ಬೆಂಗಳೂರು:ಸಹೋದರ, ಸಹೋದರಿಯ ಬಾಂಧವ್ಯವನ್ನು ಬೆಸೆಯುವ ಹಬ್ಬ ರಕ್ಷಾಬಂಧನವಾಗಿದೆ. ಪ್ರೀತಿ, ರಕ್ಷಣೆ, ಬದ್ಧತೆಯನ್ನು ಪ್ರತಿಬಿಂಬಿಸುವ ಹಬ್ಬ ಇದಾಗಿದೆ. ಸಹೋದರ ಮತ್ತು ಸಹೋದರಿಯರ ನಡುವಿನ ಪ್ರೀತಿಯನ್ನು ಹೆಚ್ಚಿಸಲು ಈ ಹಬ್ಬವನ್ನು ಆಚರಿಸಲಾಗುತ್ತದೆ.
ಸಹೋದರರ ಯೋಗಕ್ಷೇಮ ಮತ್ತು ರಕ್ಷಣೆಗಾಗಿ ಸಹೋದರಿಯರು ಕಟ್ಟುವ ರಕ್ಷಾ ಬಂಧನವಾಗಿದೆ. ಈ ರಕ್ಷಾ ಬಂಧನದಂದು ಒಡಹುಟ್ಟಿದವರು ರಾಖಿ ಕಟ್ಟಿದರೆ, ಅವರಿಗೆ ಪ್ರತಿಯಾಗಿ ಉಡುಗೊರೆಗಳನ್ನು ನೀಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆದರೆ ಹೀಗೆ ಗಿಫ್ಟ್​, ಹಣವನ್ನು ನಿಮ್ಮ ಅಣ್ಣನ ಬಳಿ 10 ರೂಪಾಯಿಗಿಂತ ಹೆಚ್ಚು ಕೇಳಿದ್ರೆ ಅಕ್ಷಮ್ಯ ಅಪರಾಧ ಎನ್ನುವ ಪೋಸ್ಟ್​​ವೊಂದು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.
ಪೋಸ್ಟ್​​ನಲ್ಲಿರುವುದು ಏನು?:ನಿಮಗಿದು ಗೊತ್ತೇ ಈ ರಕ್ಷಾಬಂಧನದಂದು ಅಕ್ಕ ತಂಗಿಯರು 10 ರೂಪಾಯಿಗಿಂತ ಹೆಚ್ಚು ಹಣವನ್ನು ತೆಗೆದುಕೊಂಡರೆ ಅವರಿಗೆ 2 ವರ್ಷ ಜೈಲು ಶಿಕ್ಷೆ ಮತ್ತು 10,000 ರೂಪಾಯಿ ದಂಡ ವಿಧಿಸಲಾಗಿದೆ.

10 ರೂ ಗಿಂತ ಹೆಚ್ಚಿ ಹಣವನ್ನು ನಿಮ್ಮ ಅಣ್ಣ, ತಮ್ಮಂದಿರ ಬಳಿ ಕೇಳಿದ್ರೆ 2 ವರ್ಷ ಜೈಲು, 10 ಸಾವಿರ ದಂಡ ಎನ್ನವ ಪೋಸ್ಟ್​​ ವೈರಲ್​ ಆಗುತ್ತಿದೆ. ಈ ಪೋಸ್ಟ್​ವನ್ನು ಅನೇಕರು ತಮ್ಮ ಸಹೋದರಿಯರಿಗೆ ತಮಾಷೆಯಾಗಿ ಕಳಿಸುತ್ತಿದ್ದಾರೆ. ಆದರೆ ಈ ಸುದ್ದಿ ಎಷ್ಟರ ಮಟ್ಟಿಗೆ ಸತ್ಯ ಎನ್ನುವುದು ಮಾತ್ರ ಗೊತ್ತಿಲ್ಲ. ಕೆಲವರು ಇದು ತಮಾಷೆಯಾಗಿ ಹರಿ ಬಿಟ್ಟಿರುವ ಪೋಸ್ಟ್​​ ಎಂದು ಕಾಮೆಂಟ್​​ ಮಾಡುತ್ತಿದ್ದಾರೆ. ಏನೇ ಆಗಲಿ ರಕ್ಷಾಬಂಧನ ದಿನದಂದೂ ಈ ಪೋಸ್ಟ್​​ ಸೋಶಿಯಲ್​​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗುತ್ತಿದೆ.
