ನವದೆಹಲಿ:ಕಿತ್ತಳೆ ಬಣ್ಣದ ವಂದೇ ಭಾರತ್​ ರೈಲುಗಳನ್ನು ಪ್ರಾರಂಭಿಸುವುದರ ಹಿಂದೆ ಯಾವುದೇ ರಾಜಕೀಯ ಇಲ್ಲ, ನೂರು ಪ್ರತಿಶತದಷ್ಟು ವೈಜ್ಞಾನಿಕ ಚಿಂತನೆ ಇದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್​ ಅವರು ತಿಳಿಸಿದರು.
ಇತ್ತೀಚೆಗೆ ಪತ್ರಕರ್ತರ ಜತೆ ನಡೆದ ಸಂವಾದದ ವೇಳೆ ಕಿತ್ತಳೆ ಬಣ್ಣದ ಹಿಂದೆ ರಾಜಕೀಯ ಇದೆ ಎಂಬ ಆರೋಪವನ್ನು ಅಲ್ಲಗೆಳೆದರು. ಮಾನವನ ಕಣ್ಣಿಗೆ ಹಳದಿ ಮತ್ತು ಕಿತ್ತಳೆ ಬಣ್ಣಗಳು ಹೆಚ್ಚು ಗೋಚರಿಸುತ್ತದೆ. ಯೂರೋಪ್​ನಲ್ಲಿ ಶೇ. 80ರಷ್ಟು ರೈಲುಗಳು ಕಿತ್ತಳೆ ಬಣ್ಣ ಅಥವಾ ಹಳದಿ ಮತ್ತು ಕಿತ್ತಳೆ ಬಣ್ಣದ ಸಂಯೋಜನೆಯನ್ನು ಒಳಗೊಂಡಿವೆ ಎಂದು ಅಶ್ವಿನಿ ವೈಷ್ಣವ್​ ಹೇಳಿದರು.
ಸಿಲ್ವರ್​ನಂತಹ ಇತರೆ ಅನೇಕ ಬಣ್ಣಗಳು ಹಳದಿ ಮತ್ತು ಕಿತ್ತಳೆ ಬಣ್ಣಗಳಂತೆ ಪ್ರಕಾಶಮಾನವಾಗಿವೆ ಆದರೆ, ಮಾನವನ ಕಣ್ಣಿಗೆ ಗೋಚರತೆಯ ದೃಷ್ಟಿಕೋನದಿಂದ ಕಿತ್ತಳೆ ಮತ್ತು ಹಳದಿ ಬಣ್ಣದ ಉತ್ತಮ ಎಂದು ಪರಿಗಣಿಸಲಾಗಿದೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಇಲ್ಲಿ ನೂರರಷ್ಟು ವೈಜ್ಞಾನಿಕ ಚಿಂತನೆ ಇದೆ ಎಂದು ಸ್ಪಷ್ಟನೆ ನೀಡಿದರು.
ಇದನ್ನೂ ಓದಿ:ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಸಾವಿನ ವದಂತಿಗೆ ವಿಡಿಯೋ ಮೂಲಕ ತೆರೆಎಳೆದ ದತ್ತುಪುತ್ರ​
ಇದೇ ಕಾರಣಕ್ಕೆ ವಿಮಾನಗಳು ಮತ್ತು ಹಡಗುಗಳಲ್ಲಿರುವ ಬ್ಲ್ಯಾಕ್​ ಬಾಕ್ಸ್​ಗಳ ಬಣ್ಣವೂ ಕಿತ್ತಳೆ ಬಣ್ಣದಲ್ಲಿರುತ್ತವೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಬಳಸುವ ರಕ್ಷಣಾ ದೋಣಿ ಮತ್ತು ಜೀವರಕ್ಷಣಾ ಜಾಕೆಟ್​ಗಳು ಕೂಡ ಕಿತ್ತಳೆ ಬಣ್ಣದಲ್ಲೇ ಇರುತ್ತವೆ ಎಂದು ಹೇಳಿದರು.
ಭಾರತೀಯ ರೈಲ್ವೆ ಇಲಾಖೆಯು ತನ್ನ ಮೊದಲ ಕಿತ್ತಳೆ-ಬೂದು ಬಣ್ಣದ ವಂದೇ ಭಾರತ್ ರೈಲನ್ನು ಸೆಪ್ಟೆಂಬರ್ 24ರಂದು ಕೇರಳದ ಕಾಸರಗೋಡು ಮತ್ತು ತಿರುವನಂತಪುರಂ ನಡುವೆ ಪ್ರಾರಂಭಿಸಿತು. ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 24 ರಂದು ವಿಡಿಯೋ ಕಾನ್ಫರೆನ್ಸ್‌ನಲ್ಲಿ ಚಾಲನೆ ನೀಡಿದ ಒಂಬತ್ತು ವಂದೇ ಭಾರತ್ ರೈಲುಗಳಲ್ಲಿ ಇದು ಕೂಡ ಒಂದಾಗಿದೆ.(ಏಜೆನ್ಸೀಸ್​)
ಸ್ವಯಂ ಘೋಷಿತ ಆಸ್ತಿ ತೆರಿಗೆಗೆ ಹೊಸ ರೂಪ!

ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಸಾವಿನ ವದಂತಿಗೆ ವಿಡಿಯೋ ಮೂಲಕ ತೆರೆಎಳೆದ ದತ್ತುಪುತ್ರ​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − six =
Remember me
