ನವದೆಹಲಿ :ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣದ ವಿಚಾರದಿಂದ ಹಿಡಿದು ಜೈಶ್ರೀರಾಮ್ ಘೋಷಣೆವರೆಗೆ ರಾಮ ಜಪ ಮಾಡುವ ಭಾರತೀಯ ಜನತಾ ಪಕ್ಷ(ಬಿಜೆಪಿ)ಕ್ಕೆ ಶ್ರೀರಾಮನ ಕೃಪಾಕಟಾಕ್ಷ ದೊರೆದಂತಿದೆ! ಏಕೆಂದರೆ ಜನಪ್ರಿಯ ರಾಮಾಯಣ ಧಾರಾವಾಹಿಯಲ್ಲಿ ಖುದ್ದು ಭಗವಾನ್ ಶ್ರೀರಾಮನ ಪಾತ್ರ ವಹಿಸಿದ ಖ್ಯಾತಿಯ ನಟ ಅರುಣ್ ಗೋವಿಲ್ ಇದೀಗ ಬಿಜೆಪಿ ಸೇರಿದ್ದಾರೆ.
ಚಿತ್ರನಟ ಮತ್ತು ನಿರ್ಮಾಪಕರಾಗಿರುವ ಅರುಣ್ ಗೋವಿಲ್, ಹಿಂದಿ, ಭೋಜಪುರಿ, ಬ್ರಜಭಾಷಾ, ಒಡಿಯಾ ಮತ್ತು ತೆಲುಗು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ರಮಾನಂದ ಸಾಗರ್​ ಅವರ ಹಿಂದಿ ಧಾರಾವಾಹಿ ರಾಮಾಯಣದಲ್ಲಿ ಶ್ರೀರಾಮನ ಪಾತ್ರ ನಿರ್ವಹಿಸಿ ಹೆಚ್ಚು ಜನಪ್ರಿಯತೆ ಗಳಿಸಿದ್ದಾರೆ. ಇದೇ ಮೊದಲ ಬಾರಿಗೆ ರಾಜಕೀಯ ಪ್ರವೇಶಿಸುತ್ತಿರುವ ಗೋವಿಲ್, ಬಿಜೆಪಿ ಕೈಹಿಡಿದಿದ್ದಾರೆ.
ಇದನ್ನೂ ಓದಿ:“ಬಡವರ ಸೇವೆ ಮಾಡಬೇಕೆನ್ನೋ ಸ್ವಾರ್ಥದಲ್ಲಿ ಬಿಜೆಪಿ ಸೇರಿರುವೆ” : ಮಿಥುನ್ ಚಕ್ರವರ್ತಿ
ಭಾರತದ ನಾಲ್ಕು ರಾಜ್ಯಗಳಲ್ಲಿ ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಸಂದರ್ಭದಲ್ಲಿ ಗೋವಿಲ್ ಅವರ ಸೇರ್ಪಡೆ ಬಿಜೆಪಿಯ ಸ್ಟಾರ್ ಫ್ಯಾಕ್ಟರ್​ಅನ್ನು ಹೆಚ್ಚಿಸಲಿದೆ. ಪಶ್ಚಿಮ ಬಂಗಾಳದ ಚುನಾವಣೆಯ ಪ್ರಚಾರದಲ್ಲಿ ಅರುಣ್​ ಗೋವಿಲ್ ಭರಪೂರ ತೊಡಗಲಿದ್ದು, ಸುಮಾರು 100 ಸಭೆಗಳಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.(ಏಜೆನ್ಸೀಸ್)

ನಿಯಮ ಪಾಲಿಸದ ಪ್ರಯಾಣಿಕರನ್ನು ಕೆಳಗಿಳಿಸಿದ ಏರ್ ಏಷಿಯಾ; ಮಾಸ್ಕ್ ಸರಿಯಾಗಿ ಧರಿಸದ 6 ಪ್ರಯಾಣಿಕರು ಭದ್ರತಾ ಪಡೆ ವಶಕ್ಕೆ
ಜಾತಕ ದೋಷ ನಿವಾರಿಸಲು 13 ವರ್ಷದ ವಿದ್ಯಾರ್ಥಿಯನ್ನು ‘ಮದುವೆ’ಯಾದ ಶಿಕ್ಷಕಿ !
ಹುಟ್ಟಿದ ಮಗುವಿನಲ್ಲಿ ಕರೊನಾ ಆ್ಯಂಟಿಬಾಡೀಸ್ ಪತ್ತೆ !


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + nine =
Remember me