ರಾಖಿ ಕಟ್ಟು ಸಹೋದರಿಯರಿಗೆ ಏಕೆ ಹಣ, ಗಿಫ್ಟ್​ ನೀಡಬೇಕು? ಹಣ ಕೊಡುವ ಈ ಪದ್ಧತಿ ಏಕೆ ಬಂತು? ಎಂಬುದರ ಬಗ್ಗೆ ನಾವೀಗ ತಿಳಿಯೋಣ…ರಾಖಿ ಕಟ್ಟುವುದರಿಂದ ತಮ್ಮ ಸಹೋದರರಿಗೆ ಸಮೃದ್ಧಿ ತರುವುದಲ್ಲದೆ, ಕಷ್ಟದ ಸಮಯದಲ್ಲಿ ಅವರಿಗೆ ಸಹಾಯ ಮಾಡುತ್ತದೆ ಎಂದು ಹೆಣ್ಣು ಮಕ್ಕಳು ನಂಬಿದ್ದಾರೆ. ಹೀಗಾಗಿ ಅಣ್ಣ-ತಮ್ಮಂದಿರಿಗೆ ರಾಖಿ ಕಟ್ಟಿದ ನಂತರ ಸಹೋದರರೂ ಸಹೋದರಿಯರಿಗೆ ಉಡುಗೊರೆ ನೀಡುತ್ತಾರೆ. ಉಡುಗೊರೆಗಳ ಜೊತೆಗೆ ರಕ್ಷಣೆಯ ಪ್ರತಿಜ್ಞೆಯನ್ನು ಸಹ ಮಾಡಲಾಗುತ್ತದೆ. ಆದರೆ ವಾಸ್ತವವಾಗಿ ಈ ಪದ್ಧತಿ ಪ್ರಾಚೀನ ಕಾಲದಿಂದಲೂ ಮುಂದುವರಿದಿದೆ. ಯಾಕೆಂದರೆ, ಒಂದು ಕಾಲದಲ್ಲಿ ಮಧ್ಯಮ ವರ್ಗದ ಕುಟುಂಬಗಳಲ್ಲಿ ಹೆಣ್ಣು ಮಗುವಿಗೆ ಬೇಗ ಮದುವೆ ಮಾಡಿಸಿ ಗಂಡನ ಮನೆಗೆ ಕಳುಹಿಸುತ್ತಿದ್ದರು.
ಆಗ ಮದುವೆಯಾಗಿ ತವರು ಮನೆ ಬಿಟ್ಟು ಹೋಗುತ್ತಿದ್ದ ಹೆಣ್ಣುಮಕ್ಕಳು ಸಹೋದರರಿಗಾಗಿ ರಕ್ಷಾಬಂಧನದ ದಿನ ಮನೆಗೆ ಬರುತ್ತಿದ್ದರು. ರಾಖಿ ಕಟ್ಟಿದ ಸಹೋದರಿಯರಿಗೆ ಹಣವನ್ನು ಉಡುಗೊರೆಯಾಗಿ ನೀಡಿ ಅವರ ಕಷ್ಟದಲ್ಲಿ ಸಹೋದರರು ಆರ್ಥಿಕವಾಗಿ ಬೆಂಬಲಿಸುತ್ತಿದ್ದರು. ಮೇಲಾಗಿ ತಮ್ಮ ಜೀವಮಾನವಿಡೀ ಯಾವುದೇ ಪರಿಸ್ಥಿತಿಯಲ್ಲಿ ರಕ್ಷಣೆ ಮತ್ತು ಬೆಂಬಲ ನೀಡಲಾಗುವುದು ಎಂದು ಭರವಸೆ ನೀಡುತ್ತಿದ್ದರು. ಅಂದಿನಿಂದ ಅಣ್ಣ-ತಮ್ಮಂದಿರಿಗೆ ರಾಖಿ ಕಟ್ಟಿದಾಗ ಉಡುಗೊರೆ ಕೊಡುವುದು ಒಂದು ಸಂಪ್ರದಾಯವಾಗಿದೆ.
