷನ್​; ಇದನ್ನು ಪಾಲಿಸಿದ್ರೆ ಯಶಸ್ಸು ಖಚಿತ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − two =
Remember me