ಆದರೆ, ಇಂದಿನ ದಿನಗಳಲ್ಲಿ ರಾಖಿಯ ದಿನದಂದೇ ಅನೇಕರು ಹಣ ಖರ್ಚು ಮಾಡುತ್ತಾರೆ. ರಾಖಿ ಹಬ್ಬವನ್ನು ಮುಖ್ಯವಾಗಿ ಹಣಕ್ಕಾಗಿ ಆಚರಿಸಲಾಗುತ್ತದೆ ಎಂದು ಹಲವರು ಭಾವಿಸುತ್ತಾರೆ. ಒಂದೇ ಮಾತಿನಲ್ಲಿ ಹೇಳುವುದಾದರೆ ರಾಖಿ ಹಬ್ಬ ಹಣದ ನಿರೀಕ್ಷೆಯ ವಾಣಿಜ್ಯ ಹಬ್ಬವಾಗಿ ಬದಲಾಗಿದೆ. ರಾಖಿ ಕಟ್ಟಿದರೆ ಏನಾದರೂ ಉಡುಗೊರೆ ಸಿಗುತ್ತದೆ ಎಂದು ಬಹುತೇಕರು ಭಾವಿಸಿದ್ದಾರೆ. ಆದರೆ, ವಾಸ್ತವವಾಗಿ ಇದು ಹೆಣ್ಣುಮಕ್ಕಳಿಗೆ ಉಡುಗೊರೆ ರೂಪದಲ್ಲಿ ಕಾಳಜಿ ವಹಿಸಲು ಮುಂದುವರಿಸುತ್ತಿರುವ ಅಭ್ಯಾಸ ಎಂಬುದು ಯಾರಿಗೂ ತಿಳಿದಿಲ್ಲ. ಎಲ್ಲರೂ ಹಣಕ್ಕಾಗಿಯೇ ಹಬ್ಬವನ್ನು ಆಚರಿಸುತ್ತಿದ್ದಾರೆ. ಆದರೆ, ನಿಜವಾಗಿ ಹೇಳುವುದಾದರೆ ಸಹೋದರರ ಶ್ರೇಯೋಭಿವೃದ್ಧಿಗಾಗಿ, ಅವರು ಕ್ಷೇಮವಾಗಲಿ ಎಂದು ಭಾವಿಸಿ ಹೇಗೆ ರಾಖಿ ಕಟ್ಟುತ್ತಾರೋ, ಸಹೋದರರು ಅವರ ಆರ್ಥಿಕ ಅಗತ್ಯಗಳನ್ನು ತಿಳಿದುಕೊಂಡು ತಮ್ಮ ಕೈಲಾದಷ್ಟು ಆರ್ಥಿಕ ಸಹಾಯ ಮಾಡುವುದು ಕೂಡ ವಾಡಿಕೆಯಾಗಿದೆ.
ಸಹೋದರಿ ರಾಖಿ ಕಟ್ಟಿದಾಗ ಗಿಫ್ಟ್​ ಆಗಿ ಹಣ ಕೊಡುವುದೇಕೆ? ಈ ಆಚರಣೆ ಹಿಂದಿರುವ ಉದ್ದೇಶ ಹೀಗಿದೆ….

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seventeen − one =
Remember me
